Karnataka Weather – ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಮುಂದುವರಿದಿರುವ ಮಳೆ ಅಬ್ಬರ ಮುಂದುವರಿದಿದ್ದು, ಅದರಲ್ಲೂ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಕರ್ನಾಟಕದ ಕರಾವಳಿ ಭಾಗ ಸೇರಿದಂತೆ 7 ಜಿಲ್ಲೆಗಳಿಗೆ ಆಗಸ್ಟ್ 2ರವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

Karnataka Weather – ಆರೆಂಜ್ ಅಲರ್ಟ್ ಘೋಷಣೆ:
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
Karnataka Weather – ಇತರೆ ಜಿಲ್ಲೆಗಳಿಗೆ ಅಲರ್ಟ್:
ಮೈಸೂರು, ಚಾಮರಾಜನಗರ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ಇಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇನ್ನು, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
Karnataka Weather – ಹೆಚ್ಚು ಮಳೆಯಾದ ಪ್ರದೇಶಗಳು:
ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮಂಕಿ, ಗೇರುಸೊಪ್ಪ, ಭಾಗಮಂಡಲ, ಆಗುಂಬೆ, ಕೊಟ್ಟಿಗೆಹಾರ, ಕಮ್ಮರಡಿ, ಹುಂಚದಕಟ್ಟೆ, ಕುಮಟಾ, ಯಲ್ಲಾಪುರ, ಕಳಸ, ಕದ್ರಾ, ಬೆಳ್ತಂಗಡಿ, ಕೊಪ್ಪ, ಜಯಪುರ, ಗೋಕರ್ಣ, ಅಂಕೋಲಾದಲ್ಲಿ ಹೆಚ್ಚಿನ ಮಳೆಯಾಗಿದೆ.
ಅಲ್ಲದೆ, ಲೋಂಡಾ, ಜೋಯ್ಡಾ, ತ್ಯಾಗರ್ತಿ, ಸೈದಾಪುರ, ನಾಪೋಕ್ಲು, ಎನ್ಆರ್ಪುರ, ಕಾರ್ಕಳ, ಧರ್ಮಸ್ಥಳ, ಬಾಳೆಹೊನ್ನೂರು, ಶಕ್ತಿನಗರ, ಮೂಡುಬಿದಿರೆ, ಮಾಣಿ, ಕೋಟಾ, ಚಿತ್ತಾಪುರ, ಬಂಟವಾಳ, ಬನವಾಸಿ, ಅಥಣಿ, ಉಡುಪಿ, ಸಿಂಧಗಿ, ಸೇಡಂ, ಮುಂಡಗೋಡು, ಕುಂದಾಪುರ, ಕಿತ್ತೂರು, ಖಾನಾಪುರ, ಹೊನ್ನಾವರ, ತರೀಕೆರೆ, ಸುಳ್ಯ, ಸೌದತ್ತಿ, ಶಿಗ್ಗಾಂವ್, ಪುತ್ತೂರು, ಮುಲ್ಕಿ, ಮಂಠಾಳ, ಕಿರವತ್ತಿ, ಕಾರವಾರ, ಕಲಬುರಗಿ, ಕಕ್ಕೇರಿ, ಜೇವರ್ಗಿ, ಹುಣಸಗಿ, ಹುಮ್ನಾಬಾದ್, ಬೇಲೂರು, ಔರಾದ್, ಅಜ್ಜಂಪುರ, ಯಡ್ರಾಮಿ, ಯಾದಗಿರಿ, ತಾಳಿಕೋಟೆ, ಮುದ್ದೇಬಿಹಾಳ, ಮಂಗಳೂರು, ಕುಂದಗೋಳ, ಜಗಳೂರು, ಹುನಗುಂದ, ಹಿರೆಕೆರೂರು, ಹಿಡಕಲ್, ಹಾರಂಗಿ, ಗದಗ, ಧಾರವಾಡ, ಚನ್ನಗಿರಿ, ಭರಮಸಾಗರ, ಬೈಲಹೊಂಗಲ, ಅರಕಲಗೂಡು ಪ್ರದೇಶಗಳಲ್ಲೂ ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ.
Karnataka Weather – ಬೆಂಗಳೂರಿನ ಹವಾಮಾನ ಮತ್ತು ತಾಪಮಾನ:
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಶನಿವಾರ ಸಂಜೆ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ನಗರದ ವಿವಿಧ ಪ್ರದೇಶಗಳಲ್ಲಿ ದಾಖಲಾದ ತಾಪಮಾನ ಹೀಗಿದೆ:

- ಎಚ್‌ಎಎಲ್: ಗರಿಷ್ಠ4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.0 ಡಿಗ್ರಿ ಸೆಲ್ಸಿಯಸ್
- ನಗರ: ಗರಿಷ್ಠ7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್
- ಕೆಐಎಎಲ್: ಗರಿಷ್ಠ5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.1 ಡಿಗ್ರಿ ಸೆಲ್ಸಿಯಸ್
- ಜಿಕೆವಿಕೆ: ಗರಿಷ್ಠ2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.6 ಡಿಗ್ರಿ ಸೆಲ್ಸಿಯಸ್
Read this also : Shravana Somavara 2025: ಶಿವನ ಕೃಪೆ ಪಡೆಯಲು ಈ 5 ಕೆಲಸ ಮಾಡಿ, ಇಷ್ಟಾರ್ಥಗಳು ಖಂಡಿತಾ ಈಡೇರುತ್ತವೆ…!
ರಾಜ್ಯದ ಪ್ರಮುಖ ನಗರಗಳಲ್ಲಿ ತಾಪಮಾನ:
- ಹೊನ್ನಾವರ: ಗರಿಷ್ಠ1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.9 ಡಿಗ್ರಿ ಸೆಲ್ಸಿಯಸ್
- ಕಾರವಾರ: ಗರಿಷ್ಠ6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.6 ಡಿಗ್ರಿ ಸೆಲ್ಸಿಯಸ್
- ಮಂಗಳೂರು ಏರ್‌ಪೋರ್ಟ್: ಗರಿಷ್ಠ0 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.4 ಡಿಗ್ರಿ ಸೆಲ್ಸಿಯಸ್
- ಶಕ್ತಿನಗರ: ಗರಿಷ್ಠ8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.2 ಡಿಗ್ರಿ ಸೆಲ್ಸಿಯಸ್
- ಬೆಳಗಾವಿ ಏರ್‌ಪೋರ್ಟ್: ಗರಿಷ್ಠ4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.0 ಡಿಗ್ರಿ ಸೆಲ್ಸಿಯಸ್
- ಬೀದರ್: ಗರಿಷ್ಠ4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.0 ಡಿಗ್ರಿ ಸೆಲ್ಸಿಯಸ್
- ವಿಜಯಪುರ: ಗರಿಷ್ಠ0 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.4 ಡಿಗ್ರಿ ಸೆಲ್ಸಿಯಸ್
- ಧಾರವಾಡ: ಗರಿಷ್ಠ0 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.5 ಡಿಗ್ರಿ ಸೆಲ್ಸಿಯಸ್
- ಗದಗ: ಗರಿಷ್ಠ0 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.4 ಡಿಗ್ರಿ ಸೆಲ್ಸಿಯಸ್
- ಕಲಬುರಗಿ: ಗರಿಷ್ಠ4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.2 ಡಿಗ್ರಿ ಸೆಲ್ಸಿಯಸ್
- ಹಾವೇರಿ: ಗರಿಷ್ಠ8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್
- ಕೊಪ್ಪಳ: ಗರಿಷ್ಠ5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.1 ಡಿಗ್ರಿ ಸೆಲ್ಸಿಯಸ್
- ರಾಯಚೂರು: ಗರಿಷ್ಠ6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.0 ಡಿಗ್ರಿ ಸೆಲ್ಸಿಯಸ್
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಸಂಬಂಧಪಟ್ಟ ಇಲಾಖೆಗಳು ಮತ್ತು ಸಾರ್ವಜನಿಕರು ಎಚ್ಚರದಿಂದಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ.
