ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ಇತ್ತೀಚಿಗೆ ಪ್ರತಿ ವಿಶೇಷ ದಿನಗಳಂದು ಸಸಿಗಳನ್ನು ನೆಡುವ ಮೂಲಕ ವಿನೂತನ ಆಚರಣೆಗೆ ಬುನಾದಿ ಹಾಕಲಾಗಿದೆ. ಹುಟ್ಟುಹಬ್ಬಗಳು, ಮಹನೀಯರ ಜಯಂತಿಗಳು, ವಿಶೇಷ ದಿನಗಳಂದು ಸಸಿಗಳನ್ನು ನೆಡುವ ಮೂಲಕ ಪರಿಸರದ ಜಾಗೃತಿ ಮೂಡಿಸುವ ಕೆಲಸವನ್ನು ಸ್ಥಳೀಯರ ಪರಿಸರವಾದಿಗಳು ಬೆಳೆಸಿಕೊಂಡಿದ್ದಾರೆ. ಈ ಹಾದಿಯಲ್ಲೇ ಇಂದು ವಿಶ್ವ ಜೇನು ಹುಳಗಳ ದಿನವನ್ನು ಸಸಿ ನೆಡುವ ಮೂಲಕ ಆಚರಣೆ ಮಾಡಲಾಗಿದೆ.
ಗುಡಿಬಂಡೆ ಪಟ್ಟಣದಲ್ಲಿ ಪರಿಸರ ವೇದಿಕೆ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ವಿಶ್ವ ಜೇನು ಹುಳಗಳ ದಿನಾಚರಣೆಯನ್ನು ಆಚರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ಕೊಟ್ಟ ರಾಜ್ಯ ಪ್ರಶಸ್ತಿ ವಿಜೇತ ಡಾ.ಗುಂಪು ಮರದ ಆನಂದ್, ಪರಾಗ ಸ್ಪರ್ಶಕಗಳ ನಾಶವೆಂದರೆ ಆಹಾರದ ನಾಶವೆಂದರ್ಥ. ಭೂಮಿಯ ಮೇಲಿನ ಸಸ್ಯಗಳಲ್ಲಿ ಶೇಕಡ 85ರಷ್ಟು ಸಸ್ಯಗಳು ತಮ್ಮ ಪರಾಗ ಸ್ಪರ್ಶಕ್ಕೆ ಜೇನುಗಳನ್ನು ಅವಲಂಬಿಸಿದ್ದು ತಮ್ಮ ಅಸ್ತಿತ್ವವನ್ನು ಜೇನುನೊಣಗಳ ಅಸ್ತಿತ್ವದ ಮೇಲೆ ಉಳಿಸಿಕೊಂಡಿವೆ. ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿನ 1/3 ಭಾಗವು ಪರಾಗಸ್ಪರ್ಶಕಗಳ ಮೇಲೆ ಅವಲಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ಜೇನುನೊಣಗಳು ಆಹಾರ ಭದ್ರತೆಯ ಬೆನ್ನೆಲುಬು. ಅರಣ್ಯನಾಶ, ಏಕ ಬೆಳೆ ಪದ್ಧತಿ ರಾಸಾಯನಿಕಗಳ ಅತಿಯಾದ ಬಳಕೆ, ಮಾಲಿನ್ಯ ವೇ ಮೊದಲಾದ ಕಾರಣಗಳಿಂದ ಇಂದು ಜೇನುಹುಣಗಳ ಸಂತತಿ ತೀವ್ರ ತರದ ಅಪಾಯವನ್ನು ಅನುಭವಿಸುತ್ತಿದೆ. ಆದರಿಂದ ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸಬೇಕೆಂದು ತಿಳಿಸಿದರು.
ತಾವು ಯಾವುದೇ ವಿಶೇಷ ದಿನಗಳಂದು ನನಗೆ ತಿಳಿಸಿದರೇ ನಾನು ಬಂದು ಸಸಿ ನೆಡುವ ಮೂಲಕ ತಮ್ಮ ವಿಶೇಷ ದಿನಗಳನ್ನು ಮತಷ್ಟು ವಿಶೇಷವಾಗಿಸೋಣ. ಪರಿಸರ ಸಂರಕ್ಷಣೆ ಮಾಡದೇ ಇದ್ದಲ್ಲಿ ಇಡೀ ಮನುಕುಲ, ಪ್ರಾಣಿ ಸಂಕುಲ ನಾಶವಾಗುತ್ತದೆ. ಆದ್ದರಿಂದ ಎಲ್ಲರೂ ವಿಶೇಷ ದಿನಗಳಂದು ತಪ್ಪದೇ ಸಸಿಗಳನ್ನು ನೆಡುವ ಕಾಯಕ ರೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪರಿಸರ ವೇದಿಕೆ ಅಧ್ಯಕ್ಷರಾದ ಬಿ ಮಂಜುನಾಥ್. ಖಜಾಂಜಿಗಳಾದ ಶ್ರೀನಾಥ್. ಹೋಂ ಗಾರ್ಡ್ ವೇಣುಗೋಪಾಲ್,ರವಿಶಾಸ್ತ್ರಿ, ಆಟೋ ಚಾಲಕರ ಅಧ್ಯಕ್ಷರಾದ ರಾಜಪ್ಪ, ಉಪಾಧ್ಯಕ್ಷರಾದ ನಾಗಪ್ಪ, ನರೇಶ್, ಪರಿಸರವಾದಿ ನಿತಿನ್, ಸನಾವುಲ್ಲ ,ಮೋಹನ್, ಶ್ರೀನಿವಾಸ್ ಮುಂತಾದವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸು ಮಾಡಿದರು.