ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಪ್ರಜ್ವಲ್ ರೇವಣ್ಣ ಶರಣಾಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣರವರಲ್ಲಿ ಮನವಿ ಮಾಡಿದ್ದಾರೆ. ನಗರದ ಜೆಡಿಎಸ್ ಕಚೇರಿಯಲ್ಲಿ ಜೆ.ಪಿ. ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನನ್ನ ಹಾಗೂ ದೇವೇಗೌಡರ ಮೇಲೆ ಗೌರವ ಇದ್ದರೇ ಕೈ ಮುಗಿದು ಮನವಿ ಮಾಡುತ್ತೇನೆ. 24 ಅಥವಾ 48 ಗಂಟೆಗಳೊಳಗೆ ಬಂದು ಶರಣಾಗು ಎಂದು ಮನವಿ ಮಾಡಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಈ ನೆಲದ ಕಾನೂನು ಇದೆ. ಏಕೆ ಹೆದರಬೇಕು, ಎಷ್ಟು ದಿನ ಕಳ್ಳ ಪೊಲೀಸ್ ಆಟ, ವಿದೇಶದಿಂದ ಬಂದು ತನಿಖೆಗೆ ಸಹಕಾರ ನೀಡಬೇಕು ಪ್ರಜ್ವಲ್ ರೇವಣ್ಣ ಬಳಿ ಮನವಿ ಮಾಡಿದ್ದಾರೆ. ನಾನು ಪದ್ಮನಾಭ ನಗರಕ್ಕೆ ಪ್ರಜ್ವಲ್ ನನ್ನು ಬಿಡಿಸಲು ಹೋಗಲ್ಲ, ತಂದೆ ತಾಯಿ ರವರ ಆರೋಗ್ಯ ವಿಚಾರಿಸಲು ಹಾಗೂ ಧೈರ್ಯ ಹೇಳಲು ಹೋಗುತ್ತೇನೆ. ನಾನು ತಂದಗೆ ಮನವಿ ಮಾಡಿದ್ದೇನೆ. ಪ್ರಜ್ವಲ್ ಎಲ್ಲೇ ಇದ್ದರೂ ಬಂದು ಸರಂಡರ್ ಆಗಲು ಮನವಿ ಮಾಡಲು ಹೇಳಿದ್ದೇನೆ ಎಂದರು.
ಇನ್ನೂ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ತಲೆತಗ್ಗಿಸುವಂತಹ ಪ್ರಕರಣವಾಗಿದೆ. ಆದ್ದರಿಂದ ನಾನು ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ. ಇದು ಎಲ್ಲರೂ ಅಸಹ್ಯ ಪಡುವಂತಹ ಪ್ರಕರಣವಾಗಿದ್ದು, ನನ್ನ ಹಾಗೂ ದೇವೇಗೌಡರನ್ನು ತಾಳೆ ಹಾಕಿದ್ದಾರೆ. ನಿನ್ನೆಯೊಂದು ಆಡಿಯೋ ಲೀಕ್ ಆಗಿದೆಯಲ್ವಾ, ಈಗ ಕಾಂಗ್ರೇಸ್ ನಾಯಕರು ಏಕೆ ಮಾತನಾಡುತ್ತಿಲ್ಲ. ಕುಮಾರಸ್ವಾಮಿ ಪೆನ್ ಡ್ರೈವ್ ಕೊಟ್ಟಿದ್ದು ಅಂತಾ ಹೇಳು ಅಂತೀರಾ ಅಲ್ವಾ, ಈ ಸರ್ಕಾರ 376 ಸರ್ಕಾರ. ನಿಮ್ಮ ವಿರುದ್ದ ಯಾರು ಮಾತನಾಡುತ್ತಾರೋ ಅವರಿಗೆ 376 ಕೇಸ್ ಹಾಕಿಸುತ್ತಾರೆ. ಕೇಸ್ ಹಾಕಿಸಲು ಯಾರ ಬಳಿ ದೂರು ಕೊಡಿಸಿದ್ದು, ಟಿವಿಯಲ್ಲಿ ಸ್ಟೋರಿ ಬಿಲ್ಡಪ್ ಮಾಡಿದ್ರಿ ಎಲ್ಲವೂ ನನಗೆ ಗೊತ್ತಿದೆ. ದೇವರಾಜೇಗೌಡ ವಿರುದ್ದ ನನಗೆ ದೌರ್ಜನ್ಯ ಆಗಿದೆ ಎಂದು ದೂರು ಕೊಡಿಸಿದ್ದೀರಾ, ಹೊಳೆನರಸೀಪುರದಲ್ಲಿ ಏಕೆ ದೂರು ಕೊಡಲಿಲ್ಲ. ಬೆಂಗಳೂರಿಗೆ ಬಂದು ಏಕೆ ದೂರು ಕೊಡಿಸಿದ್ದು, ಅದಕ್ಕೆ ಎಷ್ಟು ಹಣ ಕೊಟ್ಟಿದ್ದೀರಾ, ಬೆಂಗಳೂರಿನಲ್ಲಿ ಟೈಪ್ ಆಗಿದ್ದ ಲೆಟರ್ ಹೊಳೆನರಸಿಪುರಕ್ಕೆ ಕಳುಹಿಸಿದ್ದೀರಾ ಎಂದು ಕಿಡಿಕಾರಿದ್ದಾರೆ.
ಡಿ.ಕೆ.ಶಿವಕುಮಾರ ನೀವು ತಿಹಾರ್ ಜೈಲಿನಲ್ಲಿದ್ದಾಗ ನಾನು ನಿಮ್ಮ ತಾಯಿಯವರನ್ನು ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ನಿಮ್ಮನ್ನು ಸಹ ತಿಹಾರ್ ಜೈಲಿನಲ್ಲಿ ಭೇಟಿ ಮಾಡಿದ ನಾಲ್ಕು ದಿನಗಳಲ್ಲಿ ನೀವು ಬಿಡುಗಡೆ ಆದ್ರಿ. ಈಗ ನೀವು ಏನು ಮಾಡುತ್ತಿದ್ದೀರಾ, ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗ ನಮ್ಮ ತಾಯಿ ಕೈಯಿಂದ ಅನ್ನ ತಿಂದಿದ್ದಿರಾ, ಸಿದ್ದರಾಮಯ್ಯನವರೇ ತನಿಖೆ ಎಲ್ಲಿದ್ದ ಆರಂಭವಾಗಬೇಕು ಅಂತಾ ನೀವೇ ಹೇಳಿ. ಕಾರ್ತಿಕ್ ಯಾರು ಅಂತಾ ಗೊತ್ತಿಲ್ಲ, ಪ್ರಜ್ವಲ್ ಕಾರ್ತಿಕ್ ಏನು ಏನು ಮಾಡಿಕೊಂಡರು ಅಂತಾ ನನಗೆ ಏನು ಗೊತ್ತಿದೆ ಎಂದು ಅಸಮಧಾನ ಹೊರಹಾಕಿದ್ದಾರೆ.