Bihar News: ಆ ಗ್ರಾಮದಲ್ಲಿ ನಡೀತು ನೀಚ ಕೆಲಸ, ಊರಿನ ಜನತೆ ಮುಂದೆ ಗಂಡ-ಹೆಂಡತಿ ಬಟ್ಟೆಬಿಚ್ಚಿದ ಗ್ರಾಮಸ್ಥರು….!

ದಂಪತಿಯನ್ನು ಊರಿನ ಮುಂದೆ ಬಟ್ಟೆ ಬಿಚ್ಚಿಸಿ, ಅರೆನಗ್ನವಾಗಿ ಇಡೀ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದ ಅಮಾನವೀಯ ಘಟನೆಯೊಂದು ಬಿಹಾರದ ಜುಮೈನಲ್ಲಿ (Bihar News) ನಡೆದಿದೆ ಎಂದು ತಿಳಿದುಬಂದಿದೆ. ದಂಪತಿಯ ಮುಖಕ್ಕೆ ಕಪ್ಪು ಮಸಿ ಬಳಿದು, ಕೊರಳಿಗೆ ಬೂಟು-ಚಪ್ಪಲಿ ಹಾರ ಹಾಕಿ ಕೂದಲನ್ನು ಕತ್ತರಿಸಲಾಗಿದೆ. ಇಂತಹವರಿಂದ ಸಮಾಜ ಹಾಳಾಗುತ್ತಿದೆ. ಅವರಿಗೆ ಇದೆ ಸರಿಯಾದ ಶಿಕ್ಷೆ ಎಂದು ಗ್ರಾಮಸ್ಥರು ಹೇಳಿದ್ದಾರೆ ಅರೆನಗ್ನವಾಗಿ ಮೆರವಣಿಗೆ ಮಾಡಿದ್ದಾರೆ. (Bihar News) ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು 12 ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Bihar couple half nude parade 0

ಬಿಹಾರದ (Bihar News)  ಝಾಝಾ ಕ್ಷೇತ್ರದ ತಾರಾಕುರಾ ಎಂಬ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಇಡೀ ಊರಿನ ಮುಂದೆ ಗಂಡ-ಹೆಂಡತಿಯ ಬಟ್ಟೆ ಬಿಚ್ಚಿಸಿ, ಅರೆನಗ್ನವಾಗಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ದಂಪತಿಯ ಮುಖಕ್ಕೆ ಕಪ್ಪು ಮಸಿ ಬಳೆದು ಕೊರಳಿಗೆ ಬೂಟು ಚಪ್ಪಲಿ ಹಾರ ಹಾಕಿ, ಕೂದಲು ಕತ್ತರಿಸಿದ್ದಾರೆ. (Bihar News) ನಿಮ್ಮಂತವರಿಂದಲೇ ಸಮಾಜ ಹಾಳಾಗುತ್ತಿದೆ, ನಿಮಗೆ ಇದೇ ಸರಿಯಾದ  ಶಿಕ್ಷೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ತಾರಾಕುರಾ ಎಂಬ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬಳು ಅದೇ ಗ್ರಾಮದ ಯುವಕನೋರ್ವನನ್ನು ಪ್ರೀತಿಸಿ, (Bihar News) ತನ್ನ ಮೂರು ಮಕ್ಕಳನ್ನು ಬಿಟ್ಟು ಆತನ ಜೊತೆಗೆ ಕಳೆದ ಐದು ದಿನಗಳ ಹಿಂದೆ ಓಡಿ ಹೋಗಿದ್ದಳು. ಐದು ದಿನಗಳ ಬಳಿಕ ಅದೇ ಮಹಿಳೆಗೆ ಗ್ರಾಮಕ್ಕೆ ಹಿಂದಿರುಗಿ ಬಂದಾಗ ಗ್ರಾಮದಲ್ಲಿ ಪಂಚಾಯತಿ ನಡೆಸಿ ಈ ರೀತಿಯ (Bihar News) ಶಿಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ಮೊದಲಿಗೆ ಗ್ರಾಮಸ್ಥರು ಆ ಮಹಿಳೆಯ ಮನೆಯಲ್ಲಿದ್ದ (Bihar News) ಗಂಡ-ಹೆಂಡತಿಯನ್ನು ಹೊರಗೆ ಎಳೆದುಕೊಂಡು ಬಂದು ಕೂದಲು ಕತ್ತರಿಸಿದ್ದಾರೆ. ಬಳಿಕ ಇಬ್ಬರನ್ನೂ ಅರೆನಗ್ನಗೊಳಿಸಿ, ಮುಖಕ್ಕೆ ಕಪ್ಪು ಮಸಿ ಬಳೆದು, ಚಪ್ಪಲಿ ಹಾರ ಕೊರಳಿಗೆ ಹಾಕಿ ಊರು ತುಂಬೆಲ್ಲಾ ಮೆರವಣಿಗೆ ನಡೆಸಿದ್ದಾರೆ. ಈ ಘಟನೆಯನ್ನು ಗ್ರಾಮದ ಕೆಲ ಯುವಕರು ಮೊಬೈಲ್ ನಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್‍ ಮಾಡಿದ್ದಾರೆ. (Bihar News) ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು 12 ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.(Bihar News) ಘಟನೆಯ ಬಳಿಕ ಆರೋಪಿಗಳು ಗ್ರಾಮದಿಂದ ಎಸ್ಕೇಪ್ ಆಗಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *

Scroll to Top