ಬಾಗೇಪಲ್ಲಿ: ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಕುಟುಂಬಗಳಿಗೆ ಭದ್ರತೆ, ಉಚಿತ ಆರೋಗ್ಯ ಮತ್ತು ಶಿಕ್ಷಣ ಇತ್ಯಾಧಿ ಸೌಲಭ್ಯಗಳನ್ನು ಒದಗಿಸುವಂತೆ ತಾಲೂಕು ಕಾರ್ಯಮಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪಿ.ಮಂಜುನಾಥರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರ ಸಂಘದ ಸದಸ್ಯರಿಗೆ ಶೈಕ್ಷಣಿಕ ಮತ್ತು ಆರೋಗ್ಯಕ್ಕಾಗಿ ಆರ್ಥಿಕ ನೆರವು ಹಾಗೂ ಜೀವ ವಿಮೆ ಪಾಲಿಸಿ ಬಾಂಡ್ ವಿತರಿಸಿ ಮಾತನಾಡಿ, ಮಾಧ್ಯಮ ರಂಗವನ್ನು ನಾಲ್ಕನೇ ಅಂಗ ಎಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರಿಗೆ ಹಾಗೂ ಪತ್ರಿಕೆ ವಿತರಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
Get the Best Price at IndiaMART for click this link : ಇಲ್ಲಿ ಕ್ಲಿಕ್ ಮಾಡಿ
ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಸೂಕ್ತ ಭದ್ರತೆ ಇಲ್ಲ, ಪತ್ರಿಕಾ ಕ್ಷೇಮಾಭಿವೃದ್ದಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ತಂದಿದೆಯಾದರು ಅದು ಅನುಷ್ಠಾನಕ್ಕೆ ಬಂದಿಲ್ಲ, ನಮ್ಮನ್ನಾಳುವ ಯಾವುದೇ ಸರ್ಕಾರಗಳು ಪತ್ರಕರ್ತರ ಭದ್ರತೆ ಹಾಗೂ ಸರ್ಕಾರಿ ಸೌಲತ್ತುಗಳನ್ನು ನೀಡಲು ಮೀನಾ ಮೇಷಾ ಎಣಿಸುತ್ತಿವೆ ಎಂದ ಅವರು ನೆರೆಯ ಆಂಧ್ರದ ಮಾಧರಿಯಂತೆ ರಾಜ್ಯದಲ್ಲಿ ಪತ್ರಕರ್ತರಿಗೆ ಹಾಗೂ ಅವರ ಕುಟುಂಬಗಳಿಗೆ ಉಚಿತ ಆರೋಗ್ಯ, ಶಿಕ್ಷಣ, ಭದ್ರತೆ ಇತ್ಯಾಧಿ ಸೌಲಭ್ಯಗಳನ್ನು ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜೆ.ವಿ.ಚಲಪತಿ, ಕಾರ್ಯಕಾರಣಿ ಸದಸ್ಯರಾದ ಜೆ.ಕೆ ಆನಂದ್, ಬಿ.ಟಿ.ಚಂದ್ರಶೇಖರರೆಡ್ಡಿ, ಸೈಯದ್ ಸಿದ್ದೀಕ್, ತಾಲೂಕು ಉಪಾಧ್ಯಕ್ಷ ರಾಮಚಂದ್ರಪ್ಪ, ಖಜಾಂಚಿ ಜಿ. ರಾಮಕೃಷ್ಣ, ನಿಕಟಪೂರ್ವ ಅಧ್ಯಕ್ಷರಾದ ಡಿ.ಎನ್.ಕೃಷ್ಣಾರೆಡ್ಡಿ, ಬಿ.ಆರ್.ಕೃಷ್ಣ, ಸದಸ್ಯರಾದ ಪಿಎಸ್.ರಾಜೇಶ್, ಎಸ್. ಶಂಕರ್ ರಾವ್, ಬಿ.ಎಸ್.ಸುರೇಶ್, ಎಸ್.ಎಸ್.ಶ್ರೀನಿವಾಸ್, ಮಣಿಕಂಠ, ಗೋಪಾಲರೆಡ್ಡಿ, ಡಿ.ವಿ.ಮಂಜುನಾಥ್, ವೆಂಕಟೇಶ್, ಗುರುಮೂರ್ತಿ, ಕರೀಂಸಾಬ್, ಮುನೀರ್ ಅಹಮ್ಮದ್, ಮುನಿರಾಜು, ನರಸಿಂಹಯ್ಯ, ಲೋಕೇಶ್ ಮತ್ತಿತರರು ಇದ್ದರು.