ಇಸ್ರೋದಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಬೆಂಗಳೂರಿನ ಇಸ್ರೋದಲ್ಲಿ (ISRO Recruitment 2024) ನೇಮಕಾತಿ ಯ ಅಧಿಸೂಚನೆಯನ್ನು ಹೊರಡಿಸಿದ್ದು, ಒಟ್ಟು 103 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಧಿಸೂಚನೆಯಲ್ಲಿ ಏನೆಲ್ಲಾ ಅರ್ಹತೆಗಳನ್ನು ಪೂರೈಸಬೇಕು, ಹುದ್ದೆಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವೇತನ ಸೇರಿದಂತೆ ಮತಷ್ಟು ಉಪಯುಕ್ತ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.9 ಕೊನೆಯ ದಿನಾಂಕವಾಗಿರುತ್ತದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation – ISRO) ಯಲ್ಲಿ 103 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇಸ್ರೋದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಅನನ್ಯ ಅವಕಾಶವನ್ನು ಒದಗಿಸುತ್ತದೆ. ಅಧಿಸೂಚನೆಯಲ್ಲಿ (ISRO Recruitment 2024) ತಿಳಿಸಿರುವಂತೆ ವೈದ್ಯಕೀಯ ಅಧಿಕಾರಿ-ಎಸ್‌ಡಿ, ವೈದ್ಯಕೀಯ ಅಧಿಕಾರಿ-ಎಸ್‌ಸಿ, ಸೈಂಟಿಸ್ಟ್ ಇಂಜಿನಿಯರ್-ಎಸ್‌ಸಿ, ತಾಂತ್ರಿಕ ಸಹಾಯಕ, ವಿಜ್ಞಾನಿ ಸಹಾಯಕ, ತಂತ್ರಜ್ಞ-ಬಿ, ಡ್ರಾಫ್ಟ್ಸ್ಮನ್-ಬಿ ಮತ್ತು ಸಹಾಯಕ (ಅಧಿಕೃತ ಭಾಷೆ) ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು (ISRO Recruitment 2024)ಇಸ್ರೋದ ಅಧಿಕೃತ ವೆಬ್‌ಸೈಟ್ isro.gov.in ಗೆ ಭೇಟಿ ನೀಡಿ ಮೂಲಕ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9 ಅಕ್ಟೋಬರ್ ದಿನಾಂಕವಾಗಿದೆ.
ಇನ್ನೂ ಅಧಿಸೂಚನೆಯಲ್ಲಿ ತಿಳಿಸಿದ ಹುದ್ದೆಗಳಿಗೆ (ISRO Recruitment 2024) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ಹಾಗೂ ಗರಿಷ್ಟ 35 ವರ್ಷ ವಯಸ್ಸಾಗಿರಬೇಕು (ವಿಜ್ಞಾನಿ ಇಂಜಿನಿಯರ್ (SC): 18 ರಿಂದ 30 ವರ್ಷಗಳು, ಸಹಾಯಕ (ಅಧಿಕೃತ ಭಾಷೆ): 18 ರಿಂದ 28 ವರ್ಷಗಳು). ಜೊತೆಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆಯಿದೆ. (ISRO Recruitment 2024) ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತೆ 21,700-2,08,700 ರೂಪಾಯಿಗಳವರೆಗೆ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ISRO ವೆಬ್‌ಸೈಟ್‌ಗೆ ಭೇಟಿ https://www.isro.gov.in/Careers.html ನೀಡಿ ಮಾಹಿತಿ ಪಡೆಯಬಹುದಾಗಿದೆ.