Protest – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಹಾಗೂ ಬಸ್ ಡಿಪೋ ಆಗಬೇಕು ಎಂದು ಒತ್ತಾಯಿಸಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದು ಹೋರಾಟದ ಆರಂಭವಾಗಿದ್ದು, ಸಮಸ್ಯೆ ಬಗೆಹರಿಯದೇ ಇದ್ದರೇ ಮುಂದೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
Protest – ಅಸಮರ್ಪಕ ಸಾರಿಗೆ ವ್ಯವಸ್ಥೆಯಿಂದ ಸಮಸ್ಯೆ
ಈ ವೇಳೆ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನೆ ಹೋರಾಟ ವೇದಿಕೆ ಅದ್ಯಕ್ಷ ಜಿ.ವಿ.ಗಂಗಪ್ಪ ಮಾತನಾಡಿ, ತಾಲೂಕಿಗೆ ಕರೋನಗಿಂತ ಮುಂಚೆ ಬರುತ್ತಿದ್ದ ಹಲವು ಬಸ್ ಮಾರ್ಗಗಳನ್ನು ನಿಲ್ಲಿಸಲಾಗಿತ್ತು, ಕೋವಿಡ್ ಚಾಯೆ ಜನರಿಂದ ಮರೆಯಾಗಿ ದೈರ್ಯವಾಗಿ ಸಂಚಾರಮಾಡುತ್ತಿದ್ದರು, ನಿಂತು ಹೋಗಿರುವ ಹಲವು ಮಾರ್ಗಗಳು ಇನ್ನೂ ಕಾರ್ಯಾಚರಣೆಯಾಗದೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಮರ್ಪಕ ಸಾರಿಗೆ ಮುಂದುವರೆಸುವಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಯಾವುದೇ ರೀತಿಯ ಪ್ರಯೋಜನ ವಾಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರು ಸಂಚಾರ ಮಾಡಲು ಕಷ್ಟಕರವಾಗಿದೆ. ಈಗಾಗಲೇ ಸಾರಿಗೆ ಘಟಕ ಸ್ಥಾಪನೆ ಮಾಡಲು 10 ಎಕರೆ ಜಮೀನು ಮಂಜೂರು ಮಾಡಿಸಿ ದಶಕಗಳು ಕಳೆಯುತ್ತಿದ್ದರು, ಇಲಾಖೆಯ ನಿರ್ಲಕ್ಷ್ಯದಿಂದ ವಿಳಂಭವಾಗುತ್ತಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರಿಗೆ ಘಟನೆ ಸ್ಥಾಪನೆ ಮಾಡಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದರು.
Protest – ಜರೂರಾಗಿ ಹಲವು ಮಾರ್ಗಗಳನ್ನು ಸೌಲಭ್ಯಗಳನ್ನು ಕಲ್ಪಿಸಿ
ಅತಿ ಜರೂರಾಗಿ ಬಾಗೇಪಲ್ಲಿ ಘಟಕದ ವ್ಯಾಪ್ತಿಯ ಅನುಸೂಚಿ ಸಂಖ್ಯೆ: 51,28,13, ತುಮಕೂರು-ಪುಟ್ಟಪರ್ತಿ ಸಂಪರ್ಕ, ಗೌರೀಬಿದನೂರು-ತಿರುಪತಿ, ಪೆರೇಸಂದ್ರ-ಗುಡಿಬಂಡೆ- ವಾಟದಹೊಸಹಳ್ಳಿ ಸಂಪರ್ಕ ಸಾರಿಗೆ, ಹಿಂದೂಪುರ-ಗುಡಿಬಂಡೆ-ಚಿಕ್ಕಬಳ್ಳಾಪುರ, ಗುಡಿಬಂಡೆ-ಕದಿರಿ, ಧರ್ಮಸ್ಥಳ, ಮೈಸೂರು, ಪಾವಗಡ, ನಗರಗೆರೆ-ಎಲ್ಲೋಡು, ಜಿ.ಕೊತ್ತೂರು- ಗುಡಿಬಂಡೆ, ಬೆಂಗಳೂರಿನಿಂದ ಗುಡಿಬಂಡೆಗೆ ಅಶ್ವಮೇಧ ಸಂಜೆ 5 ಗಂಟೆಗೆ, ಗುಡಿಬಂಡೆ-ಬೆಂಗಳೂರು ಬಸ್ ಗಳು ಸೇರಿದಂತೆ ಸ್ಥಳೀಯ ಹಳ್ಳಿ, ಹೋಬಳಿಗೆ ಸಂಪರ್ಕಿಸುವ ಬಸ್ ಸೌಲಭ್ಯಗಳನ್ನು ಕಲ್ಪಿಸಿ, ಗುಡಿಬಂಡೆ-ಚಿಕ್ಕಬಳ್ಳಾಪುರ 5 ಸ್ಟೇಜ್‌ಗೆ ಮಿತಿಗೊಳಿಸುವಂತೆ ವ್ಯವಸ್ಥಾಪಕರಲ್ಲಿ ಒತ್ತಾಯಿಸಿದರು.
Protest – ರಾಜಕೀಯ ಸಮಾರಂಭಗಳಿಗೆ ನಮ್ಮ ಮಾರ್ಗಗಳ ಬಸ್ ಸೇವೆ
ಬಳಿಕ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಬಿ.ಮಂಜುನಾಥ ಮಾತನಾಡಿ, ಗುಡಿಬಂಡೆ ತಾಲೂಕು ಎಂದರೆ ಸಾರಿಗೆ ಅಧಿಕಾರಿಗೆ ಕೀಳು ಮಟ್ಟದಲ್ಲಿ ನೋಡುತ್ತಿದ್ದಾರೆ, ಇತ್ತ ಬರುವ ಸಾರಿಗೆಯನ್ನು ವಾರಾಂತ್ಯದಲ್ಲಿ, ಹಬ್ಬ ಹರಿದಿನಗಳಲ್ಲಿ, ರಾಜಕೀಯ ಸಮರಾಂಭಗಳಲ್ಲಿ ಬೇರೆಡೆಗೆ ಹಾಕಿ ನಮ್ಮ ಜನರಿಗೆ ವಿನಾಃ ಕಾರಣ ತೊಂದರೆ ಕೊಡುತ್ತಿದ್ದಾರೆ, ಕೇಳಿದರೆ ಯಾವುದೇ ರೀತಿಯ ಉತ್ತರವನ್ನು ಸಹ ನೀಡದೇ ಕಾಲಾಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Protest – ಸಾರಿಗೆ ಸಮಸ್ಯೆ ಬಗೆಹರಿಸಿ
ಇದೇ ಸಮಯದಲ್ಲಿ ನಿವೃತ್ತ ಉಪನ್ಯಾಸಕ ಬಿ.ಅಮೀರ್ ಜಾನ್ ಮಾತನಾಡಿ, ತಾಲೂಕಿನಲ್ಲಿ ದಿನೇ ದಿನೇ ಸಾರಿಗೆ ಸಮಸ್ಯೆ ಉಲ್ಬಣವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ನೌಕರರಿಗೆ, ಕೂಲಿ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ, ಅಧಿಕಾರಿಗಳು ಇನ್ನಾದರು ಹೆಚ್ಚೆತ್ತುಕೊಂಡು ಸಾರಿಗೆ ಸಮಸ್ಯೆಯನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳಬೇಕೆಂದರು.
ಅಧಿಕಾರಿಗಳಿಗೆ ಮನವಿ ಸಲ್ಲಿಕೆ
ಪ್ರತಿಭಟನೆಯಲ್ಲಿ ಡಿವೈಎಫ್ ಐ ಸಂಘಟನೆಯ ಮುಖಂಡ ಶ್ರೀನಿವಾಸ್, ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಬಸ್ ಅವ್ಯವಸ್ಥೆ ಹಾಗೂ ಸಮಸ್ಯೆಗಳ ಕುರಿತು ಆಕ್ರೋಷ ವ್ಯಕ್ತಪಡಿಸಿದರು. ಇನ್ನೂ ಪ್ರತಿಭಟನಾ ಮನವಿಯನ್ನು ಬಾಗೇಪಲ್ಲಿ ಸಾರಿಗೆ ಘಟಕ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ಗೆ ಸಲ್ಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ವೃತ್ತ ನಿರೀಕ್ಷಕ ನಯಾಜ್ ಬೇಗ್ ನೇತೃತ್ವದಲ್ಲಿ ಸೂಕ್ತ ಬಂದೋ ಬಸ್ತು ಕಲ್ಪಿಸಲಾಗಿತ್ತು.
Read this also: ಸಮರ್ಪಕ ಸಾರಿಗೆ ವ್ಯವಸ್ಥೆ ಹಾಗೂ ಬಸ್ ಡಿಪೋ ನಿರ್ಮಾಣಕ್ಕಾಗಿ ಆಗ್ರಹಿಸಿ ಜು.26 ರಸ್ತೆ ತಡೆ ನಡೆಸಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಹಾಜರಿದ್ದವರು
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮುಖಂಡರಾದ ನಂಜುಂಡಪ್ಪ, ವಿಕಾಸ್, ನಯಾಜ್, ಜಗನ್ನಾಥ್, ಎಮ್.ಸಿ.ಚಿಕ್ಕನರಸಿಂಹಪ್ಪ, ಚಿರಂಜೀವಿ, ಕದಿರಪ್ಪ, ನವೀನ್ ಕುಮಾರ್, ಪ್ರೆಸ್ ಸುಬ್ಬರಾಯಪ್ಪ, ಶ್ರೀನಿವಾಸ್ ಯಾದವ್, ಡಿ.ವೈ.ಎಫ್.ಐ ಶ್ರೀನಿವಾಸ್, ವರ್ಲಕೊಂಡ ರಾಜು, ನಾರಾಯಣಸ್ವಾಮಿ, ನರಸಿಂಹಪ್ಪ, ಶಂಕರ್ ಸೇರಿದಂತೆ ಹಲವರಿದ್ದರು.