ನಮ್ಮ ದೇಶದ ಅವಿಭಾಜ್ಯ ಅಂಗವಾದ ಅರುಣಾಚಲ ಪ್ರದೇಶದ (Arunachal Pradesh) ವಿಷಯದಲ್ಲಿ ಚೀನಾ (China) ಪದೇ ಪದೇ ಕಿರಿಕ್ ಮಾಡುವುದು ನಿಂತಿಲ್ಲ. ಗಡಿಯಲ್ಲಿ ಕತ್ತಿ ಮಸೆಯುವುದರ ಜೊತೆಗೆ, ಈಗ ಹೊಸ ತಂತ್ರವೊಂದನ್ನು ಪ್ರಯೋಗಿಸಿದೆ. ಲಂಡನ್‌ನಿಂದ ಜಪಾನ್‌ಗೆ ಹೊರಟಿದ್ದ ಭಾರತೀಯ ಮಹಿಳೆಯೊಬ್ಬರಿಗೆ (Indian woman) ಚೀನಾದ ಶಾಂಘೈ (Shanghai) ವಿಮಾನ ನಿಲ್ದಾಣದಲ್ಲಿ (Airport) ಭಾರೀ ಕಹಿ ಅನುಭವವಾಗಿದೆ.

ಅರುಣಾಚಲ ಪ್ರದೇಶದಲ್ಲಿ ಜನಿಸಿದ ಕಾರಣಕ್ಕೆ ಅವರ ಪಾಸ್‌ಪೋರ್ಟ್ (Passport) “ಅಮಾನ್ಯ” (Invalid) ಎಂದು ಹೇಳಿ, ಪ್ರಯಾಣ ಮುಂದುವರಿಸಲು ಅವಕಾಶ ನಿರಾಕರಿಸಲಾಗಿದೆ. ಬರೋಬ್ಬರಿ 18 ಗಂಟೆಗಳ ಕಾಲ ಅವರಿಗೆ ಅಲ್ಲಿ ಕಿರುಕುಳ ನೀಡಲಾಗಿದೆ ಎಂದು ತಿಳಿದುಬಂದಿದೆ.
Indian woman – ಏನಿದು ಇಡೀ ಘಟನೆ?
ನವೆಂಬರ್ 21 ರಂದು ಅರುಣಾಚಲ ಪ್ರದೇಶ ಮೂಲದ ಪ್ರೇಮಾ ವಾಂಗ್ ಥೊಂಗ್‌ಡಾಕ್ ಅವರು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣ ಬೆಳೆಸಿದ್ದರು. ಅವರ ವಿಮಾನವು ಶಾಂಘೈ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ‘ಲೇಓವರ್’ (Layover) ಹೊಂದಿತ್ತು. ಜಪಾನ್ ಭೇಟಿಗಾಗಿ ಅಗತ್ಯವಿರುವ ಎಲ್ಲಾ ವೀಸಾ ಮತ್ತು ದಾಖಲೆಗಳು ಅವರ ಬಳಿ ಇದ್ದವು. ಆದರೆ, ಇಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಪ್ರೇಮಾ (Indian woman) ಅವರ ಪಾಸ್‌ಪೋರ್ಟ್ ಪರಿಶೀಲಿಸಿದಾಗ ದೊಡ್ಡ ಗಲಾಟೆ ಶುರುವಾಯಿತು. ಕಾರಣ, ಪಾಸ್‌ಪೋರ್ಟ್‌ನಲ್ಲಿ ಅವರ ಹುಟ್ಟಿದ ಸ್ಥಳ ‘ಅರುಣಾಚಲ ಪ್ರದೇಶ’ ಎಂದು ನಮೂದಿಸಲಾಗಿತ್ತು.
“ಅರುಣಾಚಲ ಚೀನಾದ ಭಾಗ, ನಿಮ್ಮ ಪಾಸ್‌ಪೋರ್ಟ್ ಇನ್ವ್ಯಾಲಿಡ್!”
ಚೀನಾದ ಇಮಿಗ್ರೇಶನ್ ಅಧಿಕಾರಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಅರುಣಾಚಲ ಪ್ರದೇಶ ಭಾರತದ ಭಾಗವಲ್ಲ, ಅದು ಚೀನಾದ ಅವಿಭಾಜ್ಯ ಅಂಗ,” ಎಂದು ವಾದಿಸಿದ್ದಾರೆ! ಈ ವಿಚಿತ್ರ ಕಾರಣ ನೀಡಿ ಪ್ರೇಮಾ ಅವರ ಪಾಸ್‌ಪೋರ್ಟ್ ‘ಅಮಾನ್ಯ’ ಎಂದು ಘೋಷಿಸಿ, ಪ್ರಯಾಣಕ್ಕೆ (Indian woman) ಅನುಮತಿ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಅಧಿಕಾರಿಗಳು ವ್ಯಂಗ್ಯವಾಡುತ್ತಾ, “ನೀವು ಚೀನಾ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿ,” ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. Read this also : ಹಸಿದ ಹೊಟ್ಟೆಗೆ ಅನ್ನ ನೀಡಿದ ಬೆಂಗಳೂರಿನ ಉಬರ್ ಚಾಲಕ! ಮುಂಬೈ ಮಹಿಳೆಯ ಮನ ಗೆದ್ದ ಕನ್ನಡಿಗನ ವಿಡಿಯೋ ವೈರಲ್..!
18 ಗಂಟೆಗಳ ಕಠಿಣ ಕಾಯುವಿಕೆ!
ಪ್ರೇಮಾ ಅವರು ತಮ್ಮ ವಿಮಾನ ಹೊರಡುವ ಸಮಯ ಬಂದರೂ, ಕಾಡಿ ಬೇಡಿದರೂ ಅಧಿಕಾರಿಗಳು ಕರಗಲಿಲ್ಲ. ಎಲ್ಲಾ ದಾಖಲೆಗಳು ಸರಿಯಿದ್ದರೂ ಪ್ರಯಾಣಕ್ಕೆ ಅವಕಾಶ ನೀಡದೆ, ಬರೋಬ್ಬರಿ 18 ಗಂಟೆಗಳ ಕಾಲ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆ ಹಿಡಿದರು. ಈ ವೇಳೆ ಅವರಿಗೆ ಯಾವುದೇ ಮೂಲ ಸೌಕರ್ಯವನ್ನೂ ಒದಗಿಸಲಿಲ್ಲ ಎಂದು ಪ್ರೇಮಾ ವಾಂಗ್ ಆರೋಪಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶ: ಸಿಕ್ಕಿತು ಮುಕ್ತಿ
ಎಲ್ಲಾ ಪ್ರಯತ್ನಗಳು ವಿಫಲಗೊಂಡಾಗ, ಲಂಡನ್‌ನಲ್ಲಿರುವ ತಮ್ಮ ಗೆಳತಿಯ ಸಹಾಯದಿಂದ ಪ್ರೇಮಾ ಅವರು ಶಾಂಘೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು (Indian Embassy) ಸಂಪರ್ಕಿಸಿದರು. ರಾಯಭಾರ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿದ ನಂತರವೇ, ಚೀನಾ ಇಮಿಗ್ರೇಶನ್ ಅಧಿಕಾರಿಗಳು ಕೊನೆಗೂ ಪ್ರೇಮಾ ಅವರಿಗೆ ಪ್ರಯಾಣ ಮುಂದುವರಿಸಲು ಅನುಮತಿ ನೀಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ : Click Here
ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿರುವ ಪ್ರೇಮಾ ವಾಂಗ್, “ಅರುಣಾಚಲ ಪ್ರದೇಶ ಭಾರತದ ಭಾಗವಾಗಿದ್ದರೂ ಚೀನಾ ಈ ರೀತಿ ಕಿರಿಕ್ ಮಾಡುತ್ತಿದೆ. ಭಾರತ ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ, ಗಟ್ಟಿ ಧ್ವನಿಯಲ್ಲಿ ಪ್ರತಿಕ್ರಿಯಿಸಬೇಕು,” ಎಂದು ಆಗ್ರಹಿಸಿದ್ದಾರೆ.
