ಕೆಲವು ದಿನಗಳ ಹಿಂದೆಯಷ್ಟೆ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ವಿರುದ್ದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಿಡಿಕಾರಿದ್ದಾರೆ. ಸಹಿಷ್ಣು ಆಗಿರುವವರನ್ನು ಕೆದಕುವುದೇ ಕೆಲವರಿಗೆ ಚಾಳಿಯಾಗಿ ಹೋಗಿದೆ. ಹಿಂದೂಗಳನ್ನು ಕೆಣಕಿ ಗೊಂದಲ ಸೃಷ್ಟಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು. ಈ ಕಾರಣದಿಂದಲೇ ಗೊಂದಲದ ಹೇಳಿಕೆ ಕೊಡುತ್ತಾ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಷ ಹೊರಹಾಕಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ, ಹಿಂದೂಗಳ ಬಗ್ಗೆ ಕಾಂಗ್ರೇಸ್ ನಾಯಕ ರಾಹುಲ್ ನಾಯಕ ನೀಡಿದ ಹೇಳಿಕೆಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಮಾಜದ ಎರಡು ಪ್ರಮುಖ ಪಂಗಡಗಳನ್ನು ಒಡೆಯುವುದು, ಅಲ್ಲಿ ಬೆಂಕಿ ಹಚ್ಚುವುದು ಏನು ಕಷ್ಟದ ಕೆಲಸವಲ್ಲ. ಈಗಾಗಲೇ ಮಣಿಪುರದಲ್ಲಿ ಬೆಂಕಿ ಹಚ್ಚಿದ್ದಾಗಿದೆ. ಈಗಲೂ ಸಹ ಅದನ್ನು ತಣ್ಣಗೆ ಮಾಡಲು ಸಾಧ್ಯವಾಗಿಲ್ಲ, ಈ ರೀತಿಯಿರುವಾಗ ರಾಜಕೀಯ ನಾಯಕರು ಮುಖಂಡರು ಎನ್ನುವಂತಹವರು, ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಾರೆ ಎಂದರೇ ಸಮಾಜ ಅಂತಹವರನ್ನು ಮೊದಲು ದೂರ ಇಡಬೇಕು ಎಂದರು.
ಇನ್ನೂ ಇದೇ ಸಮಯದಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾನ ಕಾಮಗಾರಿಯ ಬಗ್ಗೆ ಸಹ ಮಾತನಾಡಿದರು. ರಾಮಮಂದಿರ ನಿರ್ಮಾಣ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಈ ಕಾರಣದಿಂದ ಮಳೆಯ ಬಂದಾಗ ಮಂದಿರ ಸೋರಿದೆ. ಇನ್ನೂ ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ರಾಜಕೀಯ ಪಕ್ಷಗಳಿಂದ ಜಾತಿ ವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದೆ. ಆಯಾ ಪಂಗಡಗಳಿಗೆ ಅನ್ಯಾಯವಾದಾಗ ಆಯಾ ಸಮುದಾಯಗ ಮಠಾಧಿಪತಿಗಳು ವಿರೋಧಿಸುತ್ತಾರೆ. ಜಾತಿ ಆಧಾರದ ಮೇಲೆ ಸೀಟು, ಟಿಕೆಟ್, ನಿಗಮ ಮಂಡಳಿಗಳಂತಹವು ನೀಡುವುದಾದರೇ, ಮಠಾಧೀಶರು ಸಹ ಮಾತನಾಡುವುದು ಸರಿ, ಅಲ್ಲಿ ಮೊದಲು ಸರಿಯಾದರೇ, ಇಲ್ಲೂ ಸರಿಯಾಗುತ್ತದೆ. ಅಧಿಕಾರದಲ್ಲಿ ಸಂವಿಧಾನ ಬದ್ದವಾಗಿ ಹಾಗೂ ಕಾನೂನು ಬದ್ದವಾಗಿ ಆಡಳಿತ ಮಾಡಬೇಕು. ಸಿಎಂ ಡಿಸಿಎಂ ಸ್ಥಾನಗಳ ಬಗ್ಗೆ ಮಠಾಧೀಶರ ಹೇಳಿಕೆಗಳ ಬಗ್ಗೆ ರಿಯಾಕ್ಟ್ ಆದರು.