Kannada Rajyostava – ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ಎಲ್ಲರೂ ಪ್ರೀತಿಯಿಂದ ಕಲಿಯಬೇಕು, ಪ್ರೀತಿಯಿಂದ ಮಾತನಾಡಬೇಕೇ ವಿನಃ ಒತ್ತಡದಿಂದಾಗಲಿ, ಬೇರೆಯವರಿಂದ ಹೇರಿಕೆಯಿಂದಾಗಲಿ ಕಲಿಯಬಾರದು ಎಂದು ಗುಡಿಬಂಡೆ-ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣೆ ನೆರವೇರಿಸಿ ಮಾತನಾಡಿದರು.

Kannada Rajyostava – ಮನಸ್ಸಿನಿಂದ ಕನ್ನಡ ಮಾತನಾಡಿ
ಕನ್ನಡ ಭಾಷೆಯು ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಆದರೆ ಕನ್ನಡ ನಾಡಲ್ಲಿ ಹುಟ್ಟಿದ ನಾವುಗಳ ಕನ್ನಡ ಭಾಷೆಯ ಕುರಿತು ಕೀಳಿರಮೆ ಹೊಂದಿದ್ದೇವೆ. ಕೆಲವೊಂದು ಕಡೆ ಒತ್ತಡದಿಂದ ಕನ್ನಡ ಭಾಷೆಯನ್ನು ಬಳಸುತ್ತಾರೆ. ಆದರೆ ಇದು ತಪ್ಪು, ಕನ್ನಡ ಭಾಷೆಯನ್ನು ನಾವೆಲ್ಲರೂ ಮನಸ್ಸಿನಿಂದ, ಪ್ರೀತಿ ಪೂರ್ವಕವಾಗಿ ಮಾತನಾಡಬೇಕು. ಕನ್ನಡ ಭಾಷೆಗೆ ಭಾರತದಲ್ಲಿ ದೊಡ್ಡ ಸ್ಥಾನವಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಇಂಗ್ಲೀಷ್ ವ್ಯಾಮೋಹದಿಂದ ಇಂದು ಕನ್ನಡಕ್ಕೆ ಕುತ್ತು ಬರುತ್ತಿದೆ. ವ್ಯವಹಾರಿಕ ಭಾಷೆ ಯಾವುದೇ ಇರಲಿ ಎಲ್ಲರೂ ಕನ್ನಡವನ್ನು ಮಾತನಾಡಬೇಕು. ಅದರಲ್ಲೂ ಮುಖ್ಯವಾಗಿ ಇಂದಿನ ಮಕ್ಕಳು ಮೊಬೈಲ್ ಗಳಲ್ಲೆ ಪ್ರಪಂಚ ನೋಡುತ್ತಾರೆ ಇದರಿಂದ ಕನ್ನಡ ಕಲಿಯಲು ಸಾಧ್ಯವಿಲ್ಲ. ತಾವುಗಳು ಸದಾ ಪುಸ್ತಕಗಳನ್ನು ಓದುತ್ತಿದ್ದರೇ ಕನ್ನಡ ಭಾಷೆಯನ್ನು ನೀವು ಚೆನ್ನಾಗಿ ಕಲಿಯುತ್ತೀರಿ. ಮೊಬೈಲ್ ಬಿಟ್ಟು ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.

Kannada Rajyostava – 2500 ವರ್ಷಗಳ ಇತಿಹಾಸವಿರುವ ಕನ್ನಡ – ಶಿಕ್ಷಕ ರಾಜಾರೆಡ್ಡಿ
ಬಳಿಕ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕ ರಾಜಾರೆಡ್ಡಿ, ಸುಮಾರು 2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕಾದ ಕೆಲಸ ಆಗಬೇಕಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡಲ್ಲಿ ನಾವು ಹುಟ್ಟಿರುವುದು ನಮ್ಮೆಲ್ಲರ ಅದೃಷ್ಟ ಎಂದೇ ಭಾವಿಸಬೇಕು. ಇಂಗ್ಲೀಷ್ ಭಾಷೆಗೂ ಕನ್ನಡ ಭಾಷೆಗೂ ತುಂಬಾನೆ ವ್ಯತ್ಯಾಸವಿದೆ. ಕನ್ನಡ ಭಾಷೆ ಸುಲಭವಾದ ಹಾಗೂ ಅರ್ಥಪೂರ್ಣವಾದ ಭಾಷೆಯಾಗಿದೆ. ಆದರೆ ಇಂದು ಅನೇಕರು ಇಂಗ್ಲೀಷ್ ಭಾಷೆಯ ಗುಂಗಿನಲ್ಲಿದ್ದಾರೆ. ಇಡೀ ದೇಶದಲ್ಲಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಎರಡನೇ ರಾಜ್ಯ ನಮ್ಮ ಕರ್ನಾಟಕ. ಮಹಾಭಾರತದ 18 ಪರ್ವಗಳಲ್ಲಿ ಭೀಷ್ಮ ಹಾಗೂ ಸಭಾ ಪರ್ವದಲ್ಲಿ ಕರ್ನಾಟಕದ ಉಲ್ಲೇಖವನ್ನು ಸಹ ಕಾಣಬಹುದಾಗಿದೆ. ಕನ್ನಡ ಭಾಷೆಯ ಹಿರಿಮೆ, ಗರಿಮೆ, ಇತಿಹಾಸ ಹಾಗೂ ಕನ್ನಡ ಭಾಷೆಯ ಉಳಿವಿಗೆ ಏನೆಲ್ಲಾ ಕೆಲಸ ಮಾಡಬೇಕು ಎಂಬುದನ್ನು ವಿವರವಾಗಿ ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
Kannada Rajyostava – ರಾಜ್ಯೋತ್ಸವದ ಸಂಭ್ರಮ ಮತ್ತು ಸನ್ಮಾನ
ಇನ್ನೂ ಕಾರ್ಯಕ್ರಮದಲ್ಲಿ ತಾಪಂ ಇಒ ನಾಗಮಣಿ, ಪಪಂ ಸದಸ್ಯೆ ವೀಣಾ ಕನ್ನಡ ಭಾಷೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು. ಇದೇ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು, ಕನ್ನಡ ಭಾಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕನ್ನಡಾಂಭೆಯ ರಥದೊಂಧಿಗೆ ಮೆರವಣಿಗೆ ನಡೆಸಲಾಯಿತು. Read this also : ನವೆಂಬರ್ 2025 ರಿಂದ ಆಧಾರ್ ಅಪ್‌ಡೇಟ್ ಸಂಪೂರ್ಣ ಬದಲಾವಣೆ: ಇನ್ನಷ್ಟು ವೇಗ, ಸುಲಭ, ಮತ್ತು ಬಹುಶಃ ಉಚಿತ..!
Kannada Rajyostava – ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು
ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಬಿಇಒ ಕೃಷ್ಣಕುಮಾರಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಕೃಷಿ ಇಲಾಖೆಯ ಕೇಶವರೆಡ್ಡಿ, ತೋಟಗಾರಿಕೆ ಇಲಾಖೆಯ ದಿವಾಕರ್, ರೇಷ್ಮೆ ಇಲಾಖೆಯ ನಟರಾಜ್, ಕಸಾಪ ಅಧ್ಯಕ್ಷ ಬಿ.ಮಂಜುನಾಥ್, ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.

