Kodi Sri – ಕೇರಳದ ವಯನಾಡಿನಲ್ಲಿ ಭಾರಿ ಗುಡ್ಡ ಕುಸಿತವಾಗಿದ್ದು, ಇದರಿಂದಾ ಭಾರಿ ಅನಾಹುತ ಸೃಷ್ಟಿಯಾಗಿದೆ. ಸುಮಾರು ಮಂದಿ ಸಾವನ್ನಪ್ಪಿದ್ದು, ಅನೇಕರು ಭೂ ಕುಸಿತದಲ್ಲಿ ಸಿಲುಕಿದ್ದು, ರಕ್ಷಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕೇರಳದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆಯನ್ನು ಸಹ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಈ ಕುರಿತು (Kodi Mutt Shivayogi Rajendra Swamiji) ಕೋಡಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿದ್ದು, ವಯನಾಡಿನಲ್ಲಿ ಈ ರೀತಿಯ ದುರಂತ ಆಗುತ್ತೆ ಅಂತಾ ನಾನು 20 ದಿನಗಳ ಹಿಂದೆಯೇ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಾದ್ಯಮಗಳೊಂದಿಗೆ (Kodi Sri) ಕೋಡಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕೇರಳದ ಜಳಸ್ಪೋಟದ ಬಗ್ಗೆ ಮಾತನಾಡಿದರು. ನಾನು ಕಳೆದ 20 ದಿನಗಳ ಹಿಂದೆಯೇ ಈ ರೀತಿಯಾಗುತ್ತದೆ ಎಂದು ಹೇಳಿದ್ದೆ. ಮಳೆಯಾಗುತ್ತೆ, ಗುಡ್ಡು ಉರುಳುತ್ತೆ, ಜನರು ಸಾಯ್ತಾರೆ, ರೋಗ-ರುಜಿನಗಳು ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಇದು ಭಾರತಕ್ಕೆ ಮಾತ್ರ ಸೀಮಿತವಾಗಿ ಹೇಳಿಲ್ಲ, ಬದಲಿಗೆ ಜಾಗತಿಕ ಮಟ್ಟದಲ್ಲಿ ಕೆಲ ರಾಜ್ಯಗಳು ಮುಳುಗುತ್ತವೆ ಎಂದು ಹೇಳಿದ್ದೆ. ನನ್ನ ಪ್ರಕಾರ ಅಮಾವಾಸ್ಯೆಯವರೆಗೆ ಮಳೆಯಿರುತ್ತದೆ. ಬಳಿಕ ಬೇರೆ ಭಾಗಕ್ಕೆ ಹೋಗುತ್ತದೆ. ಇದು ಕ್ರೋಧಿನಾಮ ಸಂವತ್ಸರವಾಗಿದೆ. ಕ್ರೋಧಿ ಎಂದರೇ ಸಿಟ್ಟು, ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದೂ ಇದೆ. ಆದರೆ ಕೆಟ್ಟದು ಜಾಸ್ತಿಯಿರುತ್ತದೆ. ಮುಂದೆ ಅನಿಷ್ಟ ಜಾಸ್ತಿ ಇದೆ, ಕತ್ತಲು ಬೆಳಕು ಎರಡೂ ಇರುತ್ತದ, ಆದರೆ ಕತ್ತಲು ಜಾಸ್ತಿಯಿರುತ್ತದೆ ಎಂದು (Kodi Sri) ಕೋಡಿಶ್ರೀಗಳು ಹೇಳಿದ್ದಾರೆ.
ಇನ್ನೂ ವಯನಾಡಿನ ಮೆಪ್ಪಾಡಿ ಜಿಲ್ಲೆಯಲ್ಲಿ ಸೇತುವೆ, ಮನೆಗಳು, ರಸ್ತೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಎನ್.ಡಿ.ಆರ್.ಎಫ್, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಕಂದಾಯ ಇಲಾಖೆಯ ಅಧಿಕಾರಿಗಳಿಂದ ರಕ್ಷಣಾ ಕಾರ್ಯ ಸಾಗುತ್ತಿದೆ. ಈವರೆಗೆ ಸುಮಾರು 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡು ಬಿಟ್ಟಿವೆ. ಸಂತ್ರಸ್ತರಿಗೆ ಆಹಾರ ಬಟ್ಟೆ ವ್ಯವಸ್ಥೆ ಮಾಡಲಾಗಿದೆ. ಈ ಭೂಕುಸಿತದಲ್ಲಿ ನಿನ್ನೆಯವರೆಗೂ 93 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಸಿಎಂ ಪಿಣರಾಯ್ ವಿಜಯನ್, ವಯನಾಡಿನಲ್ಲಿ ಪ್ರಾಕೃತಿಕ ವಿಕೋಪ ಸಂಬಂವಿಸಿದ್ದು, ಮಂಗಳವಾರ ನಸುಕಿನ ಜಾವ 2 ಗಂಟೆಗೆ ಹಾಗೂ 4.10 ಕ್ಕೆ ಎರಡು ಬಾರಿ ಗುಡ್ಡ ಕುಸಿತವಾಗಿದೆ. ಈ ಸಂಬಂಧ ಐದು ಮಂದಿ ಸಚಿವರು ಸತತವಾಗಿ ಕೆಲಸ ಮಾಡುತ್ತಿದ್ದಾರೆ. 18 ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. 34 ಮೃತದೇಹಗಳ ಗುರುತು ಪತ್ತೆಯಾಗಿದೆ. 128 ಮಂದಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ 93 ಮಂದಿ ಮೃತಪಟ್ಟಿದ್ದು, ಕೆಲವು ದೇಹಗಳನಬ್ನು ಪತ್ತೆಹಚ್ಚಲು ಸಹ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.