Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಸಿರು ಕ್ರಾಂತಿ ಹರಿಕಾರ ಡಾ ಬಾಬು ಜಗಜೀವನ್ ರಾಂ ರವರ 39ನೇ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಮಯದಲ್ಲಿ ಡಾ.ಬಾಬು ಜಗಜೀವನ್ ರಾಂ ರವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವ ಸಲ್ಲಿಸಲಾಯಿತು.
Local News – ಮಹನೀಯರ ಆದರ್ಶಗಳನ್ನು ಪಾಲನೆ ಮಾಡಬೇಕು : ಸಿಗ್ಬತ್ತುಲ್ಲಾ
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಡಾ. ಬಾಬು ಜಗಜೀವನ್ ರಾಮ್ ಅವರು ಬಾಲ್ಯದಿಂದಲೂ ಅನೇಕ ಕಷ್ಟಗಳನ್ನು ಎದುರಿಸಿ ಶಿಕ್ಷಣ ಪಡೆದವರು. ಜಾತಿ ತಾರತಮ್ಯದ ವಿರುದ್ಧ ನಿರಂತರವಾಗಿ ಹೋರಾಡಿದರು. ನಂತರ ರಾಜಕೀಯಕ್ಕೆ ಪ್ರವೇಶಿಸಿ ಕೇಂದ್ರ ಸಚಿವರಾಗಿ, ಬಡವರು, ದಲಿತರು ಮತ್ತು ಕಾರ್ಮಿಕರ ಜೀವನ ಸುಧಾರಣೆಗೆ ಮಹತ್ತರ ಕೊಡುಗೆ ನೀಡಿದರು. ಅವರ ಆದರ್ಶಗಳನ್ನು ಇಂದಿನ ಸಮಾಜದ ಜನರು ಅಳವಡಿಸಿಕೊಂಡರೆ ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯ. ಜಗಜೀವನ್ ರಾಮ್ ಅವರು ಮೇಲು ಕೀಳೆಂಬ ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದರು. ಸಾಮಾಜಿಕ ಬದಲಾವಣೆಗಾಗಿ ಹೋರಾಡಿದರು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಅವರ ಮಾರ್ಗದರ್ಶನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು.
Local News – ಮಹನೀಯರನ್ನು ಸದಾ ಸ್ಮರಿಸಬೇಕು : ಆದಿನಾರಾಯಣಪ್ಪ
ನಂತರ ದಲಿತ ಮುಖಂಡ ಹಂಪಸಂದ್ರ ಆದಿನಾರಾಯಣಪ್ಪ ಮಾತನಾಡಿ, ಡಾ.ಬಾಬು ಜಗಜೀವನ್ ರಾಂ ರವರನ್ನು ನಾವೆಲ್ಲರೂ ಇಂದು ಸ್ಮರಿಸಬೇಕಾದ ಅಗತ್ಯತೆಯಿದೆ. ಇಂದಿರಾಗಾಂಧಿ ರವರು ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ನೇರವಾಗಿ ವಿರೋಧಿಸಿದಂತಹ ನಾಯಕ ಜಗಜೀವನ್ ರಾಂ ರವರು. ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತಿ ಪಡೆದುಕೊಂಡು ದೇಶದ ಜನರ ಹಸಿವು ನೀಗಿಸಿದರು. ಆದರೆ ಇಂದು ಅವರ ಹೆಸರು ಹೇಳಿಕೊಂಡು ಅನೇಕರು ಬದುಕುತ್ತಿದ್ದಾರೆ. ಅದನ್ನು ಬಿಟ್ಟು ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದರು.
Read this also : ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳ ಭಾಗ್ಯ: ಪಸುಪಲೋಡು ಶಾಲೆಯಲ್ಲಿ ಅರ್ಪಣಾ ಸೇವಾ ಸಂಸ್ಥೆಯ ನೆರವಿನ ಹಸ್ತ..!
Local News – ಜಗಜೀವನ್ ರಾಮ್ ಸ್ಮರಣೆಯಲ್ಲಿ ಕ್ರಾಂತಿ ಗೀತೆಗಳ ಮೊಳಗು
ಈ ವೇಳೆ ದಲಿತ ಕಲಾ ಮಂಡಳಿಯವರಿಂದ ಜಗಜೀವನ್ ರಾಂ ರವರ ಕುರಿತು ಕ್ರಾಂತಿ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ರೇಷ್ಮೇ ಇಲಾಖೆ ಅಧಿಕಾರಿ ಗಂಗರಾಜು , ತಾಲೂಕು ಪಂಚಾಯಿತ್ತಿ ಶಿವಶಂಕರ , ಪಶು ಸಂಗೋಪನಾ ಇಲಾಖೆ ಸುಬ್ರಮಣಿ, ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಶ್ರೀರಾಮಪ್ಪ ,ದಲಿತ ಮುಖಂಡರು ಸೇರಿದಂತೆ ಹಲವರಿದ್ದರು.