ಕರ್ನಾಟಕ ರಾಜ್ಯ ಕೊಡಗು ವ್ಯಾಪ್ತಿಯ ಪ್ರವಾಸೋದ್ಯಮ ಈಗಾಗಲೇ ಅಸಂಖ್ಯಾತ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಇದೀಗ ಮತಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನವನ್ನು ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಅತೀ ಉದ್ದದ ಗಾಜಿನ ಸೇತುವೆ ಸಿದ್ದಗೊಂಡಿದ್ದು, ಈ ಸೇತುವೆ ಕರ್ನಾಟಕದ ಮೊದಲ ಅತಿ ಉದ್ದ ಹಾಗೂ ಎತ್ತರದ ಗ್ಲಾಸ್ ಬ್ರಿಡ್ಜ್ ಇದಾಗಿದೆ. ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಬ್ಬಿಫಾಲ್ಸ್ ಜಂಕ್ಷನ್ ಬಳಿ ಈ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
ಕರ್ನಾಟಕದ ಕೊಡಗು ವ್ಯಾಪ್ತಿಯ ಪ್ರಾಕೃತಿಕ ತಾಣಗಳಿಗೆ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡಲು ಬರುತ್ತಿರುತ್ತಾರೆ. ಇದೀಗ ಈ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಮಡಿಕೇರಿ ವ್ಯಾಪ್ತಿಯ ಅಬ್ಬಿಫಾಲ್ಸ್ ಬಳಿ ಕರ್ನಾಟಕದ ಮೊದಲ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆ ತಳಮಟ್ಟದಿಂದ ಬರೋಬ್ಬರಿ 250ಅಡಿ ಎತ್ತರ ಹಾಗೂ 80 ಅಡಿಗೂ ಹೆಚ್ಚು ಉದ್ದವಿದೆ. ಭೂಮಿಯ ಮಟ್ಟದಿಂದ 250 ಅಡಿ ಎತ್ತರವಿರುವುದರಿಂದ ಈ ಗಾಜಿನ ಸೇತುವೆ ಮೇಲೆ ನಡೆಯಲು ಕೆಲವರಿಗೆ ಭಯವಾಗಬಹುದು. ಜೊತೆಗೆ ಅನೇಕರು ಥ್ರಿಲ್ ಆಗಿಯೂ ಫೀಲ್ ಆಗುತ್ತಿರುತ್ತಾರೆ. ಈ ಗಾಜಿನ ಸೇತುವೆ ಮೇಲೆ ಹೆಜ್ಜೆಯಿಟ್ಟರೇ ಎತ್ತರದಿಂದ ಕೆಳಗೆ ಬೀಳುತ್ತೇವೆ ಎಂಬ ಭಯ ಆವರಿಸುತ್ತದೆ.
ಇನ್ನೂ ಈ ಸೇತುವೆಯ ಮೇಲೆ ನಡೆಯುತ್ತಾ ಹೋಗುತ್ತಿದ್ದರೇ ಸುತ್ತಲೂ ಇರುವಂತಹ ಹಸಿರು, ಬೆಟ್ಟಗುಡ್ಡಗಳ ರಾಶಿ ನೋಡುಗರ ಮನಸೋರೆಗೊಳ್ಳುವಂತೆ ಮಾಡುತ್ತದೆ. 80 ಅಡಿಯಷ್ಟು ದೂರು ಇರುವ ಈ ಸೇತುವೆಯಲ್ಲಿ ನಡೆದು ಸೇತುವೆಯ ತುದಿಗೆ ತಲುಪಿದರೇ ಆಳವಾದ ಜಾಗದಲ್ಲಿ ಹಸಿರು ಕಾಡು ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿ ಮಾಡುವುದು ಪಕ್ಕಾ ಎಂದೇ ಹೇಳಲಾಗುತ್ತದೆ. ಸೇತುವೆ ತುದಿಯಲ್ಲಿ ಗೋಪುರವಿದ್ದು, ಈ ಗೋಪುರದ ಮೇಲೆ ಹುಟ್ಟುಹಬ್ಬ ಸೇರಿದಂತೆ ಕೆಲವೊಂದು ಸೆಲೆಬ್ರೇಷನ್ ಗಳನ್ನು ಸಹ ಮಾಡಿಕೊಳ್ಳಬಹುದು. ಅಬ್ಬಿ ಜಲಪಾತದ ಕಡೆ ಹೋಗುವಂತಹ ಪ್ರವಾಸಿಗರು ಈ ಗಾಜಿನ ಸೇತುವೆಯನ್ನು ವೀಕ್ಷಣೆ ಮಾಡಬಹುದು.ಈ ಸೇತುವೆಯ ಮೇಲೆ ಒಂದೇ ಸಮಯದಲ್ಲಿ 35 ಮಂದಿ ನಿಂತು ವೀಕ್ಷಣೆ ಮಾಡಬಹುದಾಗಿದೆ. ಸೇತುವೆಯ ಎರಡೂ ಭಾಗಗಳಲ್ಲಿ ತಡೆಗೋಡೆಗಳಿಗೆ ಬಣ್ಣ ಬಣ್ಣದ ದೀಪಗಳನ್ನು ಅಲಂಕರಿಸಲಾಗಿದೆ. ಪ್ರತಿ ಒಬ್ಬರಿಗೆ 300 ರೂಪಾಯಿ ಪ್ರವೇಶ ಶುಲ್ಕವನ್ನು ನಿಗಧಿಪಡಿಸಲಾಗಿದೆ.