Friday, August 1, 2025
HomeNationalನೀವು ಆಯ್ಕೆ ಮಾಡಿಕೊಂಡ ಮಾರ್ಗ ನಮಗೆ ತುಂಬಾ ಗರ್ವಕಾರಣ ಎಂದು ಪವನ್ ಕಲ್ಯಾಣ್ ರವರಿಗೆ ಬೆಂಬಲ...

ನೀವು ಆಯ್ಕೆ ಮಾಡಿಕೊಂಡ ಮಾರ್ಗ ನಮಗೆ ತುಂಬಾ ಗರ್ವಕಾರಣ ಎಂದು ಪವನ್ ಕಲ್ಯಾಣ್ ರವರಿಗೆ ಬೆಂಬಲ ಸೂಚಿಸಿದ ಬನ್ನಿ….!

ಸದ್ಯ ಆಂಧ್ರಪ್ರದೇಶದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಎನ್.ಡಿ.ಎ ಮೈತ್ರಿ ಕೂಟ ಮಾಡಿಕೊಂಡ ಟಿಡಿಪಿ ಹಾಗೂ ಜನಸೇನಾ ಪಕ್ಷ ಈ ಬಾರಿ ಅಧಿಕಾರ ಗದ್ದುಗೆ ಏರಲು ಭಾರಿ ಕಸರತ್ತುಗಳನ್ನು ನಡೆಸುತ್ತಿದೆ. ಇನ್ನೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಪಿಠಾಪುರಂ ಎಂಬ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಸಿನಿರಂಗ ಸೇರಿದಂತೆ ಕುಟುಂಬದ ಕಡೆಯಿಂದಲೂ ಬೆಂಬಲ ಸಿಗುತ್ತಿದೆ. ಕೆಲವರು ಪವನ್ ಕಲ್ಯಾಣ್ ರವರಿಗೆ ಅನುಕೂಲವಾಗುವಂತೆ ಸೋಷಿಯಲ್ ಮಿಡಿಯಾ ಮೂಲಕ ಬೆಂಬಲ ಸೂಚಿಸುತ್ತಿದ್ದರೇ, ಮತ್ತೆ ಕೆಲವರು ನೇರವಾಗಿ ಅವರ ಪರ ಪ್ರಚಾರ ನಡೆಸುತ್ತಾರೆ.

Allu Arjun announced supports to pawan kalyan 1

ಜನಸೇನಾ ಪಕ್ಷದ ಮುಖ್ಯಸ್ಥ ನಟ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ಎಂ.ಎಲ್.ಎ ಯಾಗಿ ಸ್ಫರ್ಧೆ ಮಾಡುತ್ತಿದ್ದಾರೆ. ಈಗಾಗಲೇ ಮೆಗಾಸ್ಟಾರ್‍ ಚಿರಂಜೀವಿ, ಸಾಯಿಧರಮ್ ತೇಜ್, ವರುಣ್ ತೇಜ್ ಸೇರಿದಂತೆ ಅವರು ಕುಟುಂಬಸ್ಥರು ಜನಸೇನಾ ಪಾರ್ಟಿಗೆ ಬೆಂಬಲ ಸೂಚಿಸುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ. ಇದೀಗ ನಟ ಅಲ್ಲು ಅರ್ಜುನ್ ರವರೂ ಸಹ ಟ್ವಿಟರ್‍ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಪವನ್ ಕಲ್ಯಾಣ್ ರವರಿಗೆ ನನ್ನ ಹೃದಯ ಪೂರ್ವಕ ಶುಭಾಷಯಗಳು. ನೀವು ಜನಸೇವೆಗಾಗಿ ನಿಮ್ಮ ಜೀವನವನ್ನು ಸಮರ್ಪಿಸುವಂತಹ ಮಾರ್ಗ ಆಯ್ಕೆ ಮಾಡಿಕೊಂಡಿದ್ದಕ್ಕೆ ನಾನು ಸದಾ ಗರ್ವಿಸುತ್ತಿರುತ್ತೇನೆ. ಕುಟುಂಬ ಸದಸ್ಯನಾಗಿ ನನ್ನ ಪ್ರೀತಿ, ಬೆಂಬಲ ನಿಮಗೆ ಸದಾ ಇರುತ್ತದೆ. ನೀವು ಅಂದುಕೊಂಡಿದ್ದು ನೆರವೇರಲಿ ಎಂದು ಮನಸ್ಪೂರ್ತಿಯಾಗಿ ಶುಭಾಷಯ ಕೋರುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Allu Arjun announced supports to pawan kalyan 0

ಇನ್ನೂ ಕಳೆದ ಚುನಾವಣೆಯ ಸಮಯದಲ್ಲಿ ಅಂದರೇ 2019ರಲ್ಲಿ ಪವನ್ ಕಲ್ಯಾಣ್ ರವರಿಗೆ ಬೆಂಬಲವಾಗಿ ಭೀಮವರಂ ಗೆ ಹೋಗಿ ಪ್ರಚಾರ ಮಾಡಿದ್ದಾರೆ. ಆದರೆ ಕಳೆದ ಚುನಾವನೆಯಲ್ಲಿ ಜನಸೇನಾ ಪಾರ್ಟಿ ಸೋಲನ್ನು ಕಂಡಿತ್ತು. ಈ ಬಾರಿ ಜನಸೇನಾ ಪಾರ್ಟಿ ಬಲವಾದ ಜಯ ಗಳಿಸಬೇಕೆಂದು ಅಭಿಮಾನಿಗಳು ಕೋರುತ್ತಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಮೆಗಾಸ್ಟಾರ್‍ ಚಿರಂಜೀವಿ ರವರು ಸಹ ಸೋಷಿಯಲ್ ಮಿಡಿಯಾ ಮೂಲಕ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಪವನ್ ಕಲ್ಯಾಣ್ ರವರಿಗೆ ಬೆಂಬಲ ಸೂಚಿಸಿದ್ದರು. ಈ ಬಾರಿ ಆಂಧ್ರಪ್ರದೇಶದಲ್ಲಿ ಎನ್.ಡಿ.ಎ ಮೈತ್ರಿಕೂಟ ಜಯಗಳಿಸಲು ಭಾರಿ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಪವನ್ ಕಲ್ಯಾಣ್ ರವರ ಜಾತಕದಂತೆ ಅವರು ಸಿಎಂ ಆಗೊಲ್ಲ. ಮೈತ್ರಿಯಿಂದ ಪ್ರಯೋಜನ ವಿಲ್ಲ. ಚಂದ್ರಬಾಬು ನಾಯ್ಡು ಅವರಿಗೆ ಮೋಸ ಮಾಡುತ್ತಾನೆ ಎಂದು ಭವಿಷ್ಯ ನುಡಿದಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular