Saturday, July 12, 2025
HomeNationalNurse : ಆಸ್ಪತ್ರೆಯ ಡ್ರೆಸ್ ಬದಲಿಸುವ ಕೋಣೆಯಲ್ಲಿ ಕ್ಯಾಮೆರಾ ಇಟ್ಟಿದ್ದ ಟ್ರೈನಿ ನರ್ಸ್ ಬಂಧನ…!

Nurse : ಆಸ್ಪತ್ರೆಯ ಡ್ರೆಸ್ ಬದಲಿಸುವ ಕೋಣೆಯಲ್ಲಿ ಕ್ಯಾಮೆರಾ ಇಟ್ಟಿದ್ದ ಟ್ರೈನಿ ನರ್ಸ್ ಬಂಧನ…!

Nurse – ಸಾಮಾನ್ಯವಾಗಿ ಶಾಪಿಂಗ್ ಮಾಲ್ ಗಳಲ್ಲಿ, ಹಾಸ್ಟೆಲ್ ಗಳ ಟಾಯ್ಲೆಟ್ ಗಳಲ್ಲಿ ಸೀಕ್ರೇಟ್ ಕ್ಯಾಮೆರಾಗಳನ್ನು ಇಟ್ಟು ವಿಡಿಯೋ ರೆಕಾರ್ಡ್ ಮಾಡಿದಂತಹ ಪ್ರಕರಣಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಆಸ್ಪತ್ರೆಯ ನರ್ಸ್ ಒಬ್ಬ ನರ್ಸ್ ಹಾಗೂ ಸಿಬ್ಬಂದಿಗಳು ಬಟ್ಟೆ ಬದಲಿಸುವ ಕೋಣೆಯಲ್ಲಿ ಕ್ಯಾಮೆರಾ ಇಟ್ಟಿದ್ದಾಳೆ ಎಂಬ ಆರೋಪದ ಮೇರೆಗೆ ಆ ನರ್ಸ್ ಒಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Hidden camera found in Kerala hospital changing room, trainee nurse arrested

Nurse – ಕೇರಳದಲ್ಲಿ ನಡೆದ ಘಟನೆ

ಅಂದಹಾಗೆ ಈ ಘಟನೆ ನಡೆದಿರೋದು ಕೇರಳದ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ. ಈ ಆಸ್ಪತ್ರೆಯಲ್ಲಿ ನರ್ಸ್‌ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಬಟ್ಟೆ ಬದಲಿಸಿಕೊಳ್ಳುವ ಕೋಣೆಯಲ್ಲಿ ಟ್ರೈನಿ ನರ್ಸ್ ಓರ್ವ ಕ್ಯಾಮೆರಾ ಇಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಆ ನರ್ಸ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ ಎನ್ನಲಾಗಿದೆ. ಬಂಧೀತ ಆರೋಪಿಯನ್ನು ದಕ್ಷಿಣದ ಚರಲೇಲ್ ನಿವಾಸಿ ಅನ್ಸನ್ ಜೋಸೆಫ್ (24) ಎಂದು ಗುರುತಿಸಲಾಗಿದೆ. ಆರೋಪಿ ಅನ್ಸನ್ ಬಿಎಸ್ಸಿ ಓದಿದ್ದು, ಒಂದು ತಿಂಗಳ ಹಿಂದೆ ತರಬೇತಿಗಾಗಿ ಆಸ್ಪತ್ರೆಗೆ ಸೇರಿದ್ದ ಎಂದು ತಿಳಿದು ಬಂದಿದೆ.

Hidden camera found in Kerala hospital changing room, trainee nurse arrested

Nurse – ಆರೋಪಿಯ ಬಂಧನ

Bajaj PX97 Torque New 36L Personal Air Cooler For Home | High Speed Fan | 30Ft Powerful Air Throw | Inverter compatible | Cooler for Room | 3 yr Warranty (1 yr standard + 2 yr extended warranty (Upto % Off, Buy Now)

ಕಳೆದ ಮಂಗಳವಾರ (ಮಾ.11) ರಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಬಟ್ಟೆ ಬದಲಿಸಲು ಹೋದಾಗ ಅಲ್ಲಿ ಸ್ವಿಚ್ ಆನ್ ಆಗಿರುವ ಮೊಬೈಲ್ ಪೋನ್ ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಸ್ಪತ್ರೆಯ ಅಧಿಕಾರಿಗಳು ಗಾಂಧಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ದ ಸೀಕ್ರೇಟ್ ಆಗಿ ವಿಡಿಯೋ ರೆಕಾರ್ಡ್ ಮಾಡಲು ಪೋನ್ ಇಟ್ಟಿದ್ದಾನೆ ಎಂಬ ಆರೋಪ ಹೊರೆಸಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular