Marriage – ಸೋಶಿಯಲ್ ಮೀಡಿಯಾದಲ್ಲಿ (Social Media) ಮದುವೆಗೆ ಸಂಬಂಧಿಸಿದ ಅದೆಷ್ಟೋ ವಿಚಿತ್ರ, ವಿನೂತನ ಘಟನೆಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದು ವೈರಲ್ ಆಗಿದೆ. ಬಿಹಾರದ ಗೋಪಾಲ್ ಗಂಜ್‌ನಲ್ಲಿ (Gopalganj) ಮದುವೆ ನಡೆಯುತ್ತಿದ್ದ ಜಾಗದಿಂದಲೇ ವರ (Groom Kidnapped) ಕಿಡ್ನಾಪ್ ಆಗಿದ್ದು, ಕುಟುಂಬಸ್ಥರು ಮತ್ತು ಬಂಧುಗಳು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.
Marriage – ಏನಿದು ಘಟನೆ?
ಮೇ 24ರ ಶನಿವಾರ ತಡರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಡ್ಯಾನ್ಸರ್‌ಗಳು (Dancers) ವರನನ್ನು ಅಪಹರಿಸಿದ್ದಾರೆ. ಡ್ಯಾನ್ಸ್ ಮಾಡುತ್ತಿದ್ದಾಗ ವರನ ಮನೆಯವರು ಮತ್ತು ಡ್ಯಾನ್ಸರ್‌ಗಳ ನಡುವೆ ಜಗಳ ಶುರುವಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ಪರಸ್ಪರ ಹಲ್ಲೆ ನಡೆದಿದೆ. ಈ ಘರ್ಷಣೆಯಲ್ಲಿ ವಧು (Bride) ಮತ್ತು ಆಕೆಯ ತಾಯಿ ಸೇರಿದಂತೆ ಹಲವು ಮಹಿಳೆಯರಿಗೆ ಗಾಯಗಳಾಗಿವೆ.
Read this also : Marriage : ಮದುವೆ ಮಂಟಪದಲ್ಲಿ ಶಾಕ್: ತಾಳಿ ಕಟ್ಟುವಾಗ ‘ನನಗೆ ಈ ಮದುವೆ ಬೇಡ’ ಎಂದ ವಧು, ಆಘಾತಕ್ಕೊಳಗಾದ ವರ!
ವರನ ಅಪಹರಣ, ನಗದು-ಆಭರಣ ಕಳವು!
ಕೋಪಗೊಂಡ ಡ್ಯಾನ್ಸರ್‌ಗಳು ವರನ ಮನೆಗೆ ನುಗ್ಗಿ, ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ದುಷ್ಕರ್ಮಿಗಳು, ಮಂಟಪದಲ್ಲಿ ಕುಳಿತಿದ್ದ ವರನನ್ನು ಎಳೆದಾಡಿದ್ದಾರೆ. ವರನಿಗೆ ಥಳಿಸಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕಿಡ್ನಾಪ್ ಮಾಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ: ವರನ ರಕ್ಷಣೆ!
ಘಟನೆ ನಡೆದ ಕೂಡಲೇ ಪೊಲೀಸರಿಗೆ (Police) ಮಾಹಿತಿ ನೀಡಲಾಗಿದೆ. ಸುಮಾರು ಏಳು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಪೊಲೀಸರು, ಡ್ಯಾನ್ಸರ್‌ಗಳ ಸುಳಿವನ್ನು ಪತ್ತೆ ಮಾಡಿದ್ದಾರೆ. ಸಕಾಲಕ್ಕೆ ಕಾರ್ಯಪ್ರವೃತ್ತರಾದ ಪೊಲೀಸರು ವರನನ್ನು ಡ್ಯಾನ್ಸರ್‌ಗಳಿಂದ ಯಶಸ್ವಿಯಾಗಿ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಬಂಧನಗಳ ಬಗ್ಗೆ ಕಾಯಲಾಗುತ್ತಿದೆ. ಮದುವೆ ಸಮಾರಂಭದಲ್ಲಿ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಆಘಾತಕಾರಿ.