Local News – ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿರುವ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ನಡೆದಿದ್ದು, ಚುನಾವಣೆಯ ಮೂಲಕ 10 ನಿರ್ದೇಶಕರು ಹಾಗೂ ಇಬ್ಬರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಮಂಜುನಾಥ್ ತಿಳಿಸಿದರು.
ಭಾನುವಾರ ನಡೆದ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ 5 ಜನ, ಪರಿಶಿಷ್ಟ ಪಂಗಡ ಸ್ಥಾನಕ್ಕೆ 3, ಹಿಂದುಳಿದ ಪ್ರವರ್ಗ ಬಿ ಸ್ಥಾನಕ್ಕೆ 2, ಹಿಂದುಳಿದ ಪ್ರವರ್ಗ ಎ ಸ್ಥಾನಕ್ಕೆ 2, ಮಹಿಳಾ ಮೀಸಲು ಸ್ಥಾನಕ್ಕೆ 3 ಅಭ್ಯರ್ಥಿಗಳು, ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರಕ್ಕೆ 2 ನಾಮಪತ್ರ ಸಲ್ಲಿಕೆಯಾಗಿದ್ದು, ಸಾಮಾನ್ಯ ಸ್ಥಾನಕ್ಕೆ ಬಲರಾಮಪ್ಪ, ಮಾರಪ್ಪರೆಡ್ಡಿ, ನಾರಾಯಣಸ್ವಾಮಿ, ಸಿದ್ದಪ್ಪ, ಬಿ.ಎಸ್.ಶ್ರೀನಿವಾಸ, ಹಿಂದುಳಿದ ಪ್ರವರ್ಗ-ಎ ಸ್ಥಾನಕ್ಕೆ ನಾರಾಯಣಪ್ಪ, ಹಿಂದುಳಿದ ಪ್ರವರ್ಗ ಬಿ ಸ್ಥಾನಕ್ಕೆ ಚೌಡಪ್ಪ, ಮಹಿಳಾ ಮೀಸಲು ಚಿಕ್ಕಮ್ಮ, ಮಧುಶ್ರೀ, ಪರಿಶಿಷ್ಟ ಜಾತಿ ಸ್ಥಾನಕ್ಕೆ ವೆಂಕಟನರಸಪ್ಪ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಗೋಪಾಲಪ್ಪ, ಠೇವಣಿದಾರರ ಸ್ಥಾನಕ್ಕೆ ಪಿ.ಎ. ನಾಗರಾಜರೆಡ್ಡಿ ಆಯ್ಕೆಯಾಗಿದ್ದಾರೆ.
ಈ ವೇಳೆ ನಿರ್ದೇಶಕ ಪಿ.ಎ.ನಾಗರಾಜರೆಡ್ಡಿ ಮಾತನಾಡಿ ಇಂದು ನಡೆದ ಚುನಾವಣೆಯಲ್ಲಿ ಬಹುತೇಕ ನಮ್ಮ ಬೆಂಬಲಿತರೇ ಆಯ್ಕೆಯಾಗಿದ್ದು, ಮುಂದಿನ ಅಧ್ಯಕ್ಷ ಚುನಾವಣೆಯಲ್ಲಿ ನಮ್ಮ ಬಣ ಅಧ್ಯಕ್ಷ ಸ್ಥಾನ ಪಡೆಯಲಿದ್ದಾರೆ. ಕೃಷಿಕರಿಗೆ ನಮ್ಮ ಸಂಘದ ಮೂಲಕ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕೆಲಸ ಮಾಡುತ್ತೇವೆ ಎಂದರು. ಬಳಿಕ ಮುಖಂಡ ಬಾಲೇನಹಳ್ಳಿ ರಮೇಶ್ ಮಾತನಾಡಿ, ರೈತರು ಹಾಗೂ ಷೇರುದಾರರಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ರೈತರಿಗೆ ಸಾಲ ಸೌಲಭ್ಯಗಳನ್ನು ದೊರಕಿಸಿಕೊಡಲು ಈ ನಿರ್ದೇಶಕರು ಶ್ರಮಿಸಲಿದ್ದಾರೆ. ಬಹುತೇಕ ಎಲ್ಲಾ ನಿರ್ದೇಶಕರು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ, ಪಕ್ಷಾತೀತವಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ ಎಲ್ಲರಿಗೂ ಶುಭಾಷಯಗಳು ಎಂದರು.
ಇನ್ನೂ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಮುಖಂಡರಾದ ಬೈರಪ್ಪ, ನಂದೀಶ್, ಜೀವಿಕ ನಾರಾಯಣಸ್ವಾಮಿ, ಅಶ್ವತ್ಥಪ್ಪ, ಜಗದೀಶ್, ವೆಂಕಟೇಶಪ್ಪ, ಬಾಲೇನಹಳ್ಳಿ ರಮೇಶ್, ಅಂಜಿನಪ್ಪ, ರಾಮಾಂಜಿ, ನಿಸಾರ್, ಸುರೇಶ್, ಚಿನ್ನಪ್ಪಯ್ಯ ಸೇರಿ ಹಲವರು ಅಭಿನಂದಿಸಿದರು.