ಸದ್ಯ ರಾಜ್ಯದಲ್ಲಿ ಮುಡಾ ಸೈಟು ಹಂಚಿಕೆ ಹಗರಣ ಭಾರಿ ಚರ್ಚೆಯಾಗುತ್ತಿದ್ದು, ವಿಪಕ್ಷಗಳು ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಈ ನಡುವೆ ಶಾಸಕ ಗಾಲಿ ಜನಾರ್ಧನರೆಡ್ಡಿಯವರು (Janardhana Reddy) ಸಂಡೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ್ದು, ರಾಜ್ಯದಲ್ಲಿ ಉಪಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಕಾಂಗ್ರೇಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮುಡಾ ಹಗರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜನಾರ್ಧನರೆಡ್ಡಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಸಿಎಂ A1 ಆರೋಪಿಯಾಗಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಿಎಂ ಜೈಲಿಗೆ ಹೋಗುವುದು ಗ್ಯಾರಂಟಿಯಾಗಿದೆ. ಉಪಚುನಾವಣೆ ಆದ ಮೇಲೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. 25 ಸಾವಿರ ಕೋಟಿ ರೂ. ಗಣಿಗಾರಿಕೆ ಹಣವನ್ನು ಸಂಗ್ರಹಿಸಿದ್ದಾರೆ. ಆದರೆ ಅದನ್ನು ಬಳಕೆ ಮಾಡಲು ಅವರಿಂದ ಆಗುತ್ತಿಲ್ಲ. ಅಭಿವೃದ್ಧಿ ಬದಲು ಆ ದುಡ್ಡು ಹೊಡೆಯಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಕರ್ನಾಟಕದ ಸಿಎಂ ಆಗಿ ಬಳ್ಳಾರಿ, ಸಂಡೂರು ಜಿಲ್ಲೆಗೆ ಸಿದ್ದರಾಮಯ್ಯನವರ ಕೊಡುಗೆ ಶೂನ್ಯ. ಕೆರೆಗಳನ್ನು ನಿರ್ಮಾಣ ಮಾಡಿ, ತುಂಗಭದ್ರಾ ನೀರು ಹರಿಸಿ ಮನೆ ಮನೆಗೆ ನೀರು ಕೊಟ್ಟಿದ್ದೇವೆ. ಬಳ್ಳಾಗಿ ಮೊದಲು ಹೇಗಿತ್ತು, ಈಗ ಹೇಗಾಗಿದೆ, ನಾವು ಈ ಭಾಗವನ್ನು ತುಂಬಾನೆ ಅಭಿವೃದ್ದಿ ಮಾಡಿದ್ದೇವೆ. ಸಂಡೂರಿನಲ್ಲಿ ನಾವು ಗೆಲ್ಲದೇ ಇದ್ದರೂ 250 ಕೋಡಿ ರಸ್ತೆ ಅಭಿವೃದ್ದಿಗೆ ನೀಡಿದ್ದೇವೆ. ರೆಡ್ಡಿ ಬಗ್ಗೆ ಮಾತನಾಡದೇ ಇರಲು ಆಗುವುದೇ ಇಲ್ಲ. ನಾನು ಒಬ್ಬರ ಜೇಬಿಗೆ ಕತ್ತರಿ ಹಾಕಿಲ್ಲ, ಮೋಸ ಮಾಡಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಅಹಂಕಾರದ ಮನುಷ್ಯ. ನಾನು ಒಂದು ಲಕ್ಷ ಕೋಟಿ ಲೂಟಿ ಮಾಡಿದ್ದೇನೆ ಎಂದು ಆರೋಪ ಮಾಡುತ್ತಾರೆ. ಸಿಎಂ ಹುಚ್ಚರಾಗಿದ್ದಾರೆ, ಯುಪಿಎ ಸರ್ಕಾರ ಇದ್ದಾಗ ಏನು ಕಿತ್ತುಕೊಳ್ಳಲು ಆಗಿಲ್ಲ. ಈಗ ಏನು ಮಾತನಾಡುತ್ತೀರಾ, ಸದ್ಯ ಅವರ ನೆಮ್ಮದಿ ಕಳೆದು ಹೋಗಿದೆ. ರಾತ್ರಿ ನಿದ್ದೇ ಮಾಡೋಕು ಆಗುತ್ತಿಲ್ಲ. ಯಾವಾಗ ಬಂಧನ ಆಗ್ತೀನಿ ಎಂಬ ಭೀತಿಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದ್ದಾರೆ.