Karnataka Politics – ರಾಜ್ಯ ರಾಜಕಾರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ಜೋರು ವಾಕ್ಸಮರ ನಡೆಯುತ್ತಿದೆ. ಅದರಲ್ಲೂ ಮುಡಾ ಹಗರಣದ ಕುರಿತು ಜೋರು ಸಮರ ನಡೆಯುತ್ತಿದೆ. (Karnataka Politics) ಕುಮಾರಸ್ವಾಮಿಯವರ (H D Kumaraswamy)ವಿರುದ್ದ ಗಣಿ ಅಕ್ರಮದ ಆರೋಪ ಸಹ ಬಂದಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೇಂದ್ರ ಸಚಿವ ಹೆ.ಡಿ.ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆಯುತ್ತಿದೆ. ನನ್ನ ಅರೆಸ್ಟ್ ಮಾಡೋಕೆ ನೂರು ಮಂದಿ ಸಿದ್ದರಾಮಯ್ಯ (Siddaramaiah) ಬರಬೇಕು ಎಂದು ಹೆಚ್.ಡಿ.ಕೆ (H D Kumaraswamy) ಹೇಳಿದ್ದರೇ, ಅದಕ್ಕೆ ಸಿಎಂ ಸಿದ್ದರಾಮಯ್ಯ ನೂರು ಸಿದ್ದರಾಮಯ್ಯ ಏಕೆ ಒಬ್ಬ ಪೊಲೀಸ್ ಕಾನ್ಸ್ ಟೇಬಲ್ ಸಾಕು ಎಂದು ಕೌಂಟರ್ ಕೊಟ್ಟಿದ್ದಾರೆ.
Karnataka Politics – ಕೇಂದ್ರ ಸಚಿವ ಕುಮಾರಸ್ವಾಮಿಯವರ ವಿರುದ್ದ ಅಕ್ರಮ ಗಣಿಗಾರಿಕೆ ಆರೋಪ ಬಂದಿದ್ದು, ಈ ಸಂಬಂಧ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಗತ್ಯ ಬಿದ್ದರೇ ಕುಮಾರಸ್ವಾಮಿ ಯವರನ್ನು ಬಂಧಿಸಲು ಹಿಂದೆ ಮುಂದೆ ನೋಡೊಲ್ಲ ಎಂದು (Karnataka Politics) ಹೇಳಿದ್ದಾರೆ. ಆದರೆ ಇನ್ನೂ ಆ ಸನ್ನಿವೇಶ ಬಂದಿಲ್ಲ. ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಭ ತೋರುತ್ತಿರುವ ರಾಜ್ಯಪಾಲರು, ನನ್ನ ವಿರುದ್ದ ಮಾತ್ರ ಯಾವುದೇ ತನಿಖಾ ವರದಿಯನ್ನು (Karnataka Politics) ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ತಾರತಮ್ಯವಲ್ಲದೇ ಇನ್ನೇನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಈ ಹೇಳಿಕೆಗೆ ಕುಮಾರಸ್ವಾಮಿಯವರು ರಿಯಾಕ್ಟ್ (Karnataka Politics) ಆಗಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ (Karnataka Politics) ಟಾಂಗ್ ಕೊಟ್ಟ ಹೆಚ್.ಡಿ.ಕೆ. ನನ್ನ ಅರೆಸ್ಟ್ ಮಾಡೋಕೆ ನೂರು ಸಿದ್ದರಾಮಯ್ಯ ಬರಬೇಕು. ನನಗೆ ಭಯ ಶುರುವಾಗಿದೆಯೇ? ನನ್ನ ನೋಡಿದರೇ ನಿಮಗೆ ಹಾಗೆ ಅನಿಸುತ್ತದೆಯೇ? ಕಳೆದೊಂದು ವಾರದಿಂದ ಅವರು ಹೇಗೆ ಇದ್ದಾರೆ ನೋಡಿದ್ದಾರೆ ಅಲ್ವಾ, ಜನ ನೋಡಿದ್ದಾರೆ, ಇವರು ಏನು ಮಾಡಿದ್ದಾರೆ ಅಂತಾ, ಮೈಸೂರಿನ ದಾಖಲೆಯಿದೆಯಲ್ಲ. ಮುಡಾ ಆಸ್ತಿಯನ್ನು ನನ್ನ ಆಸ್ತಿ (Karnataka Politics) ಎಂದು ಹೇಳಿದ್ದಾರೆ. ಇಂತಹ ಭಂಡತನ ಯಾವ ಸಿಎಂ ಸಹ ತೋರಿಸಿರಲಿಲ್ಲ ಎಂದು ಹೆಚ್.ಡಿ.ಕೆ. ಕೌಂಟರ್ ಕೊಟ್ಟರು. ಇನ್ನೂ ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಹ ಟಾಂಗ್ ಕೊಟ್ಟಿದ್ದಾರೆ.
ನೂರು ಸಿದ್ದರಾಮಯ್ಯ (Karnataka Politics) ಬಂದರೂ ನನ್ನ ಅರೆಸ್ಟ್ ಮಾಡೋಕೆ ಆಗಲ್ಲ ಎಂಬ ಕುಮಾರಸ್ವಾಮಿಯವರ ಮಾತು ಹಾಸ್ಯಾಸ್ಪದವಾಗಿದೆ. ಯಾರನ್ನಾದರೂ ಬಂಧಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ ಹೊರತು ನನ್ನದಲ್ಲ. ಕುಮಾರಸ್ವಾಮಿ ಅವರು ಹೆದರಿರುವ ಕಾರಣಕ್ಕಾಗಿ ಇಂದು ಪತ್ರಿಕಾಗೋಷ್ಠಿಯನ್ನು ಮಾಡಿದ್ದಾರೆ. ಎಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುತ್ತಾರೋ ಎಂಬ ಭಯದಲ್ಲಿ ಮಾಧ್ಯಮಗಳನ್ನು ಕರೆದು ಮಾತಾಡಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ ಆಯೋಗವನ್ನು (Karnataka Politics) ರಚಿಸಲಾಗಿದ್ದು, ಸತ್ಯ ಹೊರಬೀಳುತ್ತದೆ. ಕುಮಾರಸ್ವಾಮಿ ಹೇಳುವುದು ಸತ್ಯವೇ ಎಂಬುವುದು ತನಿಖೆಯಿಂದ ಸ್ಪಷ್ಟವಾಗಲಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ವಿಚಾರಣೆ ನಡೆದಿಲ್ಲ, ವರದಿಯಾಗಲಿ, ಪತ್ರವಾಗಲಿ ಅಥವಾ ಆದೇಶವಾಗಲೀ ಇಲ್ಲ. ಆ ಅವಧಿಯಲ್ಲಿ ಪ್ರಭಾವ ಬೀರಲು ನಾನು ಮುಖ್ಯಮಂತ್ರಿ ಅಥವಾ (Karnataka Politics) ಮಂತ್ರಿಯಾಗಿರಲಿಲ್ಲ. ಕುಮಾರಸ್ವಾಮಿಯವರು ಯಾವತ್ತಿದ್ದರೂ ಹಿಟ್ ಅಂಡ್ ರನ್ ಮಾಡುವವರು, ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ತನ್ನ ಬಳಿ ‘ಪೆನ್ ಡ್ರೈವ್’ ಇದೆ ಎಂದರು, ಆದರೆ ಅವರು ಇದುವರೆಗೆ ಮಾಡಿರುವ ಯಾವುದೇ ಆರೋಪಗಳಿಗೆ (Karnataka Politics) ತಾರ್ಕಿಕ ಅಂತ್ಯ ಕಂಡಿಲ್ಲ. ತನ್ನ ಬಳಿ ದಾಖಲೆಗಳಿವೆ ಎನ್ನುವ ಕುಮಾರಸ್ವಾಮಿಯವರು ಅವುಗಳನ್ನು ಬಿಡುಗಡೆ ಮಾಡಬೇಕು.
ಮುಡಾ ವಿಚಾರದಲ್ಲಿ ನಾನು ಯಾವುದೇ ದಾಖಲಾತಿಗಳನ್ನು ತಿದ್ದಿಲ್ಲ. 2014ರ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿಲ್ಲ. (Karnataka Politics) 2021 ರಲ್ಲಿ ಸಲ್ಲಿಸಿದ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿದೆ. ಅಂದು ಮುಡಾ ಮಂಡಳಿ ಅಧ್ಯಕ್ಷರಾಗಿದ್ದವರು ಬಿಜೆಪಿಯವರು. ಆಗ ಮಂಡಳಿಯಲ್ಲಿದ್ದವರು ಬಿಜೆಪಿ ಹಾಗೂ ಜೆಡಿಎಸ್ ನವರು, (Karnataka Politics) ಆಗ ಆದ ನಿವೇಶನ ಹಂಚಿಕೆಗೆ ಯಾರು ಜವಾಬ್ದಾರರು? ಈ ಬಗ್ಗೆ ಆಯೋಗವನ್ನು ರಚಿಸಲಾಗಿದ್ದು, ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.