ದೇಶದಾದ್ಯಂತ ಈಗಾಗಲೇ ಅನೇಕ ಕಡೆ ಮಳೆಯಾಗುತ್ತಿದೆ. ಕೆಲವೊಂದು ಕಡೆ ಮಳೆಯ ಅವಾಂತರ ಸಹ ಸೃಷ್ಟಿಯಾಗಿದೆ. ಮುಂಬೈನಲ್ಲಿ ಸಹ ಭಾರಿ ಮಳೆಯಿಂದಾಗಿ ಸಾವು ನೋವುಗಳು ಕಂಡು ಬಂದಿದೆ. ಇದೀಗ ಹವಾಮಾನ ಇಲಾಖೆ ಮಾಹಿತಿಯಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಇಂದು (ಮೇ.15) ಬುಧವಾರ ಭಾರಿ ಮಳೆಯಾಗುವ ಸೂಚನೆ ನೀಡಿದೆ. ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಕೆಲವೊಂದು ಕಡೆ ಲಘುವಾದ ಮಳೆಯಾಗಬಹುದು ಎಂದು IMD ಮುನ್ಸೂಚನೆ ನೀಡಿದೆ.
IMD ನೀಡಿದ ಮುನ್ಸೂಚನೆಯಂತೆ ಸಿಕ್ಕಿಂ, ಅರುಣಾಚಲ ಪ್ರದೇಶ, ಲಕ್ಷದ್ವೀಪ ಹಾಗೂ ಅಂಡಮಾನ್ ನೀಕೊಬಾರ್, ಗುಜರಾತ್, ಮಹಾರಾಷ್ಟ್ರ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆಯಂತೆ. ಮುಂಬೈನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ. ಸಂಜೆ ವೇಳೆಗೆ ಭಾರಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮುಂಬೈನ ಇತರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವ ಸಹ ಇದೆ ಎನ್ನಲಾಗಿದೆ. ದಕ್ಷಿಣದ ಪೆನಿನ್ವುಲರ್ ಭಾರತದಲ್ಲಿ ಮಳೆ ಹಾಗೂ ಬಿಸಿಲಿನ ಆಟ ಇರಲಿದೆ. ಈ ಭಾಗದಲ್ಲೂ ಸಹ ವ್ಯಾಪಕವಾದ ಮಳೆಯೂ ಸಹ ಆಗಲಿದೆ. ಮೇ.17ರವರೆಗೆ ಕೆಲವೊಂದು ಭಾಗಗಳಲ್ಲಿ ಭಾರಿ ಮಳೆಯ ನಂತರ ಗುಡುಗು, ಮಿಂಚು ಹಾಗೂ ಬಿರುಗಾಳಿ ಕಂಡುಬರಲಿದೆ ಎನ್ನಲಾಗಿದೆ.
ಇನ್ನೂ ನೈರುತ್ಯ ಮಾನ್ಸೂನ್ ಮೇ.19ರ ಸುಮಾರಿಗೆ ದಕ್ಷಿಣದ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿ ಭಾಗಗಳು ಸೇರಿದಂತೆ ನಿಕೋಬಾರ್ ದ್ವೀಪಗಳಿಗೆ ಎಂಟ್ರಿಕೊಡುವ ಸೂಚನೆಯಿದೆ. ಈ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಜೊತೆಗೆ ಪೂರ್ವ ಹಾಗೂ ಮಧ್ಯ ಭಾರತದಲ್ಲೂ ಸಹ ಮಳೆಯಾಗಲಿದೆ. ಇನ್ನೂ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಮೇ.19ರವರೆಗೆ ಬಿರುಗಾಳಿ ಸಮೇತ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಜತೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಸಹ ವ್ಯಾಪಕ ಮಳೆಯಾಗಲಿದೆ ಎಂದು ತಿಳಿದುಬಂದಿದೆ.