Hindutva: ಹಿಂದುತ್ವ ಒಂದು ಕಾಯಿಲೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ…!

Hindutva – ಸನಾತನ ಧರ್ಮ, ಹಿಂದೂ ಧರ್ಮದ ಬಗ್ಗೆ ಕೆಲ ನಾಯಕರು ಆಗಾಗ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗಳು ಇದ್ದಂತೆ ಅದನ್ನು ನಾಶ ಮಾಡಬೇಕು ಎಂದು ಹೇಳಿಕೆ ನೀಡಿ ಭಾರಿ ವಿವಾದ ಹುಟ್ಟಿಹಾಕಿದ್ದರು. ಇದೀಗ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಹಿಂದುತ್ವ (Hindutva) ಒಂದು ಖಾಯಿಲೆ ಇದ್ದಂತೆ ಎಂದು ಹೇಳಿಕೆ ನೀಡಿ ಭಾರಿ ವಿವಾದ ಸೃಷ್ಟಿ ಮಾಡಿದ್ದಾರೆ.

ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ​ ಮುಫ್ತಿ ಮಗಳು ಇಲ್ತಿಜಾ ಮುಫ್ತಿ ಹಿಂದುತ್ವ(Hindutva) ಒಂದು ಖಾಯಿಲೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಸೇರಿದಂತೆ ಎನ್.ಡಿ.ಎ ನಾಯಕರು ಸೇರಿದಂತೆ ಅನೇಕರು ಭಾರಿ ಆಕ್ರೋಷ ಹೊರಹಾಕುತ್ತಿದ್ದಾರೆ. ಇಲ್ತಿಜಾ ಭಾನುವಾರ ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಹಿಂದುತ್ವ ಹಾಗೂ ಹಿಂದೂ ಧರ್ಮ ಬೇರೆ ಬೇರೆಯಾಗಿದೆ. ಹಿಂದಿನವರೂ ಹಿಂದುತ್ವದ ಪ್ರಾಬಲ್ಯವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಹಿಂದುತ್ವವನ್ನು 1940ರ ಸಮಯದಲ್ಲಿ ವೀರ ಸಾವರ್ಕರ್‍ ಪರಿಚಯ ಮಾಡಿದ ದ್ವೇಷದ ತತ್ವಶಾಸ್ತ್ರ ಎಂದಿದ್ದಾರೆ.

Iltija mufti comments on hindutva

ಇನ್ನೂ ಭಾರತ ದೇಶ ಸಂಪೂರ್ಣವಾಗಿ ಹಿಂದೂಗಳಿಗೆ ಸೇರಿದೆ ಎಂಬ ಕಲ್ಪನೆಯನ್ನು ಉತ್ತೇಜಿಸುವ ಮೂಲಕ ಹಿಂದೂ ಪ್ರಾಬಲ್ಯವನ್ನು ಸ್ಥಾಪನೆ ಮಾಡುವ ಉದ್ದೇಶ ಹೊಂದಿದೆ. ಇಸ್ಲಾಂ ಧರ್ಮದಂತೆ ಹಿಂದೂ ಧರ್ಮ ಸಹ ಜಾತ್ಯಾತೀತತೆ, ಪ್ರೀತಿ ಮತ್ತು ಸಹಾನುಭೂತಿಯನ್ನು ಉತ್ತೇಜಿಸುವ ಧರ್ಮವಾಗಿದೆ. ಇತ್ತೀಚಿಗೆ ಜೈ ಶ್ರೀರಾಂ ಘೋಷಣೆ ಕೂಗುತ್ತಿಲ್ಲ ಎಂದು ಅನೇಕರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಇಲ್ತಿಜಾ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದು, ಆಕೆ ಬಳಸಿರುವ ಭಾಷೆ ಅವಹೇಳನಕಾರಿಯಾಗಿದೆ ಕೂಡಲೇ ಆಕೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನೂ ಇತ್ತೀಚಿಗೆ ಯುವಕನೋರ್ವ ಮೂರು ಮಂದಿ ಅಪ್ರಾಪ್ತರಿಗೆ ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಇಲ್ತಿಜಾ ಮುಫ್ತಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಹಿಂದುತ್ವ ಒಂದು ರೋಗ ಎಂದು ಆಕ್ರೋಷ ಹೊರಹಾಕಿದ್ದರು.

Leave a Reply

Your email address will not be published. Required fields are marked *

Next Post

LIC Scholarship: ಎಲ್.ಐ.ಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಯಾರಿಗೆಲ್ಲಾ ಈ ಸೌಲಭ್ಯ ಸಿಗಲಿದೆ ಗೊತ್ತಾ?

Mon Dec 9 , 2024
LIC Scholarship ಸಾರ್ವಜನಿಕ ವಲಯದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಯೋಜನೆಯನ್ನು ಪ್ರಾರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ. ಭಾರತೀಯ ಜೀವವಿಮಾ ನಿಗಮವು (LIC) ದೇಶದ ವಿವಿಧ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ. ಈ ಸಂಬಂಧ […]
LIC golden jubilee Scholorship
error: Content is protected !!