Thursday, February 5, 2026
HomeSpecialಜಪಾನ್ ಟ್ರೆಂಡ್ ಇಲ್ಲಿಗೂ ಬಂತು ನೋಡಿ, ಬಾಡಿಗೆ ಸಿಗ್ತಾಳೆ ಗರ್ಲ್ ಫ್ರೆಂಡ್, ವೈರಲ್ ಆದ ಇನ್ಸ್ತಾ...

ಜಪಾನ್ ಟ್ರೆಂಡ್ ಇಲ್ಲಿಗೂ ಬಂತು ನೋಡಿ, ಬಾಡಿಗೆ ಸಿಗ್ತಾಳೆ ಗರ್ಲ್ ಫ್ರೆಂಡ್, ವೈರಲ್ ಆದ ಇನ್ಸ್ತಾ ಪೋಸ್ಟ್…!

ಜಪಾನ್ ನಲ್ಲಿ ಒಂದು ಟ್ರೆಂಡ್ ನಡೆಯುತ್ತಿದೆ. ಜಪಾನ್ ದೇಶದಲ್ಲಿ ಅವಿವಾಹಿತರ ಸಂಖ್ಯೆ ಹೆಚ್ಚಾಗಿದ್ದು, ರೆಂಟೆಡ್ ಗರ್ಲ್‌ಫ್ರೆಂಡ್ ಕಾನ್ಸೆಪ್ಟ್ ಕಾನೂನು ಬದ್ದವಾಗಿ ಜಾರಿ ಮಾಡಲಾಗಿದೆ. ಇದೀಗ ಈ ಟ್ರೆಂಡ್ ಭಾರತದಲ್ಲೂ ಶುರುವಾಗಿದೆ. ಬಾಡಿಗೆಗೆ ಗರ್ಲ್ ಫ್ರೆಂಡ್ ದೊರೆಯುತ್ತಾಳೆ ಎಂಬ ಪೋಸ್ಟ್ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಅಷ್ಟಕ್ಕೂ ವೈರಲ್ ಆಗುತ್ತಿರುವ ಪೋಸ್ಟ್ ನಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

rented girl friend post

ಸದ್ಯ ಸಿಂಗಲ್ ಆಗಿರುವ ಹುಡುಗರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ. ಸುತ್ತಮುತ್ತಲಿನಲ್ಲಿ ಅನೇಕ ಮಂದಿಯಿದ್ದರೂ ಒಂಟಿಯಾಗಿರುವ ಚಿಂತೆ ಕಾಡುತ್ತಿರುತ್ತದೆ. ಆದರೆ ಇನ್ನು ಮುಂದೆ ಅಂತಹ ಸಮಸ್ಯೆಯಿರೊಲ್ಲ ಎನ್ನಬಹುದಾಗಿದೆ. ಏಕೆಂದರೇ ಜಪಾನ್ ಮಾದರಿಯಲ್ಲಿ ಭಾರತದಲ್ಲೂ ಗರ್ಲ್ ಫ್ರೆಂಡ್ ಬಾಡಿಗೆಗೆ ದೊರೆಯಲಿದ್ದಾಳೆ. ಹಣ ಕೊಟ್ಟು ಬಾಡಿಗೆಗೆ ಗರ್ಲ್ ಫ್ರೆಂಡ್ ಪಡೆಯಬಹುದಾಗಿದೆ. ಇಲ್ಲೋಬ್ಬ ಯುವತಿ ತಾನು ಬಾಡಿಗೆಗೆ ಗರ್ಲ್ ಫ್ರೆಂಡ್ ಆಗಲು ಸಿದ್ದ, ಅದಕ್ಕಾಗಿ ಇಂತಿಷ್ಟು ಹಣ ಕೊಡಬೇಕೆಂದು ಪೋಸ್ಟ್ ಹಾಕಿದ್ದಾಳೆ. ಆಕೆಯ ಪೋಸ್ಟ್ ಇದೀಗ ಸಖತ್ ಸದ್ದು ಮಾಡುತ್ತಿದೆ.

ಲಿಂಕ್ ಓಪೆನ್ ಮಾಡಿ ವಿಡಿಯೋ ನೋಡಿ: https://www.instagram.com/reel/C7b0NwEJQZu/

ಭಾರತದ ಮಹಿಳೆಯೊಬ್ಬರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾಡಿಗೆ ಗರ್ಲ್ ಫ್ರೆಂಡ್ ಆಗಲು ನಾನು ಲಭ್ಯ ಎಂದು ಪೋಸ್ಟ್ ಮಾಡಿದ್ದಾಳೆ. ಈ ಬಗ್ಗೆ ರೀ‌ಲ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾಳೆ. ಇದರಲ್ಲಿ ಚಾರ್ಜ್ ಅನ್ನು ಸಹ ಹಾಕಿದ್ದಾಳೆ. ಜಪಾನ್ ಮಾದರಿಯಲ್ಲಿ ಸೇವೆಗಳು ಲಭ್ಯವಿದೆ ಎಂದು ಆಕೆ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಇನ್ಸ್ಟಾಗ್ರಾಂ ಲ್ಲಿ divya_giri ಎಂಬ ಪೇಜ್‌ನ ಮಹಿಳೆಯೊಬ್ಬರು ಈ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಸಿಂಗಲ್ ಡೇಟ್ ಗೆ ಹೋಗಲು ಸಿದ್ದರಿದ್ದೀರಾ, ನನ್ನನ್ನು ಬಾಡಿಗೆಗೆ ಪಡೆಯಿರಿ ಎಂದು ಟೈಟಲ್ ಕೊಟ್ಟಿದ್ದಾರೆ. ಬಳಿಕ ವಿವಿಧ ರೀತಿಯ ಸೇವೆಗೆ ದರಗಳನ್ನು ಸಹ ಹಾಕಿದ್ದಾರೆ. ಚಿಲ್ ಕಾಫಿ ಡೇಟ್ ಗೆ 1500, ಡಿನ್ನರ್‍ ಡೇಟ್ ಮತ್ತು ಮೂವಿ ವೀಕ್ಷಣೆಗೆ 2000, ಬೈಕ್ ರೈಡ್ ಗೆ 4000 ಹೀಗೆ ಹಲವು ಸೇವೆಗಳಿದೆ ಎಂದು ಆಕೆ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇನ್ನೂ ಆಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಓರ್ವ ನೆಟ್ಟಿಗ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ ಏನಾಗುತ್ತಿದೆ ಈ ಜಗತ್ತಿನಲ್ಲಿ ಎಂದು, ಮತ್ತೋರ್ವ ಗರ್ಲ್ ಫ್ರೆಂಡ್ ಬೇಕಾಗಿದ್ದಾಳೆ, ವಸ್ತು ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಅನೇಕರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ವಿಮರ್ಶೆ ಸಹ ಮಾಡುತ್ತಿದ್ದಾರೆ. ಅದು ಏನೇ ಇರಲಿ ಈ ಪೋಸ್ಟ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಟ್ರೆಂಡ್ ಕ್ರಿಯೇಟ್ ಮಾಡಿದೆ ಎನ್ನಲಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular