ಇಂದಿನ ಕಾಲದಲ್ಲಿ ಮಹಿಳೆಯರಲ್ಲಿ ತೂಕದ ಸಮಸ್ಯೆ ಹೆಚ್ಚು ಕಾಡುತ್ತದೆ ಎಂದು ಹೇಳಬಹುದಾಗಿದೆ. ಕೆಲವೊಂದು ಅಧ್ಯಯನಗಳ ಪ್ರಕಾರ ಬಹುತೇಕ ಮಹಿಳೆಯರು ಮದುವೆಯ ನಂತರ ಅಧಿಕ ತೂಕದ ಸಮಸ್ಯೆಗಳನ್ನು (Health Tips) ಎದುರಿಸುತ್ತಿರುತ್ತಾರೆ. ಅನೇಕ ಮಹಿಳೆಯರು ತಾವು ಏತಕ್ಕಾಗಿ ತೂಕ ಹೆಚ್ಚಾಗುತ್ತಿದ್ದಾರೆ ಎಂಬುದು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿರುತ್ತಾರೆ. ಇದೀಗ ಮಹಿಳೆಯರಲ್ಲಿ ತೂಕ ಹೆಚ್ಚಾಗಲು ಕಾರಣ ಏನು ಎಂಬುದನ್ನು ಸಂಗ್ರಹಿಸಿದ ಮಾಹಿತಿಯನ್ನು (Health Tips) ಇಲ್ಲಿ ಹಂಚಿಕೊಳ್ಳಲಾಗಿದೆ.
ಮಹಿಳೆಯರು ತೂಕ ಹೆಚ್ಚಾಗಲು ಕೆಲವೊಂದು ಕಾರಣಗಳು ಇಲ್ಲಿದೆ ನೋಡಿ:
- ಒತ್ತಡ: ಸಾಮಾನ್ಯವಾಗಿ ಒತ್ತಡ ಅಥವಾ ಚಿಂತೆ ಸಹ ಮಹಿಳೆಯರಲ್ಲಿ ತೂಕ ಹೆಚ್ಚಾಗಲು ಕಾರಣ ಎಂದು ಹೇಳಬಹುದಾಗಿದೆ. ಮಹಿಳೆಯರು ಕಚೇರಿ ಮತ್ತು ಮನೆಕೆಲಸದಲ್ಲಿ ಹೆಚ್ಚಿನ ಕೆಲಸದ ಹೊರೆಯನ್ನು ಎದುರಿಸುತ್ತಾರೆ. ಇದರಿಂದಾಗಿ ಮಹಿಳೆಯರು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಒತ್ತಡವು ಅವರು ತೂಕದ ಸಮಸ್ಯೆಗಳನ್ನು ಎದುರಿಸಲು ಕಾರಣವಾಗುತ್ತದೆ. ಅಂತಹ ಸ್ಥಿತಿಯಲ್ಲಿ ಮಹಿಳೆಯರು ವ್ಯಾಯಾಮ ಮತ್ತು ಯೋಗ ಮಾಡುವ ಮೂಲಕ ತಮ್ಮ ಮನಸ್ಥಿತಿಯನ್ನು ಸಮತೋಲನಗೊಳಿಸುವುದು ಬಹಳ ಮುಖ್ಯ ಎಂದು ಹೇಳಬಹುದು.
- ಕಡಿಮೆ ನಿದ್ದೆ : ಇನ್ನೂ ಮಹಿಳೆಯರಲ್ಲಿ ತೂಕ ಹೆಚ್ಚಾಗಲು ನಿದ್ರಾಹೀನತೆ ಸಹ ಒಂದು ಕಾರಣವಾಗಿರುತ್ತದೆ ಎನ್ನಬಹುದಾಗಿದೆ. ನಿದ್ದೆಯ ಕೊರೆತೆಯಿಂದ ಚಾಯಪಚಯವು ನಿಧಾನಗೊಳ್ಳುತ್ತದೆ ಹಾಗೂ ಹಸಿವು ಸಹ ಹೆಚ್ಚಾಗುತ್ತದೆ. ಇದರಿಂದಾಗಿ ಅತಿಯಾಗಿ ಆಹಾರ ಸೇವನೆ ಮಾಡಬೇಕು ಅನ್ನಿಸುತ್ತದೆ. ಆಹಾರ ಸೇವನೆ ಹೆಚ್ಚಾಗುವ ಹಿನ್ನೆಲೆಯಲ್ಲಿ ತೂಕ ಸಹ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
- ಆಹಾರ ಪದ್ದತಿ : ಇನ್ನೂ ಮಹಿಳೆಯರು ಹಾಗೂ ಪುರುಷರಲ್ಲೂ ತೂಕ ಹೆಚ್ಚಾಗಲು ಆಹಾರ ಪದ್ದತಿ ಸಹ ಒಂದಾಗಿದೆ. ಕಳಪೆ ಆಹಾರ ಪದ್ದತಿಯನ್ನು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ತೂಕ ಹೆಚ್ಚಾಗುತ್ತದೆ. ಇಡೀ ಕುಟುಂಬದ ಆರೋಗ್ಯ ನೋಡಿಕೊಳ್ಳುವ ಮಹಿಳೆಯರು ತಮ್ಮ ಆಹಾರ ಪದ್ದತಿಯ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಇದರಿಂದಾಗಿ ಮಹಿಳೆಯರು ಹೆಚ್ಚಾಗಿ ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಾರೆ. ಜೊತೆಗೆ ತಡರಾತ್ರಿ ಆಹಾರ ಸೇವನೆ ಮಾಡುವ ಕಾರಣದಿಂದಲೂ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
- ಇದರ ಜೊತೆಗೆ ಹಾರ್ಮೋನ್ ಸಮಸ್ಯೆಗಳು, ದೈಹಿಕ ಚಟುವಟಿಕೆಗಳ ಕೊರತೆ, ಅನುವಂಶಿಕತೆ, ವಯೋಸಹಜ ಬದಲಾವಣೆಗಳ ಕಾರಣದಿಂದಲೂ ಮಹಿಳೆಯರಲ್ಲಿ ತೂಕ ಹೆಚ್ಚಾಗುತ್ತದೆ. ಇನ್ನೂ ಮಹಿಳೆಯರು ತಮ್ಮ ಕೆಲಸಗಳು ಮುಗಿಸಿದ ಬಳಿಕ ನೇರವಾಗಿ ವಿಶ್ರಾಂತಿಗೆ ಹೋಗುತ್ತಾರೆ. ಇದರಿಂದಲೂ ಸಹ ಮಹಿಳೆಯರ ತೂಕ ಹೆಚ್ಚಾಗುತ್ತದೆ. ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಮನೆಗೆಲಸದ ಜೊತೆಗೆ ವ್ಯಾಯಾಮ, ಯೋಗ, ವಾಕಿಂಗ್ ಮೊದಲಾದವನ್ನು ಪಾಲಿಸಬೇಕು ಎಂದು ಹಲವು ತಜ್ಞರ ಅಭಿಪ್ರಾಯವಾಗಿದೆ.