Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಪರ ಹೋರಾಟಗಾರರ ಸಂಘದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಹೊಸ ಸಂಘಟನೆ ತಾಲೂಕಿನಲ್ಲಿ ರೈತಪರ ಕೆಲಸಗಳನ್ನು ಮಾಡಬೇಕು ಎಂದು ರಾಜ್ಯ ಘಟಕ ಸೂಚನೆ ನೀಡಿತು.
Local News – ರೈತರ ಪರ ನಿರಂತರ ಹೋರಾಟ
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಪರ ಹೋರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ ಮುದ್ದುಕೃಷ್ಣ ಮಾತನಾಡಿ ರೈತರ ಸಮಸ್ಯೆ ನೂರಾರು ಇವೆ ಆ ಎಲ್ಲಾ ಸಮಸ್ಯೆಗಳನ್ನು ಕೈಗೆ ಎತ್ತಿಕೊಂಡು ರೈತರನ್ನು ಒಂದು ಮಾಡಿಕೊಂಡು ನಿರಂತರವಾಗಿ ಚಳುವಳಿ ಹೋರಾಟಗಳನ್ನು ನಡೆಸುತ್ತೇವೆ. ಕೈಗಾರಿಕೀಕರಣದ ಭರಾಟೆಯಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರಗಳು ಕೈಗಾರಿಕೆಗಳಿಗೆ ಬಳಸಲು ಮುಂದಾಗುತ್ತಿರುವುದು ಗಂಭೀರ ವಿಷಯ. ಮುದ್ದುಕೃಷ್ಣ ಅವರು ಈ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದರು. “ಇದು ಸರಿಯಾದ ಕ್ರಮವಲ್ಲ. ರೈತ ಇದ್ದರೆ ಎಲ್ಲವೂ ಇದೆ. ರೈತ ಇಲ್ಲದಿದ್ದರೆ ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಅನ್ನ-ಆಹಾರವಿಲ್ಲ. ಆದ್ದರಿಂದ ಸರ್ಕಾರಗಳು ರೈತರನ್ನು ರಕ್ಷಿಸಬೇಕಾಗಿದೆ” ಎಂದು ಅವರು ಒತ್ತಿ ಹೇಳಿದರು.
Local News – ಹೊಸ ಪದಾಧಿಕಾರಿಗಳ ನೇಮಕ
ಈ ಸಮಾರಂಭದಲ್ಲಿ ಹೊಸ ಪದಾಧಿಕಾರಿಗಳ ನೇಮಕವು ರೈತ ಹೋರಾಟಕ್ಕೆ ಹೊಸ ಹುರುಪನ್ನು ನೀಡಿದೆ.
- ತಾಲ್ಲೂಕು ಅಧ್ಯಕ್ಷರಾಗಿ: ಅಮರನಾರಾಯಣಪ್ಪ
- ಮಹಿಳಾ ಘಟಕದ ಅಧ್ಯಕ್ಷರಾಗಿ: ಅಂಬಿಕಾ
- ಜಿಲ್ಲಾ ಉಪಾಧ್ಯಕ್ಷರಾಗಿ: ಗಾಂಧಿ ಶ್ರೀನಿವಾಸ್
Read this also : ಚೆಕ್ ಬೌನ್ಸ್‌ನ ಗಂಭೀರ ಪರಿಣಾಮಗಳು: ನಿಮ್ಮ CIBIL ಸ್ಕೋರ್‌ಗೆ ಕಾದಿದೆ ಕಂಟಕ….!
ಇವರನ್ನು ನೇಮಕ ಮಾಡಲಾಗಿದ್ದು, ಅವರಿಗೆ ರಾಜ್ಯ ಉಪಾಧ್ಯಕ್ಷ ಹೆಬ್ಬರಿ ಮುನಿಯಪ್ಪ ಅವರು ಆದೇಶ ಪ್ರತಿಗಳನ್ನು ನೀಡಿದರು.
Local News – ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಮುಖರು
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹೆಬ್ಬರಿ ಮುನಿಯಪ್ಪ, ಕೃಷ್ಣ, ಅಂಬಿಕಾ, ಅಮರನಾರಾಯಣ, ಮುನಿಕೃಷ್ಣನಾಯಕ್, ಗಾಂಧೀ ಶ್ರೀನಿವಾಸ್, ಕೆ ವಿ ಮುನಿಯಪ್ಪಸ್ವಾಮಿ, ರಾಮಕೃಷ್ಣಪ್ಪ, ಮಂಜುನಾಥ್, ಜಗನ್ನಾಥ್ ಸೇರಿದಂತೆ ಹಲವರು ಇದ್ದರು.