hubballi – ಇತ್ತೀಚಿಗೆ ಸಮಾಜದಲ್ಲಿ ಚಿತ್ರ ವಿಚಿತ್ರವಾದ ಪ್ರೇಮಕಥೆಗಳ ಬಗ್ಗೆ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಅದರಲ್ಲೂ ವಯಸ್ಸಿನ ಅಂತರದ ಪ್ರಶ್ನೆಯೇ ಇಲ್ಲ ಎಂಬಂತೆ, ಮದುವೆಯಾಗಿದ್ದರೂ ಬೇರೊಬ್ಬರ ಮೇಲೆ ಪ್ರೀತಿ ಹುಟ್ಟೋದು ಈ ರೀತಿಯ ವಿಚಿತ್ರ ಕಥೆಗಳನ್ನು ಕೇಳಿರುತ್ತೇವೆ. ಕೆಲವರು ಹಣ, ಆಸ್ತಿಗಾಗಿ ಪ್ರೀತಿಸಿ ಮೋಸ ಹೋಗುವುದನ್ನೂ ಕೇಳಿರುತ್ತೇವೆ.

ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮೊಮ್ಮಗಳ ವಯಸ್ಸಿನ ಯುವತಿಯ ಜೊತೆಗೆ ಅಂಕಲ್ ಓರ್ವ ಲವ್ವಿ ಡವ್ವಿ ಶುರು ಮಾಡಿದ್ದು, ಆ ಯುವತಿಯೊಂದಿಗೆ ಪರಾರಿಯಾಗಿದ್ದಾನೆ. ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೋದ 18 ವರ್ಷದ ಮಗಳು 50 ವರ್ಷದ ಅಂಕಲ್‌ನೊಂದಿಗೆ ಪರಾರಿಯಾಗಿದ್ದಾಳೆ ಎಂದು ಯುವತಿ ಮನೆಯವರು ಕಣ್ಣೀರು ಹಾಕಿದ್ದಾರೆ. ಇದೀಗ ಅಂಕಲ್ ವಿರುದ್ಧ ಯುವತಿ ಮನೆಯವರು ದೂರು ನೀಡಿದ್ದಾರೆ. ಹುಬ್ಬಳಿ ಮೂಲದ 18 ವರ್ಷದ ಯುವತಿಯ ಜೊತೆಗೆ 50 ವರ್ಷದ ಅಂಕಲ್ ಲವ್ವಿ ಡವ್ವಿ ಶುರು ಮಾಡಿದ್ದಾನೆ. ಎರಡು ಮಕ್ಕಳ ತಂದೆಯಾಗಿರುವ ಈ ಮುದಿಯ ಹದಿಹರೆಯದ ಯುವತಿಯನ್ನು ಪ್ರೇಮಪಾಶಕ್ಕೆ ಸಿಲುಕಿಸಿದ್ದಾನೆ. ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೋದ ಆ ಯುವತಿ ನಾಪತ್ತೆಯಾಗಿದ್ದಾಳೆ. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಪಾಲಕರ ಕಣ್ಣೀರು ಹಾಕುತ್ತಿದ್ದಾರೆ. ಮಗಳ ಪೋಟೋ ಹಿಡಿದು ಹುಡುಕಿಕೊಡುವಂತೆ ಪೋಷಕರ ಪೊಲೀಸರು, ಮಾಧ್ಯಮಗಳು ಹಾಗೂ ಕಂಡ ಕಂಡವರ ಮುಂದೆ ಮನವಿ ಮಾಡುತ್ತಿದ್ದಾರೆ.
ಇನ್ನೂ ಹುಬ್ಬಳ್ಳಿಯ ಚಾಲುಕ್ಯ ನಗರದ 50 ವರ್ಷದ ಪ್ರಕಾಶ್ ಗೋಪಿ ಎಂಬಾತನೊಂದಿಗೆ 18 ವರ್ಷದ ಯುವತಿ ಪರಾರಿಯಾಗಿದ್ದಾಳೆ. ಯುವತಿಯ ಬಡತನವನ್ನೇ ಬಂಡವಾಳ ಮಾಡಿಕೊಂಡ ಈ ಅಂಕಲ್ ಆಕೆಯ ತಲೆಕೆಡಿಸಿದ್ದಾನೆ. ಈ ಪ್ರಕಾಶ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಮೂರು ವರ್ಷದ ಹಿಂದಿನಿಂದ ಯುವತಿಯ ಹಿಂದೆ ಬಿದ್ದಿದ್ದ. ಯುವತಿ ಅಪ್ರಾಪ್ತೆಯಾದಾಗಿನಿಂದಲೂ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇನ್ನೂ ಕಳೆದ ವರ್ಷ ಸಹ ಪ್ರಕಾಶ್ ಮೇಲೆ ಪೋಕ್ಸೋ ಪ್ರಕರಣ ಸಹ ದಾಖಲಾಗಿತ್ತು ಎನ್ನಲಾಗಿದೆ.
ಇದಾದ ಬಳಿಕ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದ್ದ ಅಜ್ಜಿಯ ಮನೆಯಲ್ಲಿ ವಾಸವಿದ್ದಳು. ಜನವರಿ 3 ರಂದು ಅಜ್ಜಿ ಮನೆಯಿಂದ ಕಾಣೆಯಾಗಿದ್ದು, ಅಲ್ಲಿಂದಲೇ ಅಂಕಲ್ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 40 ದಿನವಾದರೂ ಸಹ ಇನ್ನೂ ಬಾಲಕಿ ಪತ್ತೆಯಾಗಿಲ್ಲ. ಅತ್ತ ಪೋಷಕರು ತನ್ನ ಮಗಳಿಗಾಗಿ ಕಣ್ಣೀರಾಕುತ್ತಿದ್ದಾರೆ.