KN Rajanna – ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಆರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಇತರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಇದು ಅವರ ಸತತ ಆರನೇ ಗೆಲುವಾಗಿದೆ. ಇದೇ ಸಂದರ್ಭದಲ್ಲಿ, ರಾಜಣ್ಣ ಅವರ ಆಪ್ತರಾಗಿರುವ ಜಿ.ಜೆ. ರಾಜಣ್ಣ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
KN Rajanna – ರೈತರೇ ನಮ್ಮ ಆದ್ಯತೆ – ಕೆ.ಎನ್. ರಾಜಣ್ಣ
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಕೆ.ಎನ್. ರಾಜಣ್ಣ ಅವರು, “ನಮ್ಮ ಬ್ಯಾಂಕಿನ ಮುಖ್ಯ ಉದ್ದೇಶ ರೈತರ ಜೀವನವನ್ನು ಸುಗಮಗೊಳಿಸುವುದು. ದೇಶದ ಆರ್ಥಿಕ ಪ್ರಗತಿಯಲ್ಲಿ ರೈತರ ಕೊಡುಗೆ ಅಪಾರ. ಹಾಗಾಗಿ, ಬ್ಯಾಂಕಿನ ಎಲ್ಲ ಯೋಜನೆಗಳು ರೈತರಿಗೆ ಉಪಯುಕ್ತವಾಗುವಂತೆ ರೂಪಿಸಲಾಗುವುದು” ಎಂದು ತಿಳಿಸಿದರು. Read this also : ಕೆ.ಎನ್.ರಾಜಣ್ಣ ಬೆಂಬಲಕ್ಕೆ ವಾಲ್ಮೀಕಿ ಸಮುದಾಯ: ದೆಹಲಿಗೆ ಹೋಗ್ತೀವಿ ಎಂದ ಸಚಿವ ಸತೀಶ್ ಜಾರಕಿಹೊಳಿ…!
KN Rajanna – ರೈತರ ಸಾಲ ಮನ್ನಾ ಕುರಿತು ಕೆ.ಎನ್. ರಾಜಣ್ಣ ಹೇಳಿಕೆ
ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕಿಗೆ 5,500 ಕೋಟಿ ರೂಪಾಯಿ ಬರಬೇಕಿತ್ತು, ಆದರೆ ಈ ಬಾರಿ ಕೇವಲ 2,340 ಕೋಟಿ ರೂಪಾಯಿ ಮಾತ್ರ ಬಂದಿದೆ. ಇದರಿಂದ ಜಿಲ್ಲಾ ಬ್ಯಾಂಕ್‌ಗಳಿಗೆ ನಷ್ಟವಾಗಲಿದೆ ಎಂದು ಅವರು ವಿವರಿಸಿದರು. ಸದ್ಯಕ್ಕೆ ಹೊಸ ಸಾಲ ಮನ್ನಾಕ್ಕೆ ಒತ್ತಾಯಿಸದಿದ್ದರೂ, ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಮನ್ನಾ ಆಗಿದ್ದ ರೈತರ 258 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸುವುದಾಗಿ ಅವರು ತಿಳಿಸಿದರು.
KN Rajanna – ಜಿ.ಎಸ್.ಟಿ ಕುರಿತು ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ
ಜಿ.ಎಸ್.ಟಿ ಸ್ಲಾಬ್‌ಗಳನ್ನು ಕಡಿಮೆ ಮಾಡಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ರಾಜಣ್ಣ, ಇದರಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಬ್ರೈನ್ ಮ್ಯಾಪಿಂಗ್ ಕುರಿತ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಆ ಪ್ರಶ್ನೆ ಕೇಳಿದವರಿಗೆ ಗರಂ ಆಗಿ ಉತ್ತರಿಸಿದರು. ತಾವು ಮತ್ತೆ ಸಹಕಾರಿ ಸಚಿವರಾಗುವ ಸಾಧ್ಯತೆಗಳ ಬಗ್ಗೆ ಕೇಳಿದಾಗ, “ಭವಿಷ್ಯದಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ, ಅದಕ್ಕೆ ತಕ್ಕಂತೆ ಮುಂದುವರಿಯಬೇಕು” ಎಂದು ಹೇಳಿದರು.