Mango Leaves- ನಮ್ಮ ಸುತ್ತಲೂ ಲಭ್ಯವಿರುವಂತಹ ಅನೇಕ ಸಸಿಗಳಲ್ಲಿ ಆರೋಗ್ಯ ಗುಣಗಳಿರುತ್ತವೆ. ನಮ್ಮ ಪೂರ್ವಜರು ಅಂತಹ ಔಷಧಿ ಮೂಲಿಕೆಗಳನ್ನೆ ರೋಗವನ್ನು ಗುಣಪಡಿಸಲು ಬಳಸುತ್ತಿದ್ದರು. ಈಗಲೂ ಸಹ ಆರ್ಯುವೇದ ಚಿಕಿತ್ಸೆ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೀಗ ನಾವು ಮಾವಿನ (Mango Leaves) ಎಲೆಗಳಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಮಾವಿನ ಎಲೆಗಳಲ್ಲಿ ಅಪಾರವಾದ ಔಷಧೀಯ ಗುಣಗಳಿವೆ. ಏನೆಲ್ಲಾ (Mango Leaves) ಸಮಸ್ಯೆಗಳು ಮಾವಿನ ಎಲೆಗಳಿಂದ ದೂರವಾಗಲಿದೆ ಎಂಬುದನ್ನು ತಿಳಿಯಲು ಈ ಮುಂದೆ ಓದಿ….
ಮಾವಿನ ಹಣ್ಣುಗಳು ಎಂದರೇ ಅನೇಕರಿಗೆ ಪಂಚಪ್ರಾಣ, (Mango Leaves) ಮಾವಿನ ಎಲೆಗಳಲ್ಲೂ ಸಹ ತುಂಬಾ ಉಪಯುಕ್ತವಾದ ಆರೋಗ್ಯಕಾರಿ ಪ್ರಯೋಜನಗಳಿವೆ. ಮಾವಿನ ಎಲೆಗಳಲ್ಲಿ ಮಧುಮೇಹವನ್ನು ನಿಯಂತ್ರಣ ಮಾಡುವುದರಿಂದ ಹಿಡಿದು ಅಸ್ತಮಾ ನಿಯಂತ್ರಣ ಮಾಡುವಂತಹ ಔಷಧೀಯ ಗುಣಗಳಿವೆ. ಮಾವಿನ ಎಲೆಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು (Mango Leaves) ಕಡಿಮೆ ಮಾಡುವಂತಹ ಗುಣಳನ್ನು ಹೊಂದಿದೆ. ಎಲೆಗಳಲ್ಲಿನ ಮ್ಯಾಂಜಿಫೆರಿನ್ ಮತ್ತು ಫ್ಲೇವನಾಯ್ಡ್‌ಗಳಂತಹ ಅಂಶಗಳು ಇರುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ನಿಯಂತ್ರಸುವುದ ಜೊತೆಗೆ ಗ್ಲೂಕೋಸ್ ಅನ್ನು ಸಹ ಸುಧಾರಿಸಬಹುದಾಗಿದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ (Mango Leaves) ಮಾವಿನ ಎಲೆಗಳು ತುಂಬಾನೆ ಸಹಕಾರಿ ಎಂದು ಹೇಳಲಾಗುತ್ತದೆ.
ಮಾವಿನ ಎಲೆಗಳಲ್ಲಿರುವ (Mango Leaves) ಫೀನಾಲಿಕ್ ಸಂಯಕ್ತಗಳು ಸಂಧಿವಾತದಂತಹ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾವಿನ ಎಲೆಗಳಿಂದ ಮಾಡಿದ ಕಷಾಯವನ್ನು ಅತಿಸಾರ ಮತ್ತು ಇತರ ಹೊಟ್ಟೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಎಲೆಗಳಲ್ಲಿರುವ ಟ್ಯಾನಿನ್ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
- ರಕ್ತದೊತ್ತಡವನ್ನು ನಿಯಂತ್ರಿಸುವುದು: ಮಾವಿನ ಎಲೆಗಳಲ್ಲಿ ಉಂಟಾಗುವ ಬಯೋಆಕ್ಟಿವ್ ಕಾಂಪೌಂಡ್ಸ್, ವಿಶೇಷವಾಗಿ ಮೈಂಗಿಫೆರಿನ್, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಹೃದಯ ಆರೋಗ್ಯ: ಈ ಎಲೆಗಳಲ್ಲಿ ಹೃದಯವನ್ನು ರಕ್ಷಿಸುವಂತಹ ಆ್ಯಂಟಿ ಆಕ್ಸಿಡೆಂಟ್ಸ್ ಇರುತ್ತವೆ, ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗುತ್ತದೆ.
- ರೋಗ ನಿರೋಧಕ ಶಕ್ತಿಯನ್ನು ವೃದ್ಧಿ: ಮಾವಿನ ಎಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿರುತ್ತದೆ. ಇದರಿಂದ ದೇಹದ ರೋಗದ ವಿರುದ್ಧದ ಹೋರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
- ಚರ್ಮದ ಸಮಸ್ಯೆಗಳಿಗೆ: ಚರ್ಮದ ಉರಿ ಹಾಗೂ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.