ಸದ್ಯ ಕರ್ನಾಟಕ ರಾಜ್ಯದಲ್ಲಿ ಸಿಎಂ ಖುರ್ಚಿಯ ಬಗ್ಗೆ ರ್ಚೆಗಳು ಜೋರಾಗಿಯೇ ನಡೆಯುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರು (Karnataka Politics) ಏನಾದರೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೇ ಮುಂದಿನ ಸಿಎಂ ಯಾರಾಗಬೇಕೆಂಬ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈಗಾಗಲೇ ಕೆಲವು ಪ್ರಭಾವಿ ರಾಜಕಾರಣಿಗಳು (Karnataka Politics) ಸಿಎಂ ಸ್ಥಾನದ ಆಕಾಂಕ್ಷಿಗಳೆಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ಮತ್ತೋರ್ವ ಪ್ರಭಾವಿ ಸಚಿವ ಎಂ.ಪಾಟೀಲ್ ಕಾಂಗ್ರೆಸ್‌ನಲ್ಲಿ (Congress) ನಾನು ಸಿಎಂ ಆಗ್ತೀನಿ, (Karnataka Politics) ವಿಜಯಪುರದಿಂದ ಸಿಎಂ ಆದ್ರೆ ನಾನೇ ಆಗೋದು ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ನಲ್ಲಿ ನಾನು ಸಿಎಂ ಆಗ್ತೀನಿ, ವಿಜಯಪುರದಿಂದ ಏನಾದರೂ ಸಿಎಂ ಆಗೋದು ಇದ್ರೆ ನಾನೇ (Karnataka Politics) ಸಿಎಂ ಆಗೋದು. ಸಿಎಂ ಆಗೋಕೆ ಸೀನಿಯಾರಿಟಿ ಬೇಕಿಲ್ಲ. ಅವರು ಜನತಾ ದಳದಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ (Shivananda Patil) ವಿರುದ್ಧ ವ್ಯಂಗ್ಯವಾಡಿದರು. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಅಂತೂ ಇಲ್ಲ. (Karnataka Politics) ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಇರ್ತಾರೆ ಅಂತಾ ಸ್ಪಷ್ಟಪಡಿಸಿದರು. ಜೊತೆಗೆ ಕುಮಾರಸ್ವಾಮಿಯವರು ಇತ್ತೀಚಿಗೆ ನೀಡಿದ ಚುನಾವಣೆಯ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ. ಕುಮಾರಸ್ವಾಮಿ ಆಸೆ ಆಕಾಂಕ್ಷೆ ಇಟ್ಟುಕೊಂಡಿದ್ರು, (Karnataka Politics) ನಾನು ಸಿಎಂ ಆಗ್ತೀನಿ ಅಂತಾ ಆಸೆ ಇಟ್ಟುಕೊಂಡಿದ್ದರು. ಪಾಪ ಅವರ ಆಸೆ ನಿರಾಸೆಯಾಗಿದೆ ಎಂದು ಹೆಚ್.ಡಿ.ಕೆ. ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ಇನ್ನೂ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಡಾ ಪ್ರಕರಣ(Karnataka Politics) ಡೈವರ್ಟ್ ಮಾಡಲು ದರ್ಶನ್ ಪೊಟೋ ಲೀಕ್ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆಗೂ ಎಂ.ಬಿ.ಪಾಟೀಲ್ ಕೌಂಟರ್ ಕೊಟ್ಟಿದ್ದಾರೆ. ದರ್ಶನ್ ರಾಜಾತಿಥ್ಯ ವಿಚಾರ ಗಂಭೀರವಾದ ಪ್ರಕರಣವಾಗಿದೆ. (Karnataka Politics) ನಾನು ಗೃಹ ಮಂತ್ರಿಯಾಗಿದ್ದಾಗಲೂ ಸಹ ಜೈಲಿನಲ್ಲಿ ಈ ರೀತಿಯ ಅವ್ಯವಸ್ಥೆಗಳನ್ನು ನೋಡಿದ್ದೇನೆ. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ದರ್ಶನ್ ತಂಡವನ್ನು ಚದುರಿಸಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪೊಟೋ ಲೀಕ್ ಆಗಿದ್ದು ಹೇಗೆ ಎಂಬುದರ (Karnataka Politics) ಬಗ್ಗೆ ಸಹ ತನಿಖೆ ಆಗುತ್ತಿದೆ. ಆದರೆ ಪ್ರಹ್ಲಾದ್ ಜೋಶಿಯವರು ಈ ರೀತಿಯಾಗಿ ಹೇಳೋದು ಸರಿಯಲ್ಲ ಎಂದು ಕೌಂಟರ್ ಕೊಟ್ಟರು.