ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಚೆನ್ನಪಟ್ಟಣದಲ್ಲಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. ನಾನು ಯಾರಿಗೆ ಎಂದೂ ಮೋಸ ಅಥವಾ ದ್ರೋಹ ಮಾಡಿಲ್ಲ. ನನ್ನನ್ನು ನೀವು ಎರಡು ಬಾರಿ ಗೆಲ್ಲಿಸಿದ್ದೀರಾ, ಈ ಬಾರಿ ನನ್ನ ಬದುಕು ಇರೋದು ನಿಮ್ಮ ಋಣ ತಿರಿಸೋಕೆ, ನಾನು ನಿಮ್ಮ ಮನೆ ಮಗ, ನಿಮ್ಮ ಮಗನಿಗೆ ಹಾಲಾದ್ರೂ ಕೊಡಿ, ವಿಷವಾದ್ರೂ ಕೊಡಿ ಎಂದು ಹೆಚ್.ಡಿ.ಕೆ (HD Kumaraswamy) ಭಾವನಾತ್ಮಕ ಭಾಷಣ ಮಾಡಿದ್ದಾರೆ.
ರಾಜ್ಯದಲ್ಲಿ ಚನ್ನಪಟ್ಟಣದ ಉಪಚುನಾವಣೆಯ ಕಣ ದಿನೇ ದಿನೇ ಮತಷ್ಟು ರಂಗೇರುತ್ತಿದೆ. ಇದೀಗ ಹೆಚ್.ಡಿ.ಕುಮಾರಸ್ವಾಮಿ ಚೆನ್ನಪಟ್ಟಣ ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ಬೆಳಿಗಿನಿಂದ ಸಂಜೆಯವರೆಗೂ ಐದು ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರು, ಮುಖಂಡರ ಸಭೆ ನಡೆಸಲಾಗಿತ್ತು. ಅದರಂತೆ ಚೆನ್ನಪಟ್ಟಣದ ಕೋಡಂಬಳ್ಳಿ ಹಾಗೂ ಇಗ್ಗಲೂರು ಗ್ರಾಮಗಳಲ್ಲಿ ನಡೆದಂತಹ ಕಾರ್ಯಕರ್ತರ ಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಭಾವುಕ ಮಾತುಗಳನ್ನಾಡಿದ್ದರು. ನಾನು ಎಂದೂ ಯಾರಿಗೂ ದ್ರೋಹ ಮಾಡಿಲ್ಲ. ನನ್ನನ್ನ ಎರಡು ಬಾರಿ ನೀವು ಗೆಲ್ಲಿಸಿದ್ದೀರಿ. ಈ ಬಾರಿ ನನ್ನ ಬದುಕು ಇರೋದು ನಿಮ್ಮ ಋಣ ತೀರಿಸೋಕೆ. (HD Kumaraswamy) ಜಾತಿ, ಪಕ್ಷ ನೋಡದೇ ನಾನು ಕೆಲಸ ಮಾಡಿದ್ದೇನೆ. ನೀವು ಬೆಳಿಸಿದ ನಿಮ್ಮ ಮನೆ ಮಗ ನಾನು. ನೀವು ಬೆಳೆಸಿದ ನಿಮ್ಮ ಮಗನಿಗೆ ಹಾಲಾದ್ರೂ ಕೊಡಿ, ವಿಷವಾದ್ರೂ ಕೊಡಿ. ನಾನು ಒಳ್ಳೆಯ ಕೆಲಸ ಮಾಡಿದ್ರೆ, ಜನಪರ ಯೋಜನೆ ತಂದಿದ್ರೆ ಬೆಂಬಲ ನೀಡಿ. ಎನ್‌ಡಿಎ ಅಭ್ಯರ್ಥಿಯನ್ನ ಇಲ್ಲಿ ಹಾಕ್ತೇವೆ, ಗೆಲ್ಲಿಸಿಕೊಡಿ ಎಂದು ಸಭೆಯಲ್ಲಿ ಮನವಿ (HD Kumaraswamy) ಮಾಡಿದರು.
ಇನ್ನೂ ಈ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಚೆನ್ನಪಟ್ಟಣದ ಅಭ್ಯರ್ಥಿ (HD Kumaraswamy) ಯಾರೆಂದು ಘೋಷಣೆ ಮಾಡುವಂತೆ ಪಟ್ಟು ಹಿಡಿದರು. ನಿಖಲ್ ರವರನ್ನೆ ಚೆನ್ನಪಟ್ಟಣ ಕಣಕ್ಕಿಳಿಸುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಹೆಚ್.ಡಿ.ಕೆ. ಈಗಾಗಲೇ ಈ ಕುರಿತು ಮೀಟಿಂಗ್ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ಎಲ್ಲರನ್ನೂ ಸಮಾಧಾನಪಡಿಸಿದರು. ಸದ್ಯ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ ಕರೆದಿದ್ದೇನೆ. ಜಿಪಂ ವ್ಯಾಪ್ತಿಯ 5 ಭಾಗದಲ್ಲಿ ಸಭೆ ಮಾಡ್ತಿದ್ದೇನೆ. 10ನೇ ತಾರೀಖು ಮತ್ತೆ ಚೆನ್ನಪಟ್ಟಣದಲ್ಲಿ ಸಭೆ ಮಾಡುತ್ತಿದ್ದೇನೆ. (HD Kumaraswamy) ಜನಾಭಿಪ್ರಾಯ ಪಡೆಯುವ ಉದ್ದೇಶದಿಂದ ಸಭೆ ಮಾಡುತ್ತಿದ್ದೇವೆ ಎಂದರು.
ಇನ್ನೂ ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ರವರಿಗೂ ಕೌಂಟರ್ ಕೊಟ್ಟಿದ್ದಾರೆ. ಚೆನ್ನಪಟ್ಟಣಕ್ಕೆ ಡಿಕೆಶಿ ಅನುದಾನ ತಂದಿದ್ದೇನೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ.ಕೆ. ಎಲ್ಲಿದೆ ಅನುದಾನ, ಎಲ್ಲಿ ತಂದಿದ್ದಾರೆ, ಯಾವುದೋ ಬೋರ್ಡ್ ಗಳಲ್ಲಿ ಮಾತ್ರ ಅನುದಾನ ತಂದಿರೋದಾ, ನಮ್ಮ ಕಾಲದಲ್ಲಿ ಏನೂ ಅಭಿವೃದ್ದಿ ಆಗಿಲ್ಲ ಅಂತಾರೆ ಅಲ್ವಾ, ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡ್ತೀನಿ. ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಚೆನ್ನಪಟ್ಟಣಕ್ಕೆ (HD Kumaraswamy) ನಾನೇ ಅನುದಾನ ತಂದಿದ್ದೇನೆ. ಕಳೆದ ಮೂರು ತಿಂಗಳಲ್ಲಿ ಚೆನ್ನಪಟ್ಟಣಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಮೂರು ತಿಂಗಳಲ್ಲಿ 20 ದಿನ ಬಂದಿದ್ದೇನೆ ಅಂತಾ ಹೇಳ್ತೀದ್ದೀರಾ ಅಲ್ವಾ, ಆಗ ಏನೇನು ಮಾಡಿದ್ದೀರಿ ಅಂತಾ ಪಟ್ಟಿ ಕೊಡಿ. ನಾನು ಅಷ್ಟೊಂದು ಕೋಟಿ ಇಷ್ಟೊಂದು ಕೋಟಿ ಅಂತಾ ಹೇಳ್ತೀರಾ, ನಿಮ್ಮ ಕೈಯಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ, ಇನ್ನೂ 300-500 ಕೋಟಿ ಎಲ್ಲಿಂದ ತಂದಿದ್ದೀರೀ ಎಂದು (HD Kumaraswamy) ಕೌಂಟರ್ ಕೊಟ್ಟಿದ್ದಾರೆ.