ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಅಲ್ಲಿ ಮೋಜು-ಮಸ್ತಿ ಇರುವುದು ಸಾಮಾನ್ಯ. ಆದರೆ ಹೈದರಾಬಾದ್‌ನಲ್ಲಿ (Hyderabad) ನಡೆದ ಈ ಒಂದು ಘಟನೆ ಮಾತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಡ್ರಿಂಕ್ ಅಂಡ್ ಡ್ರೈವ್ (Drink and Drive) ತಪಾಸಣೆ ವೇಳೆ ಸಿಕ್ಕಿಬಿದ್ದ ಆಟೋ ಚಾಲಕನೊಬ್ಬ, ಪೊಲೀಸರಿಗೇ ಸತ್ತ ಹಾವು ತೋರಿಸಿ ಅಲ್ಲಿಂದ ಪರಾರಿಯಾದ ಸಿನಿಮಾ ಮಾದರಿಯ ಘಟನೆ ನಡೆದಿದೆ!

Hyderabad – ಪೊಲೀಸರಿಗೆ ಬೆವರಿಳಿಸಿದ ಆಟೋ ಚಾಲಕ!
ಹೈದರಾಬಾದ್‌ನ ಹಳೆಯ ಬಡಾವಣೆಯಾದ ಚಂದ್ರಯನಗುಟ್ಟದಲ್ಲಿ ಈ ಅಚ್ಚರಿಯ ಘಟನೆ ಸಂಭವಿಸಿದೆ. ಹೊಸ ವರ್ಷದ ಪ್ರಯುಕ್ತ ಪೊಲೀಸರು ಎಂದಿನಂತೆ ರಸ್ತೆಯಲ್ಲಿ ವಾಹನ ಸವಾರರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅನುಮಾನದ ಮೇಲೆ ಆಟೋವೊಂದನ್ನು ತಡೆದ ಪೊಲೀಸರು, ಚಾಲಕನಿಗೆ ಬ್ರೀತ್ ಅನಲೈಸರ್ (Breathalyser test) ಪರೀಕ್ಷೆ ಮಾಡಿದ್ದಾರೆ. ಆಗ ಬಂದ ಫಲಿತಾಂಶ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಕಾನೂನು ಮಿತಿಗಿಂತಲೂ ಅಧಿಕವಾಗಿ ಅಂದರೆ 150 ರೀಡಿಂಗ್ ತೋರಿಸಿದೆ. ಕೂಡಲೇ ಪೊಲೀಸರು ಆತನ ಮೇಲೆ ಕೇಸ್ ದಾಖಲಿಸಿ, ಆತನ ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. Read this also : ಪ್ರಿಯತಮೆಯೊಂದಿಗೆ ಸುತ್ತಾಡುತ್ತಿದ್ದ ಪತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ; ಆಮೇಲೆ ನಡೆದಿದ್ದೇ ಬೇರೆ!
ಸತ್ತ ಹಾವು ತೋರಿಸಿ ಮಾಡಿದ್ದೇನು?
ತನ್ನ ಆಟೋ ಸೀಜ್ ಆಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಆ ಚಾಲಕ ಒಂದು ಪ್ಲಾನ್ ಮಾಡಿದ್ದಾನೆ. ಆಟೋದಲ್ಲಿದ್ದ ತನ್ನ ಸಾಮಾನುಗಳನ್ನು ತೆಗೆದುಕೊಳ್ಳುವಂತೆ ಪೊಲೀಸರು ಹೇಳಿದಾಗ, ಆತ ಹಠಾತ್ತನೆ ತನ್ನ ಬ್ಯಾಗ್‌ನಿಂದ ಸತ್ತ ಹಾವನ್ನು ಹೊರಗೆ ತೆಗೆದಿದ್ದಾನೆ. ಅಷ್ಟೇ ಅಲ್ಲದೆ, ಆ ಹಾವನ್ನು ಪೊಲೀಸರ ಮುಖದ ಮುಂದೆ (Hyderabad) ಹಿಡಿದು ಹೆದರಿಸಲು ಶುರು ಮಾಡಿದ್ದಾನೆ. “ನನ್ನ ಮೇಲೆ ಕೇಸ್ ಹಾಕಬೇಡಿ, ಆಟೋ ಬಿಟ್ಟುಬಿಡಿ” ಎಂದು ಪೊಲೀಸರಿಗೆ ಆತ ಬೆದರಿಕೆ ಹಾಕುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್!
ಆತ ಹಿಡಿದಿರುವುದು (Hyderabad) ನಿಜವಾದ ಹಾವೇ ಅಥವಾ ಸತ್ತ ಹಾವೇ ಎಂಬ ಗೊಂದಲದಲ್ಲಿ ಅಲ್ಲಿದ್ದ ಜನರು ಮತ್ತು ಪೊಲೀಸರು ಒಂದು ಕ್ಷಣ ಆತಂಕಗೊಂಡಿದ್ದಾರೆ. ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದ್ದನ್ನು ಗಮನಿಸಿದ ಆ ಕಿಲಾಡಿ ಚಾಲಕ, ಪೊಲೀಸರು ಸಾವರಿಸಿಕೊಳ್ಳುವಷ್ಟರಲ್ಲಿ ತನ್ನ ಆಟೋ ಮತ್ತು ಹಾವಿನೊಂದಿಗೆ ಅಲ್ಲಿಂದ ನಾಪತ್ತೆಯಾಗಿದ್ದಾನೆ.

