ನೆರೆಯ ಬಾಂಗ್ಲಾದೇಶದಲ್ಲಿ (Bangladesh) ಅಶಾಂತಿಯ ಬೆಂಕಿ ಇನ್ನೂ ಆರಿದಂತೆ ಕಾಣುತ್ತಿಲ್ಲ. ರಾಜಕೀಯ ದಂಗೆಗಳ ಬೆನ್ನಲ್ಲೇ ಇದೀಗ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಮೈಮೆನ್ಸಿಂಗ್ ಜಿಲ್ಲೆಯಲ್ಲಿ ನಡೆದ ಎದೆ ನಡುಗಿಸುವ ಘಟನೆಯೊಂದು ಈಗ ವರದಿಯಾಗಿದ್ದು, ಮಾನವೀಯತೆಯೇ ತಲೆ ತಗ್ಗಿಸುವಂತಿದೆ. ಕೇವಲ ಧರ್ಮನಿಂದನೆಯ ಆರೋಪದ ಮೇಲೆ ಗುಂಪೊಂದು ಹಿಂದೂ ಯುವಕನ ಮೇಲೆ ಮುಗಿಬಿದ್ದು, ಆತನನ್ನು ಮರಕ್ಕೆ ಕಟ್ಟಿಹಾಕಿ, ಥಳಿಸಿ, ಕೊನೆಗೆ ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ.

Bangladesh – ಯಾರು ಆ ದುರ್ದೈವಿ?
ಮೃತ ಯುವಕನನ್ನು ದೀಪು ಚಂದ್ರ ದಾಸ್ ಎಂದು ಗುರುತಿಸಲಾಗಿದೆ. ಇವರು ಭಲುಕಾ ಉಪ ಜಿಲ್ಲೆಯ ದುಬಾಲಿಯಾಪಾರಾ ಪ್ರದೇಶದ ಜವಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೊಟ್ಟೆ ಪಾಡಿಗಾಗಿ ದುಡಿಯುತ್ತಿದ್ದ ಅಮಾಯಕ ಜೀವವೊಂದು ಮತಾಂಧರ ಕ್ರೌರ್ಯಕ್ಕೆ ಬಲಿಯಾಗಿದೆ.
ಘಟನೆ ನಡೆದಿದ್ದೇಗೆ?
ವರದಿಗಳ ಪ್ರಕಾರ, ಗುರುವಾರ ರಾತ್ರಿ ಸುಮಾರು 9 ಗಂಟೆಯ ಸಮಯ. ಸ್ಥಳೀಯರ ಗುಂಪೊಂದು ದೀಪು ಚಂದ್ರ ದಾಸ್ ಅವರ ಮೇಲೆ ಮುಗಿಬಿದ್ದಿದೆ. ದೀಪು ಅವರು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬುದು ಈ ಗುಂಪಿನ ಆರೋಪವಾಗಿತ್ತು. ಮಾತುಕತೆಯ ಬದಲು ಕೈಗೆ ಸಿಕ್ಕಿದ್ದರಿಂದ ಹಲ್ಲೆ ನಡೆಸಿದ ಆ ಗುಂಪು, ದೀಪು ಅವರನ್ನು ಎಳೆದುಕೊಂಡು ಹೋಗಿ ಮರಕ್ಕೆ ಕಟ್ಟಿ ಹಾಕಿದೆ. (Bangladesh) ಅಷ್ಟಕ್ಕೇ ಅವರ ಕೋಪ ತೀರಿಲ್ಲ, ಮನಬಂದಂತೆ ಥಳಿಸಿ ಕೊನೆಗೆ ಆತನ ದೇಹಕ್ಕೆ ಬೆಂಕಿ ಹಚ್ಚಿ ಕೊಂದಿದ್ದಾರೆ. ಈ ದೃಶ್ಯ ನೆನೆಸಿಕೊಂಡರೆ ಎಂಥವರ ಎದೆಯೂ ಝಲ್ ಎನ್ನುತ್ತದೆ.

ಪೊಲೀಸರು ಹೇಳೋದೇನು?
ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು (Bangladesh) ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸುಟ್ಟು ಕರಕಲಾಗಿದ್ದ ಶವವನ್ನು ವಶಪಡಿಸಿಕೊಂಡು, ಮರಣೋತ್ತರ ಪರೀಕ್ಷೆಗಾಗಿ ಮೈಮೆನ್ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ವಿಪರ್ಯಾಸವೆಂದರೆ, ಇಷ್ಟು ದೊಡ್ಡ ಘಟನೆ ನಡೆದರೂ ಈವರೆಗೂ ಯಾವುದೇ ಎಫ್‌ಐಆರ್ (FIR) ದಾಖಲಾಗಿಲ್ಲವಂತೆ! ಮೃತರ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ, ಅವರಿಂದ ದೂರು ಬಂದ ನಂತರವಷ್ಟೇ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
Read this more : ವೈದೀಶ್ವರನ್ ದೇವಸ್ಥಾನ, ನಿಮ್ಮ ಸಾವಿನ ಸಮಯವನ್ನು ನಿಖರವಾಗಿ ಹೇಳುತ್ತಾ ಈ ನಿಗೂಢ ದೇವಾಲಯ? ಇಲ್ಲಿದೆ ರೋಚಕ ಸಂಗತಿ!
ಹಿಂಸಾಚಾರದ ಹಿನ್ನೆಲೆ ವಿಪಕ್ಷ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಬಾಂಗ್ಲಾದೇಶದಾದ್ಯಂತ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಪ್ರತಿಭಟನಾಕಾರರು (Bangladesh) ಮಾಧ್ಯಮ ಕಚೇರಿಗಳು, ಅವಾಮಿ ಲೀಗ್ ನಾಯಕರ ಮನೆಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಢಾಕಾ ಮತ್ತು ಚಿತ್ತಗಾಂಗ್‌ನಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗುತ್ತಿದ್ದು, ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಒಟ್ಟಿನಲ್ಲಿ ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಬದುಕುವಂತಾಗಿದೆ.
