Viral Video – ನಗರ ಪ್ರದೇಶಗಳಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ. ಅರಣ್ಯ ನಾಶದಿಂದಾಗಿ ಆಹಾರ ಅರಸಿ ನಾಡಿಗೆ ಬರುವ ಪ್ರಾಣಿಗಳು ಮನುಷ್ಯರೊಂದಿಗೆ ಸಂಘರ್ಷಕ್ಕೆ ಇಳಿಯುವುದು ಹೊಸದೇನಲ್ಲ. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ನಿಜಕ್ಕೂ ಎದೆ ಝಲ್ ಎನಿಸುವಂತಿದೆ. ಮಲಗಿದ್ದ ವ್ಯಕ್ತಿಯೊಬ್ಬನ ಪಕ್ಕದಲ್ಲೇ ಒಂದು ಸಿಂಹಿಣಿ ರಾಜಾರೋಷವಾಗಿ ನಡೆದುಹೋಗಿದೆ. ಈ ವಿಡಿಯೋ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Viral Video – ಸಿಂಹಿಣಿಯ ಸಾಹಸ, ವ್ಯಕ್ತಿಯ ನಿರ್ಲಕ್ಷ್ಯ!
ಸಾಮಾನ್ಯವಾಗಿ ಸಿಂಹ ಎಂದರೆ ಒಂದು ರೀತಿಯ ಭಯ ಇರುತ್ತದೆ. ಅಂತಹ ಸಿಂಹ ಪಕ್ಕದಲ್ಲೇ ನಡೆದುಹೋದರೂ ಮಲಗಿದ್ದ ವ್ಯಕ್ತಿಗೆ ಅದರ ಅರಿವಿಲ್ಲ. ಈ ವಿಡಿಯೋದಲ್ಲಿ ಪುಟ್‌ಪಾತ್‌ನಲ್ಲಿ ಒಬ್ಬ ವ್ಯಕ್ತಿ ಗಾಢ ನಿದ್ರೆಯಲ್ಲಿದ್ದಾನೆ. ಅವನ ಪಕ್ಕದಲ್ಲೇ ಒಂದು ಸಿಂಹಿಣಿ ಯಾವುದೇ ಶಬ್ದ ಮಾಡದೆ, ಆತನ ಕಡೆಗೆ ತಿರುಗಿಯೂ ನೋಡದೆ ಸದ್ದಿಲ್ಲದೆ ನಡೆದುಹೋಗಿದೆ. ಈ ವಿಡಿಯೋ ನೋಡಿದವರಿಗೆ ನಿಜಕ್ಕೂ ಆಶ್ಚರ್ಯ ಮತ್ತು ಆತಂಕ ಒಟ್ಟಿಗೆ ಶುರುವಾಗಿದೆ.
Read this also : ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರೇ ಎಚ್ಚರ, ಮಗು ಎತ್ತಿಕೊಂಡು ಬಂದು ನಿಮ್ಮ ಪರ್ಸ್ ಎಗಿರಿಸುತ್ತಾರೆ ಎಚ್ಚರ…!
Viral Video – ವಿಡಿಯೋ ವೈರಲ್
@KreatelyMedia ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜೂನ್ 7 ರಂದು ಅಪ್‌ಲೋಡ್ ಆದ ಈ ವಿಡಿಯೋ ಕೆಲವೇ ದಿನಗಳಲ್ಲಿ 1.2 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
Viral Video – ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು “ಇದು ಕೃತಕ ಬುದ್ಧಿಮತ್ತೆ (AI) ಯಿಂದ ಸೃಷ್ಟಿಸಲಾದ ವಿಡಿಯೋ ಇರಬಹುದು” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು “ಈ ವ್ಯಕ್ತಿ ವಿಡಿಯೋ ನೋಡಿದರೆ ಇನ್ನೆಂದಿಗೂ ಪುಟ್‌ಪಾತ್‌ನಲ್ಲಿ ಮಲಗುವ ಸಾಹಸ ಮಾಡಲ್ಲ” ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ “ಇದು ಗುಜರಾತ್‌ನಲ್ಲಿ ನಡೆದಿರಬಹುದು, ಅಲ್ಲಿ ಇಂತಹ ದೃಶ್ಯಗಳು ಸಾಮಾನ್ಯ” ಎಂದು ಊಹಿಸಿದ್ದಾರೆ.
Viral Video – ವನ್ಯಜೀವಿ ಮತ್ತು ಮಾನವ ಸಂಘರ್ಷದ ಆತಂಕ
ಈ ಘಟನೆ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಮತ್ತೊಮ್ಮೆ ಚಿಂತಿಸುವಂತೆ ಮಾಡಿದೆ. ಮಾನವನ ಅತಿಕ್ರಮಣದಿಂದ ಕಾಡು ನಾಶವಾಗಿ, ಪ್ರಾಣಿಗಳು ತಮ್ಮ ಆವಾಸಸ್ಥಾನ ಕಳೆದುಕೊಂಡು ನಗರ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಇಂತಹ ಘಟನೆಗಳು ಹೆಚ್ಚಾದರೆ, ಮಾನವ-ವನ್ಯಜೀವಿ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರೂ ಗಂಭೀರವಾಗಿ ಯೋಚಿಸಬೇಕು.