IPPB Recruitment 2025 – ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಶುಭ ಸುದ್ದಿ ನೀಡಿದೆ. ಅಂಚೆ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ಐಪಿಪಿಬಿ, 348 ಗ್ರಾಮೀಣ ಡಾಕ್ ಸೇವಕರ (Gramin Dak Sevak – GDS) ಹುದ್ದೆಗಳನ್ನು Executive ಶ್ರೇಣಿಯಲ್ಲಿ ಭರ್ತಿ ಮಾಡಲು ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 29, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

IPPB Recruitment 2025 – ನೇಮಕಾತಿ ಅವಲೋಕನ
ಈ ನೇಮಕಾತಿಯು ಭಾರತದಾದ್ಯಂತ ನಡೆಯಲಿದ್ದು, ಅಂಚೆ ಇಲಾಖೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ GDS ಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) 2025ನೇ ಸಾಲಿಗೆ ಮಹತ್ವದ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಗ್ರಾಮೀಣ ಡಾಕ್ ಸೇವಕರು ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಒಂದು ಸುಂದರ ಅವಕಾಶವಾಗಿದೆ.
- ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕರು
- ಹುದ್ದೆಗಳ ಸಂಖ್ಯೆ: 348
- ಉದ್ಯೋಗ ಸ್ಥಳ: ಅಖಿಲ ಭಾರತ
- ಅಧಿಕೃತ ವೆಬ್ಸೈಟ್: https://ippbonline.com/
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09-10-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-10-2025
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29-10-2025
ವಿದ್ಯಾರ್ಹತೆ:
- ಅಭ್ಯರ್ಥಿಗಳು ಕಡ್ಡಾಯವಾಗಿ ಯಾವುದೇ ವಿಷಯದಲ್ಲಿ ಪದವಿ (Degree) ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಆಗಸ್ಟ್ 01, 2025 ರಂತೆ ಅಭ್ಯರ್ಥಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.
- ಸರ್ಕಾರದ ನಿಯಮಗಳ ಪ್ರಕಾರ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
- ಎಲ್ಲಾ ಅಭ್ಯರ್ಥಿಗಳಿಗೆ: ₹750/-
- ಪಾವತಿ ವಿಧಾನ: ಆನ್ಲೈನ್ ಮೂಲಕ
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹30,000/- ವೇತನ ನೀಡಲಾಗುತ್ತದೆ.
Read this also : ಸಿಡಾಕ್ ನಲ್ಲಿರುವ 687 ಪ್ರಾಜೆಕ್ಟ್ ಎಂಜಿನಿಯರ್, ಟೆಕ್ನಿಷಿಯನ್ ಹುದ್ದೆಗಳ ಭರ್ತಿ, ಇಲ್ಲಿದೆ ಸಂಪೂರ್ಣ ವಿವರ
ಆಯ್ಕೆ ವಿಧಾನ:
- ಮೆರಿಟ್ ಪಟ್ಟಿ
- ಆನ್‌ಲೈನ್ ಪರೀಕ್ಷೆ
- ಸಂದರ್ಶನ

IPPB Recruitment 2025 – ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್ https://ippbonline.com/ ಗೆ ಭೇಟಿ ನೀಡಿ.
- ನಿಮಗೆ ಸಂಬಂಧಿಸಿದ IPPB ವಿಭಾಗವನ್ನು ಆಯ್ಕೆಮಾಡಿ.
- ಗ್ರಾಮೀಣ ಡಾಕ್ ಸೇವಕರು ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
- ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
- ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಶುಲ್ಕ ಪಾವತಿ ಮಾಡಿ.
- ಅರ್ಜಿ ಸಲ್ಲಿಸಿ, ಸಬ್ಮಿಟ್ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
Important Links :
| Official Notification PDF | Notification |
| Apply Online Form | Apply Online |
| Official Website | IPPB |
