ಇಂದಿನ ವೇಗದ ಜಗತ್ತಿನಲ್ಲಿ ಮಾನವ ಸಂಬಂಧಗಳ ಅರ್ಥವೇ ಬದಲಾಗುತ್ತಿದೆ. ಸೋಶಿಯಲ್ ಮೀಡಿಯಾ ಅಥವಾ ಆನ್‌ಲೈನ್ ಮೂಲಕ ಪರಿಚಯವಾಗಿ, ಪ್ರೀತಿ ಎನ್ನುತ್ತಾ ಒಂದೇ ಸೂರಿನಡಿ ವಾಸಿಸುವುದು (Live-in Relationship) ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿದೆ. ಆದರೆ, ಪ್ರೀತಿಯಿಂದ ಆರಂಭವಾದ ಈ ಸಂಬಂಧಗಳು ಹಲವು ಬಾರಿ ಭಯಾನಕ ಅಂತ್ಯವನ್ನು ಕಾಣುತ್ತಿರುವುದು ಆತಂಕಕಾರಿ ವಿಚಾರ. ಅಂತಹದ್ದೇ ಒಂದು (Manipur Woman) ಬೆಚ್ಚಿಬೀಳಿಸುವ ಘಟನೆ ಉತ್ತರ ಪ್ರದೇಶದ ಗ್ರೇಟರ್ (Greater Noida) ನೋಯ್ಡಾದಲ್ಲಿ ನಡೆದಿದೆ.

Greater Noida – ಪ್ರೀತಿ ಶುರುವಾಗಿದ್ದು ಎಲ್ಲಿ?
ಉತ್ತರ ಪ್ರದೇಶ ರಾಜ್ಯದ ಗ್ರೇಟರ್ ನೋಯ್ಡಾದ ‘ನಾಲೆಡ್ಜ್ ಪಾರ್ಕ್’ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್-150ರಲ್ಲಿ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಮಣಿಪುರ ಮೂಲದ ಯುವತಿ ಮತ್ತು ದಕ್ಷಿಣ ಕೊರಿಯಾದ ಯುವಕ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಆರಂಭದಲ್ಲಿ ಎಲ್ಲರಂತೆ ಸುಂದರವಾಗಿದ್ದ ಇವರ ಬದುಕು, ಕ್ಷಣಾರ್ಧದಲ್ಲಿ ಸ್ಮಶಾನ ಸದೃಶವಾಯಿತು.
ಜಗಳಕ್ಕೆ ಬಲಿಯಾದ ಜೀವ
ಸಿನಿಮೀಯ ಮಾದರಿಯಲ್ಲಿದ್ದ ಈ ಪ್ರೇಮ ಕಥೆಯಲ್ಲಿ ಇತ್ತೀಚೆಗೆ ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದವು. ಅದು ದೊಡ್ಡದಾಗಿ ಬೆಳೆದು ಇಬ್ಬರೂ ಬೇರೆಯಾಗುವ ಹಂತಕ್ಕೆ ತಲುಪಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಜೋರು ವಾಗ್ವಾದ ನಡೆದಿದೆ. ಈ ವೇಳೆ ಆವೇಶಕ್ಕೊಳಗಾದ ಯುವತಿ, ತಾನು (Greater Noida) ಪ್ರೀತಿಸಿದ ಯುವಕನಿಗೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾಳೆ.
ಇಲ್ಲಿ ಟ್ವಿಸ್ಟ್ ಅಂದರೆ, ಚಾಕುವಿನಿಂದ ಇರಿದ ನಂತರ ಆತ ರಕ್ತದ ಮಡುವಿನಲ್ಲಿ ಒದ್ದಾಡುವುದನ್ನು ಕಂಡು ಆತಂಕಗೊಂಡ ಪ್ರೇಯಸಿ, ತಾನೇ ಸ್ವತಃ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆ ಯುವಕ ಕೊನೆಯುಸಿರೆಳೆದಿದ್ದಾನೆ. Read this also : ಮುಂಬೈನಲ್ಲಿ (Mumbai) ಬೆಚ್ಚಿಬೀಳಿಸುವ ಘಟನೆ: ಹೊಸ ವರ್ಷದ ಪಾರ್ಟಿಗೆ ಕರೆದು ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಯುವತಿ!

ಪೋಲಿಸ್ ತನಿಖೆ ಚುರುಕು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಈ ಜೋಡಿಯ ಪರಿಚಯ ಎಲ್ಲಿ ಆಯ್ತು? ಅಸಲಿಗೆ ಕೊಲೆಗೆ ಕಾರಣವಾದ ಆ (Greater Noida) ತಕ್ಷಣದ ಪ್ರಚೋದನೆ ಏನು? ಎಂಬ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಘಟನೆ ಇಡೀ ಪ್ರದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
