ಸದ್ಯ ವಿಧಾನಸಭಾ ಕಲಾಪ ನಡೆಯುತ್ತಿದ್ದು, ಕಲಾಪದಲ್ಲಿ ವಾಲ್ಮೀಕಿ ನಿಗಮದ ಅಕ್ರಮ, ಮುಡಾ ಹಗರಣಗಳ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಸದನದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಚರ್ಚೆ ಮಾಡುವ ವೇಳೆ ಹೆ.ಡಿ.ರೇವಣ್ಣ (H D Revanna) ಮೇಲಿನ ದೂರನ್ನು ಪ್ರಸ್ತಾಪ ಮಾಡಿದರು. ಈ ಸಮಯದಲ್ಲಿ ಹೆಚ್.ಡಿ.ರೇವಣ್ಣ ಭಾವೋದ್ವಾಗಕ್ಕೆ ಒಳಗಾಗಿ ಮಾತನಾಡಿದರು. ಅವರು ಏನು ಮಾತನಾಡಿದರೂ ಎಂಬ ವಿಚಾರಕ್ಕೆ ಬಂದರೇ,
ಸದನದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುವಾಗ ಹಾಸನ ಪ್ರಕರಣಗಳಲ್ಲಿ ಎಸ್.ಐ.ಟಿ ನಡೆ ರೇವಣ್ಣ, ಭವಾನಿ ಹಾಗೂ ಪ್ರಿತಂ ಗೌಡ ವಿಚಾರದಲ್ಲಿ ಸರಿಯಾಗಿರಲಿಲ್ಲ. ಬೇಲ್ ಪಡೆಯೋಕು ಅವಕಾಶ ಕೊಡದೇ ರೇವಣ್ಣ ರವರನ್ನು ಅರೆಸ್ಟ್ ಮಾಡಿದ್ರು. ಎಸ್.ಐ.ಟಿ ಭಯದಿಂದ ಮತ್ತಿಬ್ಬರು ಬೇಲ್ ತಗೋಬೇಕಾಯಿತು. ಆದರೆ ನಾಗೇಂದ್ರ ರವರನ್ನು ಮಾತ್ರ ಅವರು ಬಂಧನ ಮಾಡಿಲ್ಲ. ವಾಲ್ಮೀಕಿ ಪ್ರಕರಣದಲ್ಲಿ ಎಸ್.ಐ.ಟಿ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಎಸ್.ಐ.ಟಿ ವಿಚಾರಣೆ ಎದುರಿಸಿ ನಗುತ್ತಲೇ ಬಂದರು. ಎಸ್.ಐ.ಟಿ ಯಲ್ಲಿ ರೇವಣ್ಣರಿಗೆ ಒಂದು ಕಾನೂನು, ನಾಗೇಂದ್ರ ರವರಿಗೆ ಒಂದು ಕಾನೂನಾ ಎಂದು ಆಕ್ರೋಷ ಹೊರಹಾಕಿದರು.
ಈ ಸಮಯದಲ್ಲಿ ಮಧ್ಯಪ್ರವೇಶ ಮಾಡಿದ ಹೆಚ್.ಡಿ.ರೇವಣ್ಣ ನನ್ನ ಹೆಸರು ಬಂದಿದೆ, ನನಗೆ ಮಾತನಾಡಲು ಅವಕಾಶ ಬೇಕು, ನಾನೇದರೂ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ, ನಾನು ಬೇಡ ಅನ್ನೊಲ್ಲ, ನಾನು 40 ವರ್ಷ ರಾಜಕೀಯ ಜೀವನದಲ್ಲಿದ್ದೀನಿ. ಯಾರೋ ಹೆಣ್ಣು ಮಗಳನ್ನು ಕರೆತಂದು ಡಿ.ಜಿ. ಕಚೇರಿಯಲ್ಲಿ ದೂರು ಕೊಡಿಸುತ್ತಾರೆ. ಡಿಜಿ ಆದವನೇ ದೂರು ಬರೆದುಕೊಳ್ಳುತ್ತಾನೆ. ಆತನ ಡಿಜಿ ಆಗಲು ಅನ್ ಫಿಟ್ ಎಂದು ಸದನದಲ್ಲಿ ಡಿಜಿ ವಿರುದ್ದ ಭಾವೋದ್ವೇಗದ ಮಾತುಗಳನ್ನಾಡಿದರು. ಈ ಸಮಯದಲ್ಲಿ ಕಾಂಗ್ರೇಸ್ ಸದಸ್ಯರು ಆಕ್ಷೇಪಿಸಿದರು. ಬಳಿಕ ಡಿಕೆಶಿ ಎದ್ದು ನಿಂತು ರೇವಣ್ಣನವರಿಗೆ ಅನ್ಯಾಯವಾಗಿದ್ದರೇ ಚರ್ಚೆ ಮಾಡೋಣ ಪಾಪ ಎಂದು, ರೇವಣ್ಣ ಚರ್ಚೆಗೆ ನೊಟೀಸ್ ಕೊಡಲಿ ಎಂದರು. ಅದಕ್ಕೆ ಸ್ಪೀಕರ್ ಯು.ಟಿ. ಖಾದರ್ ದನಿಗೂಡಿಸಿ ಅವಕಾಶ ಕೊಡೋಣ ಎಂದರು.