Local News – ರಾಜ್ಯ ಸರ್ಕಾರಿ ನೌಕರರ ಸಂಘದ 2024 ರಿಂದ 29ನೇ ಸಾಲಿನ 5 ವರ್ಷಗಳ ಅವಧಿಗೆ ಗುಡಿಬಂಡೆ ತಾಲೂಕು ನಿರ್ದೇಶಕರ ಚುನಾವಣೆಯಲ್ಲಿ ಪ್ರಾಥಮಿಕ ಶಿಕ್ಷಕರ ಕ್ಷೇತ್ರದ 4 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಬಾಲಾಜಿ-121, ಕೆ.ವಿ.ನಾರಾಯಣಸ್ವಾಮಿ -119, ಮುನಿಕೃಷ್ಣ -98 ಮತ್ತು ಪಿ.ಎನ್.ರಾಜಶೇಖರ್ 89 ಮತಗಳ ಪಡೆಯುವುದರ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎ.ರವೀಂದ್ರ ಘೋಷಣೆ ಮಾಡಿದರು. ಇನ್ನು ಉಳಿದ ಅಭ್ಯರ್ಥಿಗಳಾದ ಕೃಷ್ಣಪ್ಪ-88 ಮತಗಳು, ನಾರಾಯಣಸ್ವಾಮಿ(ಕಿಡಿ)-81 ಮತಗಳು, ನಾಗಲಿಂಗಪ್ಪ-86 ಮತಗಳು, ಮುರಳಿ ಜೆ.ವಿ-76 ಮತಗಳು ಹಾಗೂ ನಾರಾಯಣಪ್ಪ-10 ಮತಗಳು ಪಡೆದಿದ್ದಾರೆಂದು ತಿಳಿಸಿದ್ದಾರೆ.
23 ಸ್ಥಾನಗಳಿಗೆ ಅವಿರೋಧ ಆಯ್ಕೆ : ಕೃಷಿ ಇಲಾಖೆಯಿಂದ ಎ.ಕೇಶವರೆಡ್ಡಿ, ಪಶು ಸಂಗೋಪನೆ ಇಲಾಖೆಯಿಂದ ಡಿ.ನಟರಾಜ್, ಕಂದಾಯ ಇಲಾಖೆಯಿಂದ ಭಾಗ್ಯಶ್ರೀ, ಜಿ.ಎನ್.ಮಂಜುಳ, ಪಂಚಾಯತ್ ರಾಜ್ ಇಲಾಖೆಯಿಂದ ಎಚ್.ವೆಂಕಟರಮಣಪ್ಪ, ಸರ್ಕಾರಿ ಪ್ರೌಢಶಾಲೆ ವಿಭಾಗದಿಂದ ಬಿ.ಆರ್.ಮಂಜುನಾಥ್, ಸರ್ಕಾರಿ ಶಿಕ್ಷಣ ಇಲಾಖೆಯ ಆಡಳಿತ ಕಚೇರಿಯಿಂದ ಎಂ.ಎನ್.ಹರ್ಷ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ವತಿಯಿಂದ ಪಿ.ವಿ.ವೀಣಾ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಇಲಾಖೆ ವತಿಯಿಂದ ಎಸ್.ಎನ್.ರವೀಂದ್ರ ಕುಮಾರ್, ವಲಯ ಅರಣ್ಯ ಇಲಾಖೆಯಿಂದ ವಿ.ಕನಕರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶಿವಶರಣಪ್ಪ, ಎಚ್.ನರಸಿಂಹಯ್ಯ, ಜೆ.ಎನ್.ಗಂಗಾಧರ ಮತ್ತು ವೈ.ಎ.ಯಾಸ್ಮೀನ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ಕೃಷ್ಣಮೂರ್ತಿ, ಉಪಖಜಾನೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ಎ.ಎಂ.ನಾಗರಾಜು, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಬಿ.ಎನ್.ರಘುಪತಿ, ನ್ಯಾಯಾಂಗ ಇಲಾಖೆಯಿಂದ ಜೆ.ಎಂ.ಸುನಿಲ್, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲ್ಲೂಕು ಪಂಚಾಯತ್ ಕಚೇರಿ, ಸಿಬ್ಬಂದಿ ಹಾಗೂ ಕ್ಷೇತ್ರ ಸಿಬ್ಬಂದಿ 2 ಸ್ಥಾನಗಳಿಗೆ ಜೈಬುನ್ನೀಸಾ ಮತ್ತು ರಾಮಾಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸಿ.ಎ.ಶಾರದಮ್ಮ, ಉಪನೊಂದಣಿ ಮತ್ತು ಮುದ್ರಾಂಕಗಳ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯಿಂದ ಎಂ.ಕೆ.ಗಾಯತ್ರಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಸ್.ಎನ್.ನಾಗೇಂದ್ರ ಒಟ್ಟು 23 ಸ್ಥಾನಗಳಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಈ ವೇಳೆ ಹಾಲಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಬಣದಿಂದ 3 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ನಮ್ಮ ಬಣಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.