Gruha Lakshmi – ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೇಸ್ ಪಕ್ಷ ಘೋಷಣೆ ಮಾಡಿದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಒಂದಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆ ಎಂಬ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿತ್ತು. ಅಧಿಕಾರಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳನ್ನು ಸಹ ಜಾರಿ ಮಾಡಿ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದೂ ಸಹ ಹೇಳಿಕೊಂಡಿದೆ. ಇನ್ನೂ ಗೃಹಲಕ್ಷ್ಮೀ ಯೋಜನೆಯಡಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ 2 ತಿಂಗಳ ಕಂತು ಬಾರದ ಕಾರಣ ಈ ಕುರಿತು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆಗಿ ಬೇಜವಬ್ದಾರಿ ಉತ್ತರ ನೀಡಿದ್ದಾರೆ.
ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯದಾ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ಮಹಿಳೆಯರ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದರೆ ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಹಣ ಇನ್ನೂ ಮಹಿಳೆಯರ ಖಾತೆಗೆ ಹಾಕಿರಲಿಲ್ಲ. ಈ ಕಾರಣದಿಂದ ಅನೇಕರು ಇನ್ನೂ ಏಕೆ ಹಣ ಬಂದಿಲ್ಲ ಎಂದು ಕಾಯುತ್ತಿದ್ದಾರೆ. ಈ ಕುರಿತು ಮಾದ್ಯಮದವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಪ್ರಶ್ನೆ ಮಾಡಿದಕ್ಕೆ ಗರಂ ಆದ ಸಚಿವೆ ಉಡಾಫೆ ಉತ್ತರ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಗೃಹಲಕ್ಷ್ಮೀ ಕಂತಿನ ಬಗ್ಗೆ ಕೇಳಿದಾಗ ಇನ್ನೆರಡು ದಿನಗಳಲ್ಲಿ ಹಣ ಜಮೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ ಇದೀಗ ಆಕೆ ಅದೇ ಪ್ರಶ್ನೆ ಕೇಳಿದ್ದಕ್‌ಎಕ ಉಡಾಫೆ ಉತ್ತರ ನೀಡಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯಡ ಎರಡು ತಿಂಗಳ ಕಂತಿನ ಬಗ್ಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಗೃಹಲಕ್ಷ್ಮೀಯನ್ನು ಮನೆ ಮನೆಗೆ ತಲುಪಿಸಬೇಕು. ಒಂದು ತಿಂಗಳ ಹಣ ಬರದೇ ಇದ್ದರೇ 500 ಕರೆಗಳು ಬರುತ್ತವೆ. ಒಂದು ತಿಂಗಳ ಕಂತು ಬರದೇ ಇದ್ದಾಗ ಮುಂದಿನ ತಿಂಗಳು ಬರಲ್ಲ ಅಂತಾ ವಿಪಕ್ಷಗಳು ಹೇಳುತ್ತಾರೆ. ನಾವೆಲ್ಲರ ಭ್ರಷ್ಟರಲ್ಲಾ, ವಚನ ಇಟ್ಟುಕೊಂಡವರು. ನಂತರ ಪ್ರತಿ ತಿಂಗಳು ಗೃಹಲಕ್ಷ್ಮೀ ಕಂತಿನ ಹಣ ಏಕೆ ಬರೋಲ್ಲ ಎಂದು ಪ್ರಶ್ನೆ ಎದುರಾದಾಗ ಮಾದ್ಯದವರಿಗೆ ಎದುರು ಪ್ರಶ್ನೆ ಕೇಳಿದ್ದಾರೆ. ನಿಮಗೆ ಪ್ರತಿ ತಿಂಗಳ ಸರಿಯಾಗಿ ಸಂಬಳ ಕೊಡ್ತಾರಾ, ಕೆಲವೊಂದು ಸರ್ಕಾರಿ ಸಂಸ್ಥೆಗಳಲ್ಲಿ ಎರಡು ಮೂರು ತಿಂಗಳ ಬಳಿಕ ಸಂಬಳ ಕೊಡ್ತಾರೆ. ನಮಗೆ ಎಲ್ಲಾ ಗೊತ್ತು. ಕೆಲವೊಮ್ಮೆ ಸಂಬಳ ಬರೋದು ಎರಡು ತಿಂಗಳಾಗುತ್ತೆ. ಅದಕ್ಕೆ ಈ ತಿಂಗಳದ್ದು ಮುಂದಿನ ತಿಂಗಳು ಕೊಡ್ತೀವಿ ಎಂದಿದ್ದಾರೆ.