Thursday, November 21, 2024

HD Devegowda: ಜನವರಿಯೊಳಗೆ ಕಾಂಗ್ರೇಸ್ ಸರ್ಕಾರ ಪತನ ಎಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ….!

HD Devegowda ಮುಡಾ ಸೈಟು ಹಂಚಿಕೆ ಹಗರಣ ಶುರುವಾದಾಗಿನಿಂದ ಕರ್ನಾಟಕದಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಆಗ ಪತನವಾಗುತ್ತೇ, ಈಗ ಪತನವಾಗುತ್ತದೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬೆಲ್ಲಾ ಮಾತುಗಳು ಕೇಳಿಬರುತ್ತಲೇ ಇದೆ. ಅದರಲ್ಲೂ ವಿರೋಧ ಪಕ್ಷಗಳ ನಾಯಕರು ಸಹ ಈ ಸಂಬಂಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಕೇಂದ್ರ ಸಚಿವ ವಿ.ಸೋಮಣ್ಣ ಜನವರಿಯೊಳಗೆ ರಾಜ್ಯ ಕಾಂಗ್ರೇಸ್ ಸರ್ಕಾರ ಬೀಳಲಿದೆ ಹೇಳಿದ್ದರು. ಈ ಹೇಳಿಕೆಯನ್ನು ಪುನರುಚ್ಚರಿಸಿರುವ ಮಾಜಿ ಪ್ರಧಾನಿ (HD Devegowda) ಹೆಚ್.ಡಿ.ದೇವೇಗೌಡ ಸೋಮಣ್ಣ ಹೇಳಿರುವುದು ಭವಿಷ್ಯವಲ್ಲ, ಅದು ವಾಸ್ತವ ಎಂದಿದ್ದಾರೆ.

H D Devegowda comments on State government 1

ಈ ಕುರಿತು ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡ, ಸೋಮಣ್ಣ ಅವರಿಗೆ ನನ್ನಂತೆ ಜೋತಿಷ್ಯ ಹೇಳುವ ಅಭ್ಯಾಸವಿದೆ. ಆದರೆ ಅವು ಸತ್ಯವನ್ನು ಹೇಳಿದ್ದಾರೆ. ಈ ಸರ್ಕಾರ ಬಹಳಷ್ಟು ದಿನ ಇರೋದಿಲ್ಲ. ಒಂದು ಕಾಲದಲ್ಲಿ ನಾನು ಹಾಗೂ ಯಡಿಯೂರಪ್ಪ ಕಿತ್ತಾಡಿಕೊಂಡಿದ್ದೆವು. ನಾನು ಪಾದಯಾತ್ರೆ ಮಾಡಿದ್ರೆ, ಅವರು ಮಾಡುತ್ತಿದ್ದರು. ಆದರೆ ನಾವಿಬ್ಬರು ಒಂದಾಗಿರೋದೇ ಈ ಭ್ರಷ್ಟ ಕಾಮಗ್ರೇಸ್ ಸರ್ಕಾರವನ್ನು ಕಿತ್ತೆಸಲು ಎಂದಿದ್ದಾರೆ. ಹಾಸನದ ಪ್ರಕರಣವನ್ನು ಬಳಸಿಕೊಂಡು ಇಡೀ ದೇವೇಗೌಡರ ಕುಟುಂಬ ಮುಗಿಸುವ ಹುನ್ನಾರ ಮಾಡಿದ್ದರು. ಪ್ರಧಾನಿ ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕುರಿತು ರಿಯಾಕ್ಟ್ ಆಗಿ, ಡಿಕೆಶಿ ಅವರಿಗೆ ಅವರ ಮಾತುಗಳೇ ಮುಳುವಾಗಲಿದೆ. ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು 50 ಕೋಟಿ ಹಣಕ್ಕಾಗಿ ಮಹಾನುಭಾವನೊಬ್ಬನಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.  ಆದರೆ ಚನ್ನಪಟ್ಟಣದ ಮಹಾ ಜನತೆಯ ಆರ್ಶೀವಾದದಿಂದ ಸಿಎಂ ಆಗಿದ್ದ ಕುಮಾರಸ್ವಾಮಿಗೆ ಅಂತಹ ಅನಿವಾರ್ಯತೆಯೇ ಇಲ್ಲ ಎಂದರು.

ಕಾಂಗ್ರೇಸ್ ಪಕ್ಷ ಎಂದಿಗೂ ನಂಬಿಕೆಗೆ ಅರ್ಹವಲ್ಲ. ಅವರ ಜೊತೆ ಸಹವಾಸ ಬೇಡ ಎಂದು ಕುಮಾರಸ್ವಾಮಿಗೆ ಹೇಳಿದ್ದೆ. ಆದರೆ ಅವರ ಮೇಲೆ ಒತ್ತಡ ಹಾಕಿ ಕಾಂಗ್ರೇಸ್ ಪಕ್ಷದೊಂದಿಗೆ ಅಂದು ಮೈತ್ರಿ ಸರ್ಕಾರ ರಚಿಸಲಾಗಿತ್ತು. ಇನ್ನೂ ಇದೇ ತಿಂಹಳ 24 ರಂದು ನಾನು ಹಾಗೂ ಯಡಿಯೂರಪ್ಪ ಮತ್ತೆ ಬರುತ್ತೇವೆ. ಬಂದು ಮತದಾರರಿಗೆ ಕೃತಜ್ಞತೆ ಸಲ್ಲಿಸಯತ್ತೇವೆ ಎಂದು ಹೇಳಿದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!