ಭಾರತದಲ್ಲಿ ನವರಾತ್ರಿ ಹಬ್ಬದ ಕಾರಣದಿಂದ ವಾಹನ ಸೇರಿದಂತೆ ಎಲ್ಲಾ ವಸ್ತುಗಳಿಗೆ ಪೂಜೆ ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಅದರಂತೆ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಸೇರಿದಂತೆ ಸರ್ಕಾರಿ ಬಸ್ ಗಳಿಗೂ ಸಹ ಪ್ರತಿ ವರ್ಷ ಆಯುಧ ಪೂಜೆ ಮಾಡಲಾಗುತ್ತದೆ. ಆಯುಧ ಪೂಜೆಯ ನಿಮಿತ್ತ ಬಸ್ ಗಳನ್ನು ಸುಂದರವಾಗಿ ಅಲಂಕರಿಸಿ ಪೂಜೆ ಮಾಡುತ್ತಾರೆ. ಆದರೆ ಈ ಬಾರಿ ಸರ್ಕಾರ ಆಯುಧ ಪೂಜೆ (Ayuda Pooje) ಮಾಡಲು ಪ್ರತಿ ಬಸ್ ಗೆ ನೀಡಿದ ಹಣ ಎಷ್ಟು ಗೊತ್ತಾ? ಆಕ್ರೋಷ ಹೆಚ್ಚಾಗುತ್ತಿದ್ದಂತೆ ಮೊತ್ತವನ್ನು ಹೆಚ್ಚಿಸಿದೆ ಸರ್ಕಾರ.
ಕೆ.ಎಸ್.ಆರ್.ಟಿ.ಸಿ ಆಯುಧ ಪೂಜೆಯ ಸಮಯ ಬಂದರೇ ಪ್ರತೀ ವರ್ಷ ಈ ಚರ್ಚೆ ನಡೆಯುತ್ತದೆ. ಇಡೀ ದೇಶಕ್ಕೆ ಮಾದರಿಯಾಗಿರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಆಯುಧ ಪೂಜೆಗೆ ನಿಗಮದ ವತಿಯಿಂದ ಕೇವಲ 100 ರೂಪಾಯಿ ನೀಡಲಾಗಿದೆ ಎಂದು ತಿಳಿದುಬಂದಿದ್ದು, ಕಾಂಗ್ರೇಸ್ ನ ಶಕ್ತಿ ಯೋಜನೆಯಿಂದ ನಿಗಮಗಳು ನಷ್ಟದಲ್ಲಿಲ್ಲ, ಪರೋಕ್ಷವಾಗಿ ಆದಾಯ ಹರಿದುಬರುತ್ತಿದೆ ಎಂದು ರಾಜ್ಯ ಸರ್ಕಾರ ಹಾಗೂ ಸಚಿವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಲಾಭ ವಿದ್ದಾಗ ಆಯುಧ ಪೂಜೆಗೆ ಮಾತ್ರ ನೂರು ರೂಪಾಯಿ ನೀಡುತ್ತಿರುವುದು ಅನೇಕರ ಆಕ್ರೋಷಕ್ಕೆ ಕಾರಣವಾಗಿತ್ತು.
ಇನ್ನೂ ಕಳೆದ ವರ್ಷ ಸಹ ಆಯುಧ ಪೂಜೆಗೆ ಕೇವಲ ನೂರು ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಆದರೆ ಸಿಬ್ಬಂದಿ ಮಾತ್ರ ತಮ್ಮ ಸ್ವಂತ ಖರ್ಚಿನಲ್ಲೇ ಬಸ್ ಗಳನ್ನು ಸುಂದರವಾಗಿ ಸಿಂಗರಿಸಿ ಆಯುಧ ಪೂಜೆಯನ್ನು ನೆರವೇರಿಸಿದರು. ಆದರೆಈ ಬಾರಿಯೂ ಸಹ ಅದೇ ನೂರು ರೂಪಾಯಿ ಆಯುಧ ಪೂಜೆಗೆ ನೀಡುವುದಾಗಿ ತಿಳಿಸಿದೆ. ಈ ಹಣದಲ್ಲಿ ಬಸ್‌ಗೊಂದು ದೊಡ್ಡ ಹಾರ ಕೂಡ ಖರೀದಿಸಲು ಸಾಧ್ಯವಿಲ್ಲ. ಪೂಜೆ ಎಂದರೆ, ತೆಂಗಿನಕಾಯಿ, ಅಗರಬತ್ತಿ, ಕರ್ಪೂರ, ಬೂದಗುಂಬಳ, ಅರಿಶಿನ-ಕುಂಕುಮ ಸೇರಿದಂತೆ ಎಷ್ಟೆಲ್ಲ ವಸ್ತುಗಳು ಬೇಕು. ನೂರು ರೂಪಾಯಿಯಲ್ಲಿ ಇದನ್ನೆಲ್ಲ ತಂದು ಪೂಜೆ ಮಾಡಲು ಸಾಧ್ಯವೇ? ಎಂದು ಸಿಬ್ಬಂದಿ ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಪೂಜೆಗಾಗಿ ಕೇವಲ 100 ರೂಪಾಯಿಯನ್ನು ನೌಕರರಿಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲಿಯೇ ಎಚ್ಚೆತ್ತಿರುವ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಆಯುಧ ಪೂಜೆಯ ಬಾಬ್ತು ಏರಿಕೆ ಮಾಡುವ ಆದೇಶ ನೀಡಿದ್ದಾರೆ. ಆಯುಧ ಪೂಜೆಯ ವೇಳೆ ಬಸ್‌ಗಳ ಪೂಜೆಗಾಗಿ ಕೆಎಸ್‌ಆರ್‌ಟಿಸಿ ಕೇವಲ 100 ರೂಪಾಯಿ ಬಿಡುಗಡೆ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ನೌಕರರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಹಳೆಯ ಆದೇಶವನ್ನು ಹಿಂಪಡೆದು, ಮೊತ್ತ ಹೆಚ್ಚಿಗೆ ಮಾಡಿ ಹೊಸ ಆದೇಶ ಹೊರಡಿಸಿದೆ. 100 ರೂಪಾಯಿಯ ಬದಲಿಗೆ ಪ್ರತಿ ಬಸ್‌ಗೆ 250 ರೂಪಾಯಿ ಹಣವನ್ನು ನೀಡಲು ಕೆಎಸ್‌ಆರ್‌ಟಿಸಿ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.