ಕರ್ನಾಟಕ ರಾಜ್ಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ಜೋರು ಸಮರ ನಡೆಯುತ್ತಿದೆ. ಅದರಲ್ಲೂ ಮುಡಾ, ವಾಲ್ಮೀಕಿ ಹಗರಣಗಳು ಆಡಳಿತ ಕಾಂಗ್ರೇಸ್ ಪಕ್ಷಕ್ಕೆ ಭಾರಿ ತಲೆ ನೋವಾಗಿ ಪರಿಣಮಿಸಿದೆ. ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಎಂ. ಸಿದ್ದರಾಮಯ್ಯ ರಾಜಿನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿವೆ. ಈ ನಡುವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಬಾಂಬ್ ಒಂದನ್ನು ಸಿಡಿಸಿದ್ದು, ಅದರಂತೆ ರಾಜ್ಯದಲ್ಲಿ ಅವಧಿಗೂ ಮುಂಚೆಯೇ ಚುನವಾಣೆ ಬರಲಿದೆ, ಕಾರ್ಯಕರ್ತರು ಎಲ್ಲದಕ್ಕೂ ಸಿದ್ದರಾಗಿ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಕೇಂದ್ರ ಸಚಿವ (H D Kumaraswamy) ಹೆಚ್.ಡಿ.ಕುಮಾರಸ್ವಾಮಿ ಯವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಚ್.ಡಿ.ಕೆ ಮುಂದಿನ ಚುನಾವಣೆ 2028 ರಲ್ಲೇ ಬರಬಹುದು, 2026ರಲ್ಲೆ ಬರಬಹುದು ಅಥವಾ 2025 ರಲ್ಲೇ ಬರಬಹುದು ಎಲ್ಲದಕ್ಕೂ ಸಿದ್ದರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. (H D Kumaraswamy) ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೇರು ತುಂಬಾನೆ ಗಟ್ಟಿಯಾಗಿದೆ. ಆದರೆ ಪಕ್ಷಕ್‌ಎಕ ಬಂದು ಚುನಾವಣೆ ಬಳಿಕ ಬಿಟ್ಟು ಹೋಗುತ್ತಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಅಪ್ಪಾಜಿ ಗೌಡರ ಬಳಿಕ ಇಬ್ಬರು (H D Kumaraswamy) ಸಹೋದರಿಯರಿಂದ ಭದ್ರಾವತಿ ಹಾಗೂ ಶಿವಮೊಗ್ಗದಲ್ಲಿ ಜೆಡಿಎಸ್ ಗಟ್ಟಿಯಾಗಿದೆ ಎಂದರು.
ರಾಜ್ಯ ಕಾಂಗ್ರೇಸ್ (H D Kumaraswamy) ಸರ್ಕಾರದ ಕುರಿತು ಜನರಿಗೆ ಅಸಮಾಧಾನವಿದೆ. ಹಿಂದಿದ್ದ ಸರ್ಕಾರದ ಬಗ್ಗೆ ಆರೋಪ ಮಾಡಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ರಾಜ್ಯದ ಜನರಿಗೆ ಮೋಸ ಮಾಡಿದೆ. (H D Kumaraswamy) ಅಭಿವೃದ್ದಿಯಿಲ್ಲದೇ ಜನರು ಬೇಸತ್ತಿದ್ದಾರೆ. ಮುಂದಿನ ಮೂರೂವರೆ ವರ್ಷಗಳವರೆಗೆ ಕಾಂಗ್ರೇಸ್ ಪಕ್ಷದ ಅಧಿಕಾರವಿದ್ದರೂ ಸಹ ಕಾಂಗ್ರೇಸ್ ನಾಯಕರ ತಪ್ಪಿನಿಂದ ಜನರಲ್ಲಿ ವಿಶ್ವಾಸ ಕಳೆದುಕೊಂಡಿದೆ. (H D Kumaraswamy) ಮುಂದಿನ ದಿನಗಳಲ್ಲಿ ಜೆಡಿಎಸ್ ಮಾತ್ರ ಸಮಗ್ರ ಸರ್ಕಾರ ನೀಡಲಿದೆ ಎಂಬ ವಿಶ್ವಾಸ ಹುಟ್ಟುವಂತೆ ಮಾಡಿದರೇ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಪಡೆಯಬಹುದು. ಮೈತ್ರಿಗೆ ನಮ್ಮಿಂದ ಯಾವುದೇ ಧಕ್ಕೆಯಾಗದಂತೆ ಸಂಘಟನೆಗೆ ಒತ್ತು ನೀಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.