ನಮ್ಮ ಸಮಾಜದಲ್ಲಿ ತಂದೆಯನ್ನು ಮಗುವಿನ ರಕ್ಷಕ ಮತ್ತು ಆಧಾರಸ್ತಂಭ ಎಂದು ಕರೆಯಲಾಗುತ್ತದೆ. ಆದರೆ ಪಂಜಾಬ್ ನ ಜಲಂಧರ್ನಲ್ಲಿ ನಡೆದ ಈ ಘಟನೆ ತಂದೆ ಎಂಬ ಪವಿತ್ರ ಸಂಬಂಧಕ್ಕೇ ಕಳಂಕ ತರುವಂತಿದೆ. ಹಸಿವಿನಿಂದ ಕಂಗೆಟ್ಟು ಅಳುತ್ತಿದ್ದ ಐದು ವರ್ಷದ ಮಗುವಿಗೆ ಅನ್ನ ನೀಡಿ ಸಂತೈಸಬೇಕಾದ ತಂದೆಯೇ, (Crime) ಅವಳಿಗೆ ಮದ್ಯ ಕುಡಿಸಿ ತದನಂತರ ಕತ್ತು ಹಿಸುಕಿ ಕೊಂದಿರುವ ಘೋರ ಘಟನೆ ವರದಿಯಾಗಿದೆ.

Crime – ಅಳುವ ಮಗುವಿನ ಬಾಯಿಗೆ ಮದ್ಯ ಸುರಿದ ಕ್ರೂರಿ
ಮೂಲತಃ ಛತ್ತೀಸ್ಗಢದವನಾದ ಅರವಿಂದ್ ಎಂಬುವವನು ಜಲಂಧರ್ನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ವಿಪರೀತ ಕುಡಿತದ ವ್ಯಸನಿಯಾಗಿದ್ದ ಈತ, ಕೆಲಸವಿಲ್ಲದ ಕಾರಣ ಮನೆಯಲ್ಲೇ ಇರುತ್ತಿದ್ದನು. ಮಗುವಿನ ತಾಯಿ ಎಂದಿನಂತೆ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಐದು ವರ್ಷದ ಮಗಳು ಹಸಿವಿನಿಂದ ಜೋರಾಗಿ ಅಳಲು ಶುರುಮಾಡಿದ್ದಾಳೆ. ಕುಡಿದ ಅಮಲಿನಲ್ಲಿದ್ದ ಅರವಿಂದ್, ಮಗುವಿನ ಅಳಲು ನಿಲ್ಲಿಸಲು ಮಾಡಿದ ಕೆಲಸ ಅಕ್ಷರಶಃ ಅಮಾನವೀಯವಾಗಿತ್ತು. ಆತ (Crime) ಮಗು ಸುಮ್ಮನಾಗಲಿ ಎಂದು ಅವಳ ಬಾಯಿಗೆ ಬಲವಂತವಾಗಿ ಆಲ್ಕೋಹಾಲ್ ಸುರಿದಿದ್ದಾನೆ. Read this also : ಹೆತ್ತ ತಾಯಿಯನ್ನೇ ಮೃಗೀಯವಾಗಿ ಥಳಿಸಿದ ಪಾಪಿ ಮಗ: ಸಿಸಿಟಿವಿಯಲ್ಲಿ ಸೆರೆಯಾಯ್ತು ಮಗನ ಅಸಲಿ ಕ್ರೌರ್ಯ!
ಕೋಪದ ಕೈಗೆ ಬುದ್ಧಿ ಕೊಟ್ಟ ತಂದೆಯ ಅಟ್ಟಹಾಸ
ಬಾಯಿಗೆ ಮದ್ಯ ಸುರಿದರೂ ಮಗುವಿನ ಅಳಲು ನಿಲ್ಲದಿದ್ದಾಗ ಅರವಿಂದ್ ಅತೀವ ಕೋಪಗೊಂಡಿದ್ದಾನೆ. ಅಳುತ್ತಿದ್ದ ಪುಟ್ಟ ಕಂದಮ್ಮನನ್ನು ನೆಲಕ್ಕೆ ಎಸೆದ ಕ್ರೂರಿ, ಅಷ್ಟಕ್ಕೇ ಸುಮ್ಮನಾಗದೆ ಆಕೆಯ ಕತ್ತು ಹಿಸುಕಿ ಉಸಿರುಗಟ್ಟಿಸಿದ್ದಾನೆ. ಇದರಿಂದಾಗಿ ಆ ಪುಟ್ಟ ಬಾಲಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಈ ದೃಶ್ಯವನ್ನು ಗಮನಿಸಿದ (Crime) ನೆರೆಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಡತನ ಮತ್ತು ವ್ಯಸನದ ಕರಾಳ ಹಿನ್ನೆಲೆ
ಪೊಲೀಸರ ತನಿಖೆಯ ಪ್ರಕಾರ, ಅರವಿಂದ್ ನಿರಂತರವಾಗಿ ಕುಡಿತದ ಅಮಲಿನಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ನಡೆಸುತ್ತಿದ್ದನು. ಮನೆಯಲ್ಲಿ ತೀವ್ರ ಆರ್ಥಿಕ (Crime) ಸಂಕಷ್ಟವಿದ್ದರೂ, ಆತ ಸಿಕ್ಕಲ್ಪಟ್ಟ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ನೆರೆಮನೆಯ ನಿವಾಸಿ ಹಿಮ್ಮತ್ ಕುಮಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನ್ನ ಕರುಳ ಕುಡಿಯನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
