ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆ ಕೇಳಿದ್ದೀರಾ. ಆದರೆ ಇಲ್ಲಿ ಗಂಡ-ಹೆಂಡತಿಯ ಜಗಳಕ್ಕೆ ‘ಮೊಬೈಲ್ ಫೋನ್’ ವಿಲನ್ ಆಗಿದೆ. ಅಕ್ರಮ ಸಂಬಂಧದ ಗುಮಾನಿಯಿಂದ ಗಂಡನೊಬ್ಬ ತನ್ನ ಹೆಂಡತಿಯನ್ನೇ ಕೊಂದು, ಯಾರಿಗೂ ಗೊತ್ತಾಗದಂತೆ ನಾಟಕವಾಡಿದ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಸಿನಿಮಾವನ್ನೇ ಮೀರಿಸುವಂತಿರುವ ಈ ಕ್ರೈಮ್ (Crime News) ಸ್ಟೋರಿ ಓದಿ.

Crime – ಅಸಲಿಗೆ ನಡೆದಿದ್ದೇನು?
ಅರ್ಜುನ್ ಎಂಬ ವ್ಯಕ್ತಿ ಹೊಟ್ಟೆಪಾಡಿಗಾಗಿ ಲೂಧಿಯಾನದಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಇತ್ತೀಚೆಗೆ ಅಂದರೆ ಡಿಸೆಂಬರ್ 21 ರಂದು ಕೆಲಸ ಮುಗಿಸಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ತನ್ನ ಮನೆಗೆ ಮರಳಿದ್ದನು. ಮನೆಯಲ್ಲಿ ಅವನ ಹೆಂಡತಿ ಖುಷ್ಬೂ ಇದ್ದಳು. ಅರ್ಜುನ್ ಮನೆಗೆ ಬಂದ ಸಮಯದಲ್ಲಿ, ಅವನ ಹೆಂಡತಿ ಖುಷ್ಬೂ ಮನೆಯಲ್ಲಿ ಒಬ್ಬಳೇ ಇದ್ದು, (Crime News) ಯಾರಿಗೂ ತಿಳಿಯದಂತೆ ರಹಸ್ಯವಾಗಿ ಮೊಬೈಲ್ ಫೋನ್ ಬಳಸುತ್ತಿದ್ದಳು. ಗಂಡನನ್ನು ನೋಡಿದ ಕೂಡಲೇ ಕಕ್ಕಾಬಿಕ್ಕಿಯಾದ ಆಕೆ, ತಕ್ಷಣವೇ ಫೋನ್ ಅನ್ನು ಬಚ್ಚಿಟ್ಟಿದ್ದಾಳೆ. ಇದನ್ನು ಗಮನಿಸಿದ ಅರ್ಜುನ್, “ಯಾರದು ಫೋನ್? ಯಾಕೆ ಬಚ್ಚಿಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದಾನೆ. ಆದರೆ ಖುಷ್ಬೂ, “ನನ್ನ ಹತ್ತಿರ ಫೋನೇ ಇಲ್ಲ, ನಾನು ಬಳಸುತ್ತಿಲ್ಲ” ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾಳೆ.
ಅನುಮಾನವೇ ಹೆಮ್ಮರವಾಯ್ತು!
ಹೆಂಡತಿಯ ವರ್ತನೆಯಿಂದ ಅರ್ಜುನ್‌ಗೆ ಅನುಮಾನ ಬಲವಾಯಿತು. ಇಬ್ಬರ ನಡುವೆ ದೊಡ್ಡ ಜಗಳವೇ ನಡೆಯಿತು. ಕೋಪದ ಕೈಗೆ ಬುದ್ಧಿ ಕೊಟ್ಟ ಅರ್ಜುನ್, ಕ್ಷಣಾರ್ಧದಲ್ಲಿ ಹೆಂಡತಿಯ ಕುತ್ತಿಗೆ ಹಿಸುಕಿ ಕೊಂದುಬಿಟ್ಟಿದ್ದಾನೆ! ಅಷ್ಟೇ ಅಲ್ಲ, ಕೊಲೆ ಮಾಡಿದ ವಿಷಯ ಯಾರಿಗೂ ತಿಳಿಯಬಾರದೆಂದು, ಮನೆಯ ಹಿತ್ತಲಲ್ಲಿ ಗುಂಡಿ ಅಗೆದು ಆಕೆಯ ಶವವನ್ನು (Crime News) ಹೂತುಹಾಕಿದ್ದಾನೆ.
ಕಟ್ ಮಾಡಿದ್ರೆ… ‘ದೃಶ್ಯಂ’ ಸ್ಟೈಲ್ ಡ್ರಾಮಾ!
ಬೆಳಗಾಗುತ್ತಲೇ ಅರ್ಜುನ್ ತನ್ನ ನಾಟಕ ಶುರು ಮಾಡಿದ್ದ. “ನನ್ನ ಹೆಂಡತಿ ಖುಷ್ಬೂ ಕಾಣಿಸುತ್ತಿಲ್ಲ, ಅವಳು ಯಾರಿಗೂ ಹೇಳದೆ ಎಲ್ಲಿಗೋ ಹೋಗಿದ್ದಾಳೆ” ಎಂದು ಊರವರನ್ನೆಲ್ಲ ನಂಬಿಸಲು ನೋಡಿದ. ದಿನಗಳು ಕಳೆದರೂ ಖುಷ್ಬೂ ಪತ್ತೆಯಾಗದಿದ್ದಾಗ, ಆಕೆಯ ತಂದೆಗೆ (ಅರ್ಜುನ್ ಮಾವ) ಅಳಿಯನ ಮೇಲೆ ಅನುಮಾನ ಬಂತು. ಕೂಡಲೇ ಅವರು ಪೊಲೀಸ್ ಠಾಣೆಗೆ (Crime News) ಹೋಗಿ, “ನನ್ನ ಮಗಳನ್ನು ಅಳಿಯನೇ ಕೊಂದು ನಾಪತ್ತೆ ಮಾಡಿದ್ದಾನೆ” ಎಂದು ದೂರು ನೀಡಿದರು. Read this also : ಮಸಾಜ್ ಪಾರ್ಲರ್ ಕೆಲಸ ಬೇಡ ಅಂದ್ರೂ ಕೇಳಲಿಲ್ಲ ಅಂತ ಹೆಂಡ್ತಿಯ ಕುತ್ತಿಗೆ ಸೀಳಿದ ಗಂಡ!
ಪೊಲೀಸರ ಎಂಟ್ರಿ ಮತ್ತು ಟ್ವಿಸ್ಟ್!
ದೂರು ದಾಖಲಿಸಿಕೊಂಡ ಪೊಲೀಸರು ಅರ್ಜುನ್‌ನನ್ನು ವಶಕ್ಕೆ ಪಡೆದು ವಿಚಾರಿಸಿದರು. ಆರಂಭದಲ್ಲಿ ಅರ್ಜುನ್, “ನನ್ನ ಹೆಂಡತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಭಯದಿಂದ ನಾನು ಅವಳ ಶವವನ್ನು ನದಿಗೆ (Crime News) ಎಸೆದೆ” ಎಂದು ಕಥೆ ಕಟ್ಟಿದ.

ಪೊಲೀಸರು ಅವನನ್ನು ಕರೆದುಕೊಂಡು ನದಿ ತೀರಕ್ಕೆ ಹೋದರು. ಸುಮಾರು ಎರಡು ಗಂಟೆಗಳ ಕಾಲ ನದಿಯಲ್ಲಿ ಹುಡುಕಾಟ ನಡೆಸಿದರೂ ಶವ ಸಿಗಲಿಲ್ಲ. ಆಗ ಪೊಲೀಸರಿಗೆ ಅರ್ಥವಾಯಿತು, ಇವನು ದಾರಿ (Crime News)ತಪ್ಪಿಸುತ್ತಿದ್ದಾನೆ ಎಂದು. ಠಾಣೆಗೆ ಕರೆತಂದು ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ (ಸ್ವಲ್ಪ ಡೋಸ್ ಏರಿಸಿ!) ವಿಚಾರಿಸಿದಾಗ ಅರ್ಜುನ್ ಅಸಲಿ ಸತ್ಯ ಬಾಯಿಬಿಟ್ಟಿದ್ದಾನೆ.
ಕ್ಲೈಮ್ಯಾಕ್ಸ್:
ಅರ್ಜುನ್ ನೀಡಿದ ಮಾಹಿತಿಯ ಮೇರೆಗೆ ಮನೆಯ ಹಿತ್ತಲಲ್ಲಿ ಅಗೆದು ನೋಡಿದಾಗ ಖುಷ್ಬೂಳ ಮೃತದೇಹ ಪತ್ತೆಯಾಗಿದೆ. “ಅಕ್ರಮ ಸಂಬಂಧದ ಶಂಕೆಯಿಂದ ಈ ಕೊಲೆ ನಡೆದಿದೆ. ಇವರಿಗೆ ಮದುವೆಯಾಗಿ ಎರಡು ವರ್ಷಗಳಾಗಿದ್ದು, ಮಕ್ಕಳಿರಲಿಲ್ಲ” ಎಂದು ಗೋರಖ್‌ಪುರ ಸರ್ಕಲ್ ಆಫೀಸರ್ ಶಿಲ್ಪಾ ಕುಮಾರಿ ತಿಳಿಸಿದ್ದಾರೆ. ಸದ್ಯ ಆರೋಪಿ ಅರ್ಜುನ್ ಅಂದರ್ ಆಗಿದ್ದಾನೆ.
