Indian Army – ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ‘ಆಪರೇಷನ್ ಸಿಂಧೂರ್‘ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೇನೆಯ ಯೋಧ ಮುರಳಿ ನಾಯಕ್ (22) ಅವರ ಜೀವನ ಕಥೆ ಈಗ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕಳ್ಳೆತಂಡ ಗ್ರಾಮದವರಾದ ಮುರಳೀ ನಾಯಕ್, 2022ರಲ್ಲಿ ಅಗ್ನಿವೀರ್ ಆಗಿ ಸೇನೆಗೆ ಸೇರಿದ್ದರು. ದೇಶಸೇವೆ ಮಾಡಬೇಕೆಂಬ ಅವರ ಕನಸು ಚಿಕ್ಕ ವಯಸ್ಸಿನಲ್ಲೇ ಮುಗಿದುಹೋಗಿದ್ದು ನೋವಿನ ಸಂಗತಿ.

Indian Army – ಯೋಧ ಮುರಳಿ ನಾಯಕ್ ಅವರ ವೀರಗಾಥೆ
ಮುರಳಿ ನಾಯಕ್ ಭಾರತ-ಪಾಕ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಪಾಕಿಸ್ತಾನಿ ಸೈನಿಕರ ಕೈಯಲ್ಲಿ ಪ್ರಾಣ ಕಳೆದುಕೊಂಡರು. ಅವರ ಕುಟುಂಬ ಇಂದಿಗೂ ಆ ದುರಂತದಿಂದ ಹೊರಬರಲು ಸಾಧ್ಯವಾಗಿಲ್ಲ. ಈ ವೀರ ಯೋಧನ ತ್ಯಾಗ ಮತ್ತು ದೇಶಪ್ರೇಮವನ್ನು ಗೌರವಿಸುವ ಸಲುವಾಗಿ, ‘ವಿಶಾನ್ ಫಿಲ್ಮ್ ಫ್ಯಾಕ್ಟರಿ’ ಅವರ ಜೀವನ ಕಥೆಯನ್ನು ಸಿನಿಮಾ ಮಾಡುತ್ತಿದೆ. Read this also : ಪಾಕ್ ಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ; ಕಂಬನಿ ಮಿಡಿದ ಕರುನಾಡು, ಮುರಳಿ ನಾಯಕ್ ಅಮರ್ ರಹೇ…!
ಯಂಗ್ ಹೀರೋ ಮತ್ತು ಬಿಗ್‌ಬಾಸ್ ಖ್ಯಾತಿಯ ಗೌತಮ್ ಕೃಷ್ಣ ಈ ಚಿತ್ರದಲ್ಲಿ ಮುರಳಿ ನಾಯಕ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಬಯೋಪಿಕ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಂಬಂಧಪಟ್ಟ ಪೋಸ್ಟ್ ಇಲ್ಲಿದೆ ನೋಡಿ : Click Here
Indian Army – ಗೌತಮ್ ಕೃಷ್ಣ ಅವರ ಮಾತು
ನಟ ಗೌತಮ್ ಕೃಷ್ಣ ಅವರು ಈ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ಇದು ಕೇವಲ ಒಂದು ಸಿನಿಮಾ ಅಲ್ಲ, ಇದು ನಿಜವಾದ ಹೀರೋನ ಕಥೆ. ನಮ್ಮ ತೆಲುಗು ಚಿತ್ರರಂಗದಲ್ಲಿ ಯಾವೊಬ್ಬ ಸೈನಿಕನ ಬಗ್ಗೆಯೂ ಈವರೆಗೆ ಬಯೋಪಿಕ್ ಬಂದಿಲ್ಲ. ಇದು ಮೊದಲ ಪ್ರಯತ್ನ. ಮುರಳೀ ನಾಯಕ್ ಅವರ ಬಗ್ಗೆ ಕೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು.

ಇಂತಹ ಮಹತ್ತರ ಕಥೆಯನ್ನು ತೆರೆಯ ಮೇಲೆ ತರುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ’ ಎಂದು ಗೌತಮ್ ಹೇಳಿದರು. ಮುರಳಿ ನಾಯಕ್ ಅವರ ಕುಟುಂಬಕ್ಕೆ ಈಗಾಗಲೇ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿರುವ ಗೌತಮ್, ಅವರ ಪೋಷಕರು ಈ ಸಿನಿಮಾಗೆ ಯಾವುದೇ ಯೋಚನೆಯಿಲ್ಲದೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
