Janmashtami 2024- ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯ ಸಾರವನ್ನು ಮಾತ್ರವೇ ಬೋಧಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. (Janmashtami 2024) ಅವರ ಆದರ್ಶಗಳನ್ನು ಪಾಲನೆ ಮಾಡುವುದರ ಮೂಲಕ ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ಗುಡಿಬಂಡೆ ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ (Janmashtami 2024) ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಪರಮಾತ್ಮನ ವಿಚಾರದಾರೆಗಳನ್ನು ಮತ್ತು ಭಗವತ್ ಗೀತೆ ಸಂದೇಶ, ಸಾರಾಂಶವನ್ನು (Janmashtami 2024) ಇಂದಿನ ಮನುಕುಲ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ಪಾಲಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಮಕ್ಕಳಿಗೆ ಮಹಾಭಾರತ ರಾಮಾಯಣ ಹಾಗೂ (Janmashtami 2024) ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸುವ ಕೊಡುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರ ಜವಾಬ್ದಾರಿಯಾಗಿದೆ. (Janmashtami 2024) ಕಲಿಕೆಯಲ್ಲಿ ಮಕ್ಕಳಿಗೆ ಉತ್ತಮ ನೀತಿ ಪಾಠಗಳು ಹಾಗೂ ಸಮಾಜದ ಒಳಿತಿಗಾಗಿ ಮಾಡಿದ ಸಾಧನೆಗಳ ಬಗ್ಗೆ ತಿಳುವಳಿಕೆ ಮಾಡಿಸಬೇಕು ಎಂದರು.
ಬಳಿಕ ಕಸಾಪ ತಾಲೂಕು ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ, (Janmashtami 2024) ಮಹಾಭಾರತ ಹಾಗೂ ಭಗವದ್ಗೀತೆ ನೀಡುವ ಸಂದೇಶವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಧರ್ಮವನ್ನು ಉಳಿಸುವಲ್ಲಿ ಕೃಷ್ಣನ ಪಾತ್ರ ಮಹತ್ವದ್ದಾಗಿದೆ. ಅಧರ್ಮವನ್ನು ನಾಶಗೊಳಿಸಲು ಕೃಷ್ಣ ಅವತಾರ ಎತ್ತಿದರು. (Janmashtami 2024) ಅಂಧಕಾರವನ್ನು ತೊಲಗಿಸಲು ಕೃಷ್ಣ ಮಧ್ಯರಾತ್ರಿ ಜನ್ಮ ತಾಳಿದ. ಅಷ್ಟಮಿ ದಿನ ಜನಿಸುವ ಮೂಲಕ 8 ಮದಗಳಿಂದ ಮಾನವ ದೂರವಿರಬೇಕು ಎಂಬ ಸಂದೇಶ ನೀಡಿದ್ದಾನೆ. (Janmashtami 2024) ಕೃಷ್ಣನ ಜೀವನ ದರ್ಶನ ಮಾಡಿಕೊಂಡು ಎಲ್ಲರೂ ಸನ್ಮಾರ್ಗದಲ್ಲಿ ಸಾಗುವಂತಾಗಬೇಕು ಎಂದರು.
ಈ ವೇಳೆ (Janmashtami 2024) ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೀಪತಿರೆಡ್ಡಿ, ಕರುನಾಡು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಫಯಾಜ್, ಆರೋಗ್ಯ ರಕ್ಷಾ ಸಮಿತಿಯ ಬುಲೆಟ್ ಶ್ರೀನಿವಾಸ್, ಮುಖಂಡರಾದ ಆದಿನಾರಾಯಣಸ್ವಾಮಿ, ಗಾಂಧಿ ಶ್ರೀನಿವಾಸ್, ನಾಗರಾಜ್, ನರೇಂದ್ರ ಸೇರಿದಂತೆ ಹಲವರು ಇದ್ದರು.