Friday, November 22, 2024

HSRP Number Plate : ನೀವು ಇನ್ನೂ HSRP ನಂಬರ್ ಪ್ಲೇಟ್ ಹಾಕ್ಸಿಲ್ವಾ, ಆಗಿದ್ದರೇ ಈ ಸುದ್ದಿ ನೀವು ತಪ್ಪದೇ ಓದಿ….!

2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP Number Plate) ಅಳವಡಿಕೆ ಮಾಡುವುದನ್ನು ಕರ್ನಾಟಕ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಈಗಾಗಲೇ ಈ ನಂಬರ್‍ ಪ್ಲೇಟ್ ಅಳವಡಿಸೋಕೆ ಸಾಕಷ್ಟು ಭಾರಿ ಗಡುವು ಸಹ ನೀಡಲಾಗಿತ್ತು. ಇನ್ನೂ ಸಹ ವಾಹನ ಮಾಲೀಕರು HSRP ನಂಬರ್‍ ಪ್ಲೇಟ್ ಹಾಕಿಸದೇ ಇರುವ ಕಾರಣದಿಂದ ಸೆ.15 ರವರೆಗೂ ಅವಧಿ ನೀಡಿತ್ತು. ಇದೀಗ ಸಾರಿಗೆ ಇಲಾಖೆ ಕೊನೆಯದಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.

HSRP registration update 0

HSRP ನಂಬರ್‍ ಪ್ಲೇಟ್ (HSRP Number Plate) ಅಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಅವಕಾಶ ನೀಡಲಾಗಿದೆ. ಆದರೆ ಸೆಪ್ಟೆಂಬರ್ 16ರಿಂದ ದುಬಾರಿ ದಂಡ ವಿಧಿಸಲಾಗುತ್ತದೆ. ಈಗಾಗಲೇ ಹಲವು ಬಾರಿ ಗಡುವು ವಿಸ್ತರಣೆ ಮಾಡಲಾಗಿತ್ತು. ಇದು ಕೊನೆಯ ದಿನಾಂಕವಾಗಿದ್ದು, ಆದಷ್ಟು ಶೀಘ್ರವಾಗಿ ವಾಹನ ಸವಾರರು HSRP ನಂಬರ್‍ ಪ್ಲೇಟ್ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಇನ್ನೂ ಕೇವಲ 9 ದಿನಗಳು ಮಾತ್ರ ಕಾಲಾವಕಾಶವಿದ್ದು, ಸೆ.15 ರೊಳಗೆ HSRP ನಂಬರ್‍ ಪ್ಲೇಟ್ ಅಳವಡಿಸಿಕೊಳ್ಳದೇ ಇದ್ದರೇ  ದಂಡ ಬೀಳುವ ಸಾದ್ಯತೆಯಿದೆ. ಮೂಲಗಳ ಪ್ರಕಾರ ಈಗಾಗಲೇ ನಾಲ್ಕು ಬಾರಿ HSRP ನಂಬರ್‍ ಪ್ಲೇಟ್ ಅಳವಡಿಕೆಗೆ ಅವಕಾಶ ನೀಡಲಾಗಿತ್ತು. ಸುಮಾರು 1 ಕೋಟಿ 70 ಲಕ್ಷ ಹಳೇಯ ವಾಹನಗಳಲ್ಲಿ ಕೇವಲ 50 ಲಕ್ಷ ವಾಹನಗಳಿಗೆ ಮಾತ್ರ HSRP ನಂಬರ್‍ ಪ್ಲೇಟ್ ಅಳವಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

HSRP number plate deadline extended 1

ಹಳೇಯ ವಾಹನಗಳ ಪೈಕಿ ಶೇ.50 ರಷ್ಟಾದರೂ HSRP ನಂಬರ್‍ ಪ್ಲೇಟ್ ಅಳವಡಿಕೆ ಮಾಡಿಲ್ಲ. ಈ ಬಾರಿ ಗಡುವು ವಿಸ್ತರಣೆ ಮಾಡುವ ಸಾಧ್ಯತೆ ತುಂಬಾನೆ ಕಡಿಮೆಯಿದೆ ಎನ್ನಲಾಗಿದೆ. HSRP ನಂಬರ್‍ ಪ್ಲೇಟ್ ಅಳವಡಿಸಿದಂತಹ ವಾಹನಗಳಿಗೆ ಮೊದಲ ಬಾರಿಗೆ 500, ಎರಡನೇ ಬಾರಿಗೆ 1000 ರೂಪಾಯಿ ದಂಡ ಹಾಕಲಾಗುತ್ತದೆ. ಆದರೂ ನಂಬರ್‍ ಪ್ಲೇಟ್ ಅಳವಡಿಸದೇ ಇದ್ದರೇ ವಾಹನವನ್ನೇ ಸೀಜ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಆನ್‌ಲೈನ್‌ನಲ್ಲಿ HSRP ನಂಬರ್‍ ಪ್ಲೇಟ್ ಗೆ ಅರ್ಜಿ ಸಲ್ಲಿಸುವುದು ಹೇಗೆ

  • ಮೊದಲಿಗೆ bookmyhsrp.com ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಂತರ High Security Registration Plate with Colour Sticker ಎಂಬ ಆಯ್ಕೆ ಕ್ಲಿಕ್‌ ಮಾಡಿ
  • ಬಳಿಕ ರಾಜ್ಯ, ನೋಂದಣಿ ಸಂಖ್ಯೆ, ಛಾಸಿ ಸಂಖ್ಯೆ, ಎಂಜಿನ್‌ ಸಂಖ್ಯೆ ನಮೂದಿಸಿ.
  • ಈಗ ಕ್ಯಾಪ್ಚಾ ನಮೂದಿಸಿ ಕ್ಲಿಕ್‌ ಇಯರ್‌ ಬಟನ್‌ ಕ್ಲಿಕ್‌ ಮಾಡಿ

ಅಂದಹಾಗೆ HSRP ನಂಬರ್‍ ಪ್ಲೇಟ್ ಎಂದರೇನು? ಈ ನಂಬರ್‍ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿರುವುದು ಏಕೆ ಎಂಬ ವಿಚಾರಕ್ಕೆ ಬಂದರೇ, 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ HSRP ನಂಬರ್‍ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ನಂಬರ ಪ್ಲೇಟ್ ಗಳು ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಹೊಸ ವಾಹನಗಳಲ್ಲಿ ಈಗಾಗಲೇ ಈ ಮಾದರಿಯ ನಂಬರ್‍ ಪ್ಲೇಟ್ ಗಳನ್ನು ಅಳವಡಿಸಲಾಗುತ್ತಿದೆ. ಈ ನಂಬರ್‍ ಪ್ಲೇಟ್ ಗಳಲ್ಲಿ ನಂಬರ್‍ ಗಳು ಉಬ್ಬಿಕೊಂಡಿರುವ ಮಾದರಿಯಲ್ಲಿ ಮುದ್ರಣವಾಗಿರುತ್ತದೆ. ನಂಬರ್‍ ಪ್ಲೇಟ್ ನ ಮೇಲ್ಬಾಗದ ಎಡಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದಾಗಿದೆ. 20 ಮಿ.ಮೀಟರ್‍ ಉದ್ದಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗುತ್ತದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!