Kerala – ಇಂದಿನ ಕಾಲದಲ್ಲಿ ಯೂಟ್ಯೂಬ್ ಮಾದ್ಯಮ ತುಂಬಾನೆ ಪ್ರಾಮುಖ್ಯತೆ ವಹಿಸಿದೆ. ಅನೇಕ ಕೆಲಸಗಳನ್ನು ಯುಟ್ಯೂಬ್ ಮೂಲಕ ನೋಡಿಯೇ ಮಾಡುತ್ತಿದ್ದಾರೆ. ಅಡುಗೆ, ಡ್ರಾಯಿಂಗ್, ಆರೋಗ್ಯ ಹೀಗೆ ಅನೇಕ ವಿಷಯಗಳನ್ನು ಯೂಟ್ಯೂಬ್ ಮೂಲಕ ನೋಡಿ ಫಾಲೋ ಮಾಡುತ್ತಿದ್ದಾರೆ. ಕೇರಳದಲ್ಲಿ ಯುವತಿಯೊಬ್ಬಳು ಯೂಟ್ಯೂಬ್ ಮೂಲಕ ಡಯಟ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ.

ಕೇರಳದ (Kerala) ಕಣ್ಣೂರಿನ ಕೂತುಪರಂಬ ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತ ಯುವತಿಯನ್ನು ಶ್ರೀನಂದ (18) ಎಂದು ಗುರುತಿಸಲಾಗಿದೆ. ಮೃತಳಿಗೆ ತಾನು ತೂಕ ಹೆಚ್ಚಾಗುವ ಭಯ ಕಾಡುತ್ತಿದ್ದು, ಆಕೆ ಆಹಾರ ತ್ಯೆಜಿಸುವಂತಹ ಅನೋರೆಕ್ಸಿಯಾ (Anorexia) ಎಂಬ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈ ವ್ಯಾದಿಯಿಂದ ಬಳಲುತ್ತಿದ್ದವರಲ್ಲಿ ತಾವು ತೆಳ್ಳಗಿನ ದೇಹ ಹೊಂದಿದ್ದರೂ ಸಹ ಅಧಿಕ ತೂಕ ಇದ್ದೀವಿ ಎಂಬ ಭಾವನೆಯನ್ನು ಹೊಂದಿರುತ್ತಾರೆ. ಇದರಿಂದ ಆಹಾರ ಸೇವನೆಯನ್ನು ಬಿಡುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಇನ್ನೂ ಮೃತ ಶ್ರೀನಂದ ಕಳೆದ ಐದಾರು ತಿಂಗಳುಗಳಿಂದ ಈ ವ್ಯಾದಿಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಕೆಲವು ತಿಂಗಳುಗಳಿಂದ ಆಕೆ ಏನು ತಿನ್ನುತ್ತಿರಲಿಲ್ಲ. ಈ ವಿಚಾರವನ್ನು ಅವರ ಕುಟುಂಬಸ್ಥರಿಗೆ ತಿಳಿಸಿರಲಿಲ್ಲ ಜೊತೆಗೆ ಈ ವಿಚಾರವನ್ನು ಆಕೆ ಕುಟುಂಬಸ್ಥರಿಗೆ ತಿಳಿಯದಂತೆ ಎಚ್ಚರ ವಹಿಸಿದ್ದಳಂತೆ. ಇನ್ನೂ ಕಳೆದ ಐದು ತಿಂಗಳ ಹಿಂದೆ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಆಕೆಗೆ ಊಟ ಮಾಡಬೇಕು ಎಂದು ಸಲಹೆ ನೀಡಿದ್ದರು, ಅದರ ಜೊತೆಗೆ ಮನೋವೈದ್ಯರ ಸಲಹೆಯನ್ನು ಪಡೆಯುವಂತೆಯೂ ಸೂಚನೆ ನೀಡಿದ್ದರಂತೆ.

ಯುವತಿ ಕೆಲವು ದಿನಗಳಿಂದ ಕೇವಲ ಬಿಸಿ ನೀರನ್ನು ಮಾತ್ರ ಕುಡಿಯುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಯುವತಿಯ ರಕ್ತದಲ್ಲಿ ಸಕ್ಕರೆ ಹಾಗೂ ಸೋಡಿಯಂ ಪ್ರಮಾಣ ಕಡಿಮೆಯಾಗಿತ್ತಂತೆ. ಅದರ ಜೊತೆಗೆ ಉಸಿರಾಟ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಯುವತಿ ಮೃತಪಟ್ಟಿದ್ದಾಳೆ.