ನಮ್ಮ ಮನೆಯಲ್ಲಿಯೇ ಇರುವಂತಹ ಅನೇಕ ಪದಾರ್ಥಗಳು, ವಸ್ತುಗಳಿಂದ ನಮ್ಮ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಮ್ಮ ಪೂರ್ವಜರು ಆರ್ಯುವೇದದ ಮೂಲಕ ಈ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ತರಕಾರಿ, ಸಸಿಗಳು, ಕಾಳುಗಳಲ್ಲಿ ಹಲವು ರೀತಿಯ ಔಷಧೀಯ ಗುಣಗಳಿರುತ್ತವೆ. ಇದೀಗ ಕೊತ್ತಂಬರಿ ಯಲ್ಲಿ ಏನೆಲ್ಲಾ ಔಷಧೀಯ (Health Benefits)ಗುಣಗಳಿವೆ ಎಂಬುದನ್ನು ಸಂಗ್ರಹಿಸಿ ನಿಮಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.
ಕೊತ್ತಂಬರಿಯಲ್ಲಿ ವಿಟಮಿನ್ ಎ, ಕೆ, ಸಿ ಹಾಗೂ ಇ ಸಮೃದ್ದವಾಗಿದೆ. ಜೊತೆಗೆ ಅದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಮೇಗ್ನೀಸಿಯಂ (Health Benefits) ಗುಣಗಳಿವೆ. ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ (Health Benefits) ಹಲವು ರೀತಿಯ ಪ್ರಯೋಜನೆಗಳಿವೆ. ಇನ್ನೂ ನೀರಿನಲ್ಲಿ ಕೊತ್ತಂಬರಿ ಬೀಜಗಳನ್ನು ನೆನೆಸಿಟ್ಟು ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಸಂಗ್ರಹಿಸಿ ಈ ಕೆಳಗೆ ತಿಳಿಸಲಾಗಿದೆ.
ಚರ್ಮ ಸಂಬಂಧಿ ಗುಣಗಳು: ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಆ ನೀರು ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಕೊತ್ತಂಬರಿಯಲ್ಲಿ ಆ್ಯಂಟಿ ಫಂಗಲ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳಿವೆ. ಪ್ರತಿನಿತ್ಯ ಕೊತ್ತಂಬರಿ ಬೀಜ ನೆನೆಸಿದ ನೀರನ್ನು ಕುಡಿಯುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿವಾರಿಸಬಹುದು. ಜೊತೆಗೆ ಚರ್ಮವನ್ನು ಆರೋಗ್ಯಕರವಾಗಿ ಹಾಗೂ ಹೊಳೆಯುವಂತೆ ಸಹ ಮಾಡುತ್ತದೆ.
ತಲೆ ಕೂದಲು ಸಮಸ್ಯೆ: ಕೊತ್ತಂಬರಿ ಬೀಜಗಳಲ್ಲಿ ವಿಟಮಿನ್ ಕೆ, ಸಿ ಮತ್ತು ಎ ಯಂತಹವುಗಳು ಹೇರಳವಾಗಿದೆ. ಇದು ಕೂದಲು ಬಲವಾಗಿ ಹಾಗೂ ವೇಗವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಕೊತ್ತಂಬರಿ ಬೀಜದ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಕೂದಲು ಉದುರುವಿಕೆ, ಕೂದಲು ಒಡೆಯುವುದು ಕಡಿಮೆಯಾಗುತ್ತದೆ, ಜೊತೆಗೆ ಕೊತ್ತಂಬರಿ ಬೀಜಗಳನ್ನು ಎಣ್ಣೆಯ ರೂಪದಲ್ಲೂ ಸಹ ಕೂದಲಿಗೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
ತೂಕ ಕಡಿಮೆ ಮಾಡಲು ಸಹಕಾರಿ : ಇನ್ನೂ ಕೊತ್ತಂಬರಿ ಸೊಪ್ಪು ಜಿರ್ಣ ಕ್ರಿಯೆಗೆ ಒಳ್ಳೆಯದು. ಜೀರ್ಣ ಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕೊತ್ತಂಬರಿ ಸೊಪ್ಪು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪ್ರತಿನಿತ್ಯ ಬೆಳಗಿನ ಜಾವ ಕೊತ್ತಂಬರಿ ಬೀಜಗಳನ್ನು ನೆನೆಸಿದ ನೀರನ್ನು ಕುಡಿದರೇ ಚಯಾಪಚಯವನ್ನು ಸುಧಾರಿಸಬಹುದಾಗಿದೆ ಜೊತೆಗೆ ಜೀರ್ಣಕ್ರಿಯೆಯ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
ರೋಗನಿರೋಧಕ ಶಕ್ತಿವೃದ್ದಿ: ಕೊತ್ತಂಬರಿ ಬೀಜಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಅಂಶಗಳಿವೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿರುವ ಫ್ರಿರ್ಯಾಡಿಕಲ್ ಗಳನ್ನು ಕಡಿಮೆ ಮಾಡಲು ಸಹಯ ಮಾಡುತ್ತದೆ. ಜೊತೆಗೆ ಹಲವಾರು ರೋಗಗಳ ವಿರುದ್ದ ಹೋರಾಡಲು ಹಾಗೂ ವೈರಸ್ ಗಳಿಂದ ಬರುವಂತಹ ಸೋಂಕನ್ನು ತಡೆಯಲು ಸಹ ಕೊತ್ತಂಬರಿ ಬೀಜಗಳು ಸಹಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.