Viral : ಪ್ರಾಣಿಗಳಿಗೆ ಹಿಂಸೆ ನೀಡುವುದು ಶಿಕ್ಷಾರ್ಹ ಅಪರಾಧ ಎನ್ನಲಾಗುತ್ತದೆ. ಆದರೆ ಇಲ್ಲಿ ಕೆಲ ಪುಂಡರು ಕುದುರೆಯೊಂದಕ್ಕೆ ಕಿರುಕುಳ ನೀಡಿದ ಘಟನೆಯೊಂದು ನಡೆದಿದೆ. ಮದುವೆಯ ಮೆರವಣಗೆ ಸಮಯದಲ್ಲಿ ಕೆಲ ಯುವಕರು ಕುದುರೆಗೆ ಕಿರುಕುಳ ಕೊಟ್ಟಿದ್ದಾರೆ. ಕುದುರೆಯ ಮೇಲೆ ಪುಷ್ ಅಪ್ಸ್ ಗಳನ್ನು ಮಾಡಿದ್ದಲ್ಲದೇ, ಬಲವಂತವಾಗಿ ಸಿಗರೇಟ್ ಸಹ ಸೇದಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಷ ಹೊರಹಾಕಿದ್ದಾರೆ.

Viral ಆದ ವಿಡಿಯೋ, ನೆಟ್ಟಿಗರ ಆಕ್ರೋಷ
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲವು ಯುವಕರು ಕುದುರೆಯನ್ನು ನೆಲಕ್ಕೆ ಮಲಗಿಸಿ, ಅದರ ಬಾಯಿಗೆ ಸಿಗರೇಟ್ ಒತ್ತಿ ಹಿಡಿದು ಬಲವಂತವಾಗಿ ಸೇದಿಸುವಂತೆ ಮಾಡಿರುವುದು ಕಂಡುಬಂದಿದೆ. ಈ ಕೃತ್ಯ ನಡೆಯುತ್ತಿದ್ದರೂ, ಅಲ್ಲಿ ಹಾಜರಿದ್ದವರಲ್ಲಿ ಯಾರೊಬ್ಬರೂ ಇದನ್ನು ತಡೆಯಲು ಮುಂದಾಗಿಲ್ಲ. ಇಟ್ಸ್ ಜೀನ್ವಾಲ್ ಶಾಬ್ ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋಗೆ ಈಗಾಗಲೇ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಒಬ್ಬ ಯುವಕ ತನ್ನ ಬೂಟುಗಳೊಂದಿಗೆ ಕುದುರೆಯ ಮೇಲೆ ಹತ್ತಿ ಪುಷ್-ಅಪ್ಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಮದುವೆಯ ಮೆರವಣಿಗೆಯಲ್ಲಿ ಈ ದುಷ್ಕೃತ್ಯ ನಡೆಯುತ್ತಿದ್ದರೂ, ಅತಿಥಿಗಳು ನಗುತ್ತಾ, ಆನಂದಿಸುತ್ತಾ ನೋಡುತ್ತಿರುವ ದೃಶ್ಯಗಳು ನೆಟ್ಟಿಗರನ್ನು ಕೆರಳಿಸಿದೆ.
Viral ವಿಡಿಯೋ ಇಲ್ಲಿದೆ ನೋಡಿ: Click Here
ಈ ಘಟನೆಯು ಮದುವೆ ಸಮಾರಂಭವೊಂದರಲ್ಲಿ ನಡೆದಿದ್ದು, ಅಲ್ಲಿದ್ದ ಅತಿಥಿಗಳು ಈ ಕ್ರೂರ ಕೃತ್ಯಗಳನ್ನು ಪ್ರಶ್ನಿಸದೆ, ನೃತ್ಯ ಮಾಡುತ್ತಾ ಮತ್ತು ಆನಂದಿಸುತ್ತಾ ಕಾಣಿಸಿಕೊಂಡಿದ್ದಾರೆ. ಕುದುರೆಯು ಅಸಹಾಯಕವಾಗಿ ಈ ಕಿರುಕುಳಕ್ಕೆ ಬಲಿಯಾದದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ಬಳಿಕ, ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಬಳಕೆದಾರರು ಈ ಕ್ರೂರತನವನ್ನು ಖಂಡಿಸಿದ್ದಾರೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಪ್ರಾಣಿ ಪ್ರೇಮಿಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.