ಕರ್ನಾಟಕದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಉಡುಪಿ ಜಿಲ್ಲೆ ಪಡೆದುಕೊಂಡಿದ್ದು ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಬಾಗಲಕೋಟೆ ಜಿಲ್ಲೆಯ ರೈತ ಕುಟುಂಬದ ಅಂಕಿತಾ ಬಸಪ್ಪ ಎಂಬ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಬಾಗಲಕೋಟೆಯ ಮಧೋಳ ತಾಲ್ಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ 625 ಅಂಕಗಳಿಗೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಈ ಬಾರಿ ಒಬ್ಬರಿಗೆ ಪ್ರಥಮ, 7 ಮಂದಿಗೆ ದ್ವಿತೀಯ ಸ್ಥಾನ, 14 ಮಂದಿಗೆ ತೃತೀಯ ಸ್ಥಾನ ಸಿಕ್ಕಿದೆ. ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಟಾಪರ್ಸ್ ಲಿಸ್ಟ್ ಹೀಗಿದೆ:
ಅಂಕಿತಾ ಬಾಗಲಕೋಟೆ 625/625
ಮೇದಾ ಪಿ ಶೆಟ್ಟಿ ಬೆಂಗಳೂರು 624/625
ಹರ್ಷಿತಾ ಡಿಎಂ ಮಧುಗಿರಿ 624/625
ಚಿನ್ಮಯ್ ದಕ್ಷಿಣ ಕನ್ನಡ 624/625
ಸಿದ್ದಾಂತ್ ಚಿಕ್ಕೋಡಿ 624/6L25
ದರ್ಶನ್, ಚಿನ್ಮಯ್,ಶ್ರೀರಾಮ್ ಶಿರಸಿ 624/625