Local News : ವಿಕಲಚೇತನರಿಗೆ ಅವಕಾಶಗಳನ್ನು ಕಲ್ಪಿಸಬೇಕು: ನ್ಯಾ.ಮಂಜುನಾಥಚಾರಿ

Local News – ವಿಕಲಚೇತನರ ಬಗ್ಗೆ ಅನುಕಂಪ ತೋರುವ ಬದಲಿಗೆ ಅವರಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕೆಲಸಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಮಂಜುನಾಥಚಾರಿ ಕರೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ಮತ್ತು ವಿಕಲಚೇತನರ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಕಲಚೇತನರ ಬಗ್ಗೆ ಯಾವುದೇ ಕಾರಣಕ್ಕೂ ಅವಹೇಳನ ಮಾಡುವಂತಹ ಮನೋಭಾವವನ್ನು ಬಿಟ್ಟು ಅವರಿಬೆ ಬೆಂಬಲ ಮಾಡುವಂತಹ ಕೆಲಸಕ್ಕೆ ಮುಂದಾಗಬೇಕು. ದೇವರು ನಮಗೆ ಕೈ ಕಾಲ ಪ್ರತಿಯೊಂದು ಶಕ್ತಿಯನ್ನು ಕೊಟ್ಟಿದ್ದಾನೆ. ಶಕ್ತಿಯ ನೆರವು ಇರುವವರು ಆ ಶಕ್ತಿಯನ್ನು  ವಿಕಲ ಚೇತನರಿಗೆ ತುಂಬುವಂತಹ ಕೆಲಸ ಮಾಡಬೇಕು. ಮನುಷ್ಯ ಸಹಕಾರ ಮಾಡಿ ಜೀವನ ಮಾಡಬೇಕು  ದೇವರು ಎಲ್ಲವನ್ನು ಕೊಟ್ಟಿದ್ದಾನೆ ನಾನು ಒಬ್ಬನೇ ಬದುಕಬೇಕು ಎನ್ನುವುದನ್ನು ಮನಸಿನಿಂದ ತೊಲಗಿಸಿ ಬಾಳಬೇಕೆಂದರು.

disability day in bagepalli

ವಿಕಲಚೇತನರಿಗೆ ಬೇಕಾಗಿರುವುದು ಅನುಕಂಪವಲ್ಲ ಅವರಿಗೆ ಬೇಕಾಗಿರುವುದು ಅವಕಾಶಗಳು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ವಿಷೇಶ ಸ್ಥಾನ ಮಾನಗಳನ್ನು ಮುಂಚೂಣಿಯಲ್ಲಿ ಇಡಬೇಕಾದ ಅಗತ್ಯವಿದೆ.  ವಿಕಲಚೇತನರಿಗೆ ಅವಕಾಶಗಳನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದ ಅವರು  ವಿಕಲಚೇತನರು  ಅಂಗಾಂಗಳ ವಿಫಲತೆಯಿಂದ ಬಳಲುತ್ತಿದ್ದಾಯೇ ಹೊರತು ಅವರಲ್ಲಿ ವಿಚಾರ ಶಕ್ತಿ, ಜ್ಞಾನ, ವಿದ್ಯೆ ಇತ್ಯಾಧಿಗಳಿಗೆ ಯಾವುದೇ ಕೊರತೆ ಇರಲ್ಲ,  ಅವರಿಗೆ ಅಗತ್ಯ ಸೌಲಭ್ಯಗಳನ್ನು ಹಾಗೂ ಅವಕಾಶಗಳನ್ನು ಕಲ್ಪಿಸಿದರೆ ಅವರು ನಮಗಿಂತ ಪ್ರಭಲರಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೂ ಏಡ್ಸ್ ಅತ್ಯಂತ ವಿನಾಶಕಾರಿ ಕಾಯಿಲೆಯಾಗಿದ್ದು ಈ ಸೊಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ಎಡ್ಸ್ ಬಗ್ಗೆ ಜನರು ಭಯಪಡಬೇಕಾದ ಅಗತ್ಯವಿಲ್ಲ ಆದರೆ ಎಚ್ಚರವಹಿಸಬೇಕು, ಜಾಗೃತರಾಗಿರಬೇಕು ಎಂದ ಅವರು  ಸೊಂಕಿತರನ್ನು ಯಾವುದೇ ಕಾರಣಕ್ಕೂ ಕೀಳರಿಮೆಯಿಂದ ಕಾಣಬೇಡಿ ಅವರಿಗೆ ಬೆಂಬಲವಾಗಿ ನಿಲ್ಲುವಂತಾಗಬೇಕೆಂದರು. ಈ ವೇಳೆ ಟಿ.ಹೆಚ್,ಓ ಡಾ.ಸತ್ಯನಾರಾಯಣರೆಡ್ಡಿ, ಸಿಡಿಪಿ ರಾಮಚಂದ್ರ, ಪ್ರಾಂಶುಪಾಲ ನಂಜಿರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಕಾರ್ಯದರ್ಶಿ ಪ್ರಸನ್ನಕುಮಾರ್, ವಕೀಲರಾದ ವೆಂಕಟೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Next Post

Supreme Court Jobs: ಪದವಿಧರರಿಗೆ ಸುಪ್ರೀಂ ಕೋರ್ಟ್ ನಲ್ಲಿದೆ ವಿವಿಧ ಹುದ್ದೆಗಳು, ಡಿ.25 ರೊಳಗೆ ಅರ್ಜಿ ಸಲ್ಲಿಸಿ…!

Wed Dec 11 , 2024
Supreme Court Jobs – ಸುಪ್ರೀಂ ಕೋರ್ಟ್‌ನಲ್ಲಿ ಖಾಲಿಯಿರುವು 107 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು, ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕೋರ್ಟ್ ಮಾಸ್ಟರ್‍, ಸೀನಿಯರ್‍ ಪರ್ಸನಲ್ ಅಸಿಸ್ಟೆಂಟ್ ಹಾಗೂ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆರಂಭವಾಗಿದೆ. ಡಿ.25 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ […]
Supreme Court of India jobs 107 posts
error: Content is protected !!